ಶಿವಮೊಗ್ಗ ಲೈವ್.ಕಾಂ | SHIMOGA | 3 ಅಕ್ಟೋಬರ್ 2019
ನಗರದ ಬೆಕ್ಕಿನ ಕಲ್ಮಠ ಬಳಿ ಇರುವ 148 ವರ್ಷದ ಸೇತುವೆ ಮೇಲೆ ಭಾರಿ ವಾಹನಗಳನ್ನು ಅನಿರ್ದಿಷ್ಟಾವಧಿವರೆಗೆ ನಿರ್ಭಂಧಿಸಲಾಗಿದೆ. ಕಾರು ಮತ್ತು ಬೈಕ್’ಗಳು ಮಾತ್ರ ಇನ್ಮುಂದೆ ೀ ಸೇತುವೆ ಮೇಲೆ ಸಂಚರಿಸಬಹುದು. ಇನ್ನೆರಡು ದಿನದಲ್ಲಿ ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ.
ಭಾರಿ ಮಳೆಯಿಂದ ಲಕ್ಷ ಕ್ಯೂಸೆಕ್’ಗು ಅಧಿಕ ನೀರು ತುಂಗಾ ನದಿಯಲ್ಲಿ ಹರಿದು ಹೋದ ಕಾರಣ ಸೇತುವೆ ಕೊನೆ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ನಂತರ ವಾಹನ ಸಂಚಾರ ನಿಷೇಧಿಸಲಾಗಿತ್ತು. ರಸ್ತೆಯನ್ನು ರಿಪೇರಿ ಮಾಡಲಾಗಿದ್ದು, ಸೇತುವೆ ತಡೆಗೋಡೆಯನ್ನು ಮರು ನಿರ್ಮಾಣ ಮಾಡಲಾಗಿದೆ. ಎರಡು ತಿಂಗಳಿನಿಂದ ಈ ಸೇತುವೆ ಸಂಪರ್ಕ ಇಲ್ಲದೇ ಹೊಸ ಸೇತುವೆ ಮೇಲೆ ಸಂಚಾರ ದಟ್ಟಣೆಯಿಂದ ಕೂಡಿತ್ತು. ಈಗ ಬಸ್, ಲಾರಿ, ಭಾರೀ ವಾಹನಗಳು ಹೊಸ ಸೇತುವೆ ಮೇಲೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಕನಿಷ್ಠ ಒಂದು ವರ್ಷ ನಿರ್ಬಂಧ
ಇನ್ನೆರಡು ದಿನಗಳಲ್ಲಿ ತಾತ್ಕಾಲಿಕ ಕಾಮಗಾರಿ ಮುಗಿಯಲಿದೆ. ನಂತರ ಕಾರು, ಬೈಕ್’ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. 1.50 ಕೋಟಿ ವೆಚ್ಚದ ಶಾಶ್ವತ ದುರಸ್ತಿ ಕಾಮಗಾರಿಯನ್ನು ನದಿಯಲ್ಲಿ ನೀರು ಕಡಿಮೆಯಾದ ನಂತರ ಆರಂಭಿಸಲಾಗುವುದು. ಆದಷ್ಟು ಬೇಗ ಎಲ್ಲ ವಾಹನಗಳಿಗೆ ಅವಕಾಶ ಸಿಗಲಿದೆ ಅನ್ನುತ್ತಾರೆ ಲೋಕೋಪಯೋಗಿ ಇಲಾಖೆ ಎಇಇ ಸಂಪತ್.
ಹಳೇ ಸೇತುವೆಯನ್ನು ತಳಮಟ್ಟದಿಂದ ಬಿಗಿಗೊಳಿಸಲು ಯೋಜನೆ ತಯಾರಾಗಿದ್ದು ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಪೂರ್ಣ ಇಳಿದ ಮೇಲೆ ಕಾಮಗಾರಿ ಆರಂಭವಾಗಲಿದೆ. ಹಾಗಾಗಿ ಕನಿಷ್ಠ ಒಂದು ವರ್ಷವಾದರೂ ಭಾರಿ ವಾಹನಗಳ ಸಂಚಾರ ನಿರ್ಬಂರ್ಧಗೊಳ್ಳಲಿದೆ ಎನ್ನುತ್ತಾರೆ ಅಧಿಕಾರಿಗಳು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]