ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 16 ಡಿಸೆಂಬರ್ 2019
ಮೂರೂವರೆ ದಶಕಗಳಿಂದ ಗ್ರಹಣ ಹಿಡಿದಿದ್ದ ಶಿವಮೊಗ್ಗ ರಿಂಗ್ ರಸ್ತೆಯನ್ನು ಪೂರ್ಣಗೊಳಿಸುವ ಸಮಯ ಈಗ ಬಂದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
1980ರ ದಶಕದ ಕಡೆಯಲ್ಲಿಚಾಲನೆಗೊಂಡ ಹೊರ ವರ್ತುಲ ರಸ್ತೆ ನಗರದ ಜನತೆ ಪಾಲಿಗೆ ಕನಸಾಗಿಯೆ ಉಳಿದಿತ್ತು. ಬೆಂಗಳೂರು ಬಳಿಕ ರಾಜ್ಯದಲ್ಲಿ ಶರವೇಗದಲ್ಲಿಬೆಳೆಯುತ್ತಿರುವ ಶಿವಮೊಗ್ಗಕ್ಕೆ ಮತ್ತೊಂದು ರಿಂಗ್ ರಸ್ತೆ ನಿರ್ಮಿಸುವ ಪ್ರಕ್ರಿಯೆಗಳು ಚಾಲನೆಗೊಂಡ ಬಳಿಕ ಹಳೆ ವರ್ತುಲಕ್ಕೆ ಗ್ರಹಣ ಮೋಕ್ಷದ ಸುಯೋಗ ಬಂದಿದೆ.
ರೈಲು ನಿಲ್ದಾಣದ ಬಳಿ ಜಾಗ ಬಿಟ್ಟುಕೊಡಲು ಒಪ್ಪದ ರೈಲ್ವೆ ಇಲಾಖೆಯನ್ನು ಕಳೆದ ಐದಾರು ವರ್ಷಗಳಿಂದ ನಿರಂತರ ಸಂಧಾನ ಸಭೆ ನಡೆಸಿದ ರಾಜ್ಯ ಸರ್ಕಾರ ಕಡೆಗೂ ಭೂಮಿಯನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರೈಲ್ವೆ ಇಲಾಖೆಯು ಶಿವಮೊಗ್ಗದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಿದೆ. ಅದಕ್ಕಾಗಿ ಬಹಳಷ್ಟು ಭೂಮಿ ಬೇಕಾಗಿರುವುದರಿಂದ ಮುಂದೆ ರಾಜ್ಯ ಸರಕಾರ ಅದಕ್ಕೆ ಅಡ್ಡಿಯಾಗಬಹುದೆಂಬ ಕಾರಣಕ್ಕೆ ವರ್ತುಲ ರಸ್ತೆಗೆ ಭೂಮಿ ಬಿಟ್ಟುಕೊಟ್ಟಿದೆ.
ಅನುದಾನಕ್ಕೆ ಅನುಮೋದನೆ
ವಿನಾಯಕನಗರದ ರೋಟರಿ ರಕ್ತ ನಿಧಿ ಕೇಂದ್ರದ ಮುಂಭಾಗದಲ್ಲಿ100 ಅಡಿ ರಸ್ತೆಯಿಂದ ಸರ್ವಜ್ಞ(ಕೆಇಬಿ) ವೃತ್ತದವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರ 20 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದೆ. 100 ಅಡಿ ಅಗಲ ಮತ್ತು 750 ಮೀ. ಉದ್ದದ ರಸ್ತೆ ನಿರ್ಮಾಣದ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಿದೆ.
ರಾಜ್ಯದ 2ನೇ ರಿಂಗ್ ರೋಡ್
1986-87ರಲ್ಲಿರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಹಿಂದಿನ ಯೋಜನಾ ಪ್ರಾಧಿಕಾರದ ಮೂಲಕ ಶಿವಮೊಗ್ಗಕ್ಕೆ ಹೊರ ವರ್ತುಲ ರಸ್ತೆ ನಿರ್ಮಿಸುವ ಮಾಸ್ಟರ್ ಪ್ಲಾನ್ ರೂಪಿಸಲಾಗಿತ್ತು. ವಿಶೇಷವೆಂದರೆ ಬೆಂಗಳೂರು ಬಳಿಕ ಇದು ರಾಜ್ಯದ 2ನೇ ರಿಂಗ್ ರೋಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಮೂರು ವರ್ಷದಿಂದ ಕುಂಟುತ್ತಿದ್ದ ಯೋಜನೆಗೆ ಬಂಗಾರಪ್ಪ ಅವರು ಮುಖ್ಯಮಂತ್ರಿಯಾದಾಗ ಚುರುಕು ನೀಡಲಾಯಿತು.
ಯೋಜನೆಯನ್ನು ನಗರಾಭಿವೃದ್ಧಿ ಪ್ರಾಧಿಕಾರ(ಸೂಡಾ)ಕ್ಕೆ ನೀಡಿ ಹೊಸ ಬಡಾವಣೆಗಳಲ್ಲಿನ ರಸ್ತೆಗಳನ್ನೇ ಬಳಸಿಕೊಂಡು ಒಂದಕ್ಕೊಂದು ಸಂಪರ್ಕ ಏರ್ಪಡಿಸಿ ನೂರು ಮೀಟರ್ ಅಗಲದ ಹೊರ ವರ್ತುಲ ರಸ್ತೆ ನಿರ್ಮಿಸುವ ಯೋಜನೆ ರೂಪಿಸಲಾಯಿತು. 100 ಮೀ. ಅಗಲದ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಭೂ ಸ್ವಾಧೀನ ಮಾಡಿಕೊಂಡು ಹಂತ ಹಂತವಾಗಿ ರಸ್ತೆ ನಿರ್ಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿತ್ತು. ತುಂಗಾ ನಗರದ ಬಳಿ ಅದಕ್ಕಾಗಿ 1995ರಲ್ಲಿತೆಂಗಿನ ತೋಟದ ಭೂಮಿಯನ್ನೇ ಸ್ವಾಧೀನ ಮಾಡಿಕೊಳ್ಳಲಾಯಿತು.
ರೈಲ್ವೆ ಇಲಾಖೆ ತಡೆ
ಎಲ್ಲವೂ ಅಂದುಕೊಂಡಂತೆ ನಡೆದರೂ ರೈಲು ನಿಲ್ದಾಣದ ಬಳಿ ರೈಲ್ವೆ ಇಲಾಖೆಯು ಭೂಮಿ ಬಿಟ್ಟುಕೊಡಲು ಒಪ್ಪಲಿಲ್ಲ. ನಿಲ್ದಾಣಕ್ಕೆ ಕೇವಲ 100 ಅಡಿ ಅಂತರದಲ್ಲಿಭಾರಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಲ್ಲಿಸಮಸ್ಯೆ ಎದುರಾಗುತ್ತದೆ ಎಂಬ ಕಾರಣ ನೀಡಿ ತಡೆಯೊಡ್ಡಿತು. ಹೀಗಾಗಿ ವಿನಾಯಕ ನಗರದ ಬಳಿ ರಿಂಗ್ ರಸ್ತೆ ಕಾಮಗಾರಿ ನಿಂತು ಹೋಯಿತು.
ವರ್ತುಲ ರಸ್ತೆ ಪೂರ್ಣವಾಗದ ಕಾರಣ ಭಾರಿ ವಾಹನಗಳು ನಗರದೊಳಗೆ ಪ್ರವೇಶಿಸುವುದನ್ನು ತಡೆಯುವುದು ಅಸಾಧ್ಯವಾಯಿತು. ಕೆಲ ಪ್ರಮುಖ ಉತ್ಸವಗಳು, ಸಮಾರಂಭಗಳ ಸಂದರ್ಭದಲ್ಲಿಅನಿವಾರ್ಯವಾಗಿ ಭಾರಿ ವಾಹನಗಳ ಸಂಚಾರ ತಡೆಯಲಾಗುತ್ತದೆ. ಆಗ ಶಿಕಾರಿಪುರ- ಭದ್ರಾವತಿ, ಶಿಕಾರಿಪುರ-ಹೊನ್ನಾಳಿ ರಸ್ತೆ, ಶಿಕಾರಿಪುರ- ಚನ್ನಗಿರಿ ಕಡೆಗೆ ಸಂಚರಿಸಬೇಕಾದ ಭಾರಿ ವಾಹನಗಳು ಆಲ್ಕೊಳ, ಗೋಪಾಳ, ನ್ಯೂಮಂಡ್ಲಿ, ಬೈಪಾಸ್, ಎಂಆರ್‌ಎಸ್, ವಿದ್ಯಾನಗರದ ರಸ್ತೆ ಮಾರ್ಗವನ್ನು ಬಳಸುತ್ತಿವೆ.
ರೈಲ್ವೆ ಇಲಾಖೆಯ ಮನೆಗಳ ತೆರವು
ವರ್ತಲ ರಸ್ತೆ ಉದ್ದೇಶಿತ ಜಾಗದಲ್ಲಿದ್ದ ರೈಲ್ವೆ ಇಲಾಖೆಯ ಶಿಥಿಲಗೊಂಡು ಖಾಲಿ ಬಿದ್ದಿದ್ದ ಕೆಲ ಮನೆಗಳನ್ನು ಈಗಾಗಲೆ ಕಡವಿ ಭೂಮಿ ಸಮತಟ್ಟುಗೊಳಿಸಲಾಗಿದೆ. ಕೆಲ ಮನೆಗಳಲ್ಲಿನೌಕರರು ಇನ್ನೂ ವಾಸ ಮಾಡುತ್ತಿರುವುದರಿಂದ ಹಂತ ಹಂತವಾಗಿ ಮನೆಗಳನ್ನು ಖಾಲಿ ಮಾಡಿಸಿ ತೆರವುಗೊಳಿಸುವ ಭರವಸೆ ನೀಡಿದೆ. ಇದರ ಮಧ್ಯೆ ಲೋಕೋಪಯೋಗಿ ಇಲಾಖೆಯು ಸಂಪರ್ಕ ರಸ್ತೆ ನಿರ್ಮಾಣಕ್ಕೆ ಇನ್ನೊಂದು ತಿಂಗಳಲ್ಲಿಟೆಂಡರ್ ಕರೆಯಲು ಪ್ರಕ್ರಿಯೆಗಳನ್ನು ಕೈಗೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿಇನ್ನೊಂದು ವರ್ಷದೊಳಗೆ ವರ್ತುಲ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Shimoga Ring Road to complete in One Year. As the railway department has agreed to give the land and demolish the houses.