ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | KARNATAKA TOP 5 NEWS | 10 ಜೂನ್ 2021
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
NEWS 1 – ಪೆಟ್ರೊಲ್ ಬಂಕ್ ಮುಂದೆ 100 ನಾಟೌಟ್
ಪೆಟ್ರೋಲ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಐದು ಸಾವಿರ ಪೆಟ್ರೋಲ್ ಬಂಕ್‍ಗಳ ಮುಂದೆ ‘100 ನಾಟೌಟ್’ ಅಭಿಯಾನ ಆರಂಭಿಸುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಜೂನ್ 11ರಂದು ಜಿಲ್ಲಾ ಕೇಂದ್ರ, 12ರಂದು ತಾಲೂಕು ಕೇಂದ್ರ, 13ರಂದು ಜಿಲ್ಲಾ ಪಂಚಾಯಿತಿ ಮತ್ತು ಹೋಬಳಿ, 14ರಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಟ್ರೋಲ್ ಬಂಕುಗಳು, 15ರಂದು ಪ್ರಮುಖ ಪೆಟ್ರೋಲ್ ಬಂಕ್‍ಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
NEWS 2 – ಗೆಸ್ಟ್ ಹೌಸ್‍ಗಾಗಿ ಗಲಾಟೆ
ಬೆಂಗಳೂರಿನ ಸದಾಶಿವನಗರದ ಅತಿಥಿಗೃಹ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಬೆಂಬಲಿಗರ ನಡುವೆ ಗಲಾಟೆಯಾಗಿದೆ. ಗಲಾಟೆ ಕುರಿತು ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಸಿನಿಮಾ ಕ್ಷೇತ್ರದ ಕೆಲವರು ಅಲ್ಲಿದ್ದರು. ಅವರೆಲ್ಲ ಊರಿಗೆ ಹೋಗಿದ್ದರು. ಅವರ ಸಾಮಗ್ರಿ ತೆರವಿಗೆ ಭೋಜೇಗೌಡರಿಗೆ ಹೇಳಿದ್ದೆ. ಸಾಮಾಗ್ರಿ ತರಲು ಸಿನಿಮಾದವರು ಹೋಗಿರಬೇಕು. ಗಲಾಟೆ ಮಾಡುವ ಉದ್ದೇಶ ನನಗಿಲ್ಲ ಎಂದಿದ್ದಾರೆ. ಇತ್ತ ಜಮೀರ್ ಅಹಮದ್ ಅವರು ಪ್ರತಿಕ್ರಿಯೆ ನೀಡಿ, ಅಲ್ಲಿರುವ ಸಾಮಗ್ರಿ ತೆರವು ಮಾಡಿ, ನನ್ನ ಜಾಗ ನನಗೆ ನೀಡಬೇಕು ಎಂದು ಹೇಳಿದ್ದಾರೆ.
NEWS 3 – ಮೈಸೂರು ಸ್ಯಾಂಡಲ್‍ನ ಕಾಪಿ ಹೊಡೆದ ಕೇರಳ
ಕೇರಳ ಸೋಪ್ ಅಂಡ್ ಆಯಿಲ್ಸ್ ಸಂಸ್ಥೆಯು ಮೈಸೂರು ಸ್ಯಾಂಡಲ್ ಸೋಪ್‍ನ ಆಕಾರ ಮತ್ತು ಪ್ಯಾಕೆಟನ್ನು ನಕಲು ಮಾಡಿದೆ. ಇದನ್ನು ಪ್ರಶ್ನಿಸಬೇಕಾದ ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ತಟಸ್ಥವಾಗಿ ಉಳಿದೆವೆ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ಚಂದ್ರಶೇಖರ್ ಆರೋಪಿಸಿದ್ದಾರೆ.
ಇದನ್ನೂ ಓದಿ | KARNATAKA TOP 5 | ಗ್ರಾಹಕರ ಜೇಬಿಗೆ ‘ಕರೆಂಟ್ ಶಾಕ್’, ಹಂತ ಹಂತವಾಗಿ ಲಾಕ್ ಓಪನ್, ಇನ್ನಷ್ಟು ಸುದ್ದಿ
NEWS 4 – ದೇವಸ್ಥಾನದ ದುಡ್ಡು ಅನ್ಯ ಧರ್ಮಕ್ಕಿಲ್ಲ
ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆಯ ತಸ್ತೀಕ್ ಹಣವನ್ನು ಹಿಂದೂ ಧರ್ಮ ಹೊರತು ಬೇರೆ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ನೀಡುವುದನ್ನು ತಡೆ ಹಿಡಿಯಲು ಸಚಿವ ಕೋಟ ಶ್ರೀನಿವಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅನ್ಯ ಧರ್ಮೀಯ ಧಾರ್ಮಿಕ ಕೇಂದ್ರಗಳಿಗೆ ಹಣದ ಅವಶ್ಯಕತೆ ಇದ್ದಲ್ಲಿ ಅದು ಆಯಾ ಇಲಾಖೆಯ ಜವಾಬ್ದಾರಿ. ಆಯಾ ಇಲಾಖೆಯೇ ಹಣ ಬಿಡುಗಡೆ ಮಾಡಬೇಕು ಎಂದು ಸೂಚಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
NEWS 5 – ಸುರಕ್ಷಿತವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ
ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಲಿರುವ ಸುಧಾರಿತ ಪ್ರಮಾಣಿಕ ಕಾರ್ಯಾಚರಣೆ ವಿಧಾನ ಪ್ರಕಾರ ಸುರಕ್ಷಿತ ವ್ಯವಸ್ಥೆ ಅಡಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗುತ್ತದೆ. ಅದ್ದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರಾಥಮಿ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.