ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 ಮಾರ್ಚ್ 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ ರೈಲನ್ನು 65 ನಿಮಿಷ ಬೀರೂರಿನಲ್ಲಿ ನಿಯಂತ್ರಿಸಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ನಾಲ್ಕು ದಿನ ಹೀಗೆ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ರೈಲು ಸಂಖ್ಯೆ 16227 ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ ರೈಲನ್ನು ಮಾರ್ಚ್ 10, ಮಾರ್ಚ್ 13, ಮಾರ್ಚ್ 15 ಮತ್ತು ಮಾರ್ಚ್ 17ರಂದು ನಿಯಂತ್ರಿಸಲಾಗುತ್ತದೆ. ಬೀರೂರು ಜಂಕ್ಷನ್’ನಲ್ಲಿ 65 ನಿಮಿಷ ರೈಲು ನಿಲುಗಡೆಯಾಗಲಿದೆ. ಆನಂತರ ಪ್ರಯಾಣ ಆರಂಭಿಸಲಿದೆ.
ನಿಯಂತ್ರಣಕ್ಕೆ ಕಾರಣವೇನು?
ಶಿವಮೊಗ್ಗ ಟೌನ್ ಭಾಗದಲ್ಲಿ ಎಂಜಿನಿಯರಿಂಗ್ ಸಂಬಂಧ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಲೈನ್ ಬ್ಲಾಕ್ ಮಾಡಲಾಗುತ್ತಿದ್ದೆ. ಆದ್ದರಿಂದ ಮೈಸೂರು ತಾಳಗುಪ್ಪ ರೈಲನ್ನು 65 ನಿಮಿಷಯ ನಿಯಂತ್ರಣ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೈಸೂರು ತಾಳಗುಪ್ಪ ರೈಲು ರಾತ್ರಿ 7.30ಕ್ಕೆ ಮೈಸೂರಿನಿಂದ ಹೊರಡುತ್ತಿದೆ. 8.16ಕ್ಕೆ ಮಂಡ್ಯ, 9.02ಕ್ಕೆ ರಾಮನಗರ, 10.55ಕ್ಕೆ ಬೆಂಗಳೂರು ತಲುಪಲಿದೆ. ರಾತ್ರಿ 2.53ಕ್ಕೆ ಬೀರೂರು ತಲುಪಲಿದೆ. ಈ ನಾಲ್ಕು ದಿನ ಬೀರೂರಿನಲ್ಲಿ ಒಂದು ಗಂಟೆ ರೈಲು ನಿಲ್ಲಲಿದೆ. ಆ ಬಳಿಕ ಪ್ರಯಾಣ ಆರಂಭಿಸಲಿದೆ.
ಇದನ್ನೂ ಓದಿ | ಶಿವಮೊಗ್ಗ – ಬೆಂಗಳೂರು ರೈಲ್ವೆ ಟೈಮಿಂಗ್ಸ್, ಯಾವ ರೈಲು ಎಷ್ಟೊತ್ತಿಗೆ ಹೊರಡುತ್ತೆ?
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200