ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಡಿಸೆಂಬರ್ 2021
ವಿಧಾನ ಪರಿಷತ್ ಚುನಾವಣೆಯಲ್ಲಿ ಶೇ.99.86ರಷ್ಟು ಮತದಾನವಾಗಿದೆ. ಶಿವಮೊಗ್ಗ ಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ಶೇ.100ರಷ್ಟು ಮತದಾನವಾಗಿದೆ.
ಎಲ್ಲೆಲ್ಲಿ ಎಷ್ಟು ಪರ್ಸೆಂಟ್ ಮತದಾನ?
ಶಿವಮೊಗ್ಗ ತಾಲೂಕಿನಲ್ಲಿ ಶೇ.100ರಷ್ಟು ಮತದಾನವಾಗಿದೆ. ಬೆಳಗ್ಗೆಯಿಂದಲೇ ಮತದಾನ ಚುರುಕುಗೊಂಡಿತ್ತು. ಬೆಳಗ್ಗೆ 10 ಗಂಟೆಗೆ ಶೇ.30.94ರಷ್ಟು ಮತದಾನವಾಗಿತ್ತು. 12 ಗಂಟೆಗೆ ಶೇ.86.23ರಷ್ಟು, ಮಧ್ಯಾಹ್ನ 2 ಗಂಟೆಗೆ ಶೇ.97.01ರಷ್ಟು ಮತದಾನವಾಗಿತ್ತು.
ಭದ್ರಾವತಿ ತಾಲೂಕಿನಲ್ಲಿ ಶೇ.99.79ರಷ್ಟು ಮತದಾನವಾಗಿದೆ. ಬೆಳಗ್ಗೆ 10 ಗಂಟೆಗೆ ಶೇ.13.60ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 12 ಗಂಟೆಗೆ ಶೇ.6.18ರಷ್ಟು. ಮಧ್ಯಾಹ್ನ 2 ಗಂಟೆಗೆ ಶೇ.92.68ರಷ್ಟು ಮತದಾನವಾಗಿತ್ತು.
ತೀರ್ಥಹಳ್ಳಿ ತಾಲೂಕಿನಲ್ಲಿ ಶೇ.99.43ರಷ್ಟು ಮತದಾನವಾಗಿದೆ. ಬೆಳಗ್ಗೆ 10 ಗಂಟೆಗೆ ಶೇ.48.15ರಷ್ಟು, ಮಧ್ಯಾಹ್ನ 12 ಗಂಟೆಗೆ ಶೇ.90.03, ಮಧ್ಯಾಹ್ನ 2 ಗಂಟೆಗೆ ಶೇ.97.72ರಷ್ಟು ಮತದಾನವಾಗಿದೆ.
ಸಾಗರ ತಾಲೂಕಿನಲ್ಲಿ ಶೇ.100ರಷ್ಟು ಮತದಾನವಾಗಿದೆ. ಬೆಳಗ್ಗ 10 ಗಂಟೆಗೆ ಶೇ. 35.58 ರಷ್ಟು, ಮಧ್ಯಾಹ್ನ 12 ಗಂಟೆಗೆ ಶೇ.86.06, ಮಧ್ಯಾಹ್ನ 2 ಗಂಟೆಗೆ ಶೇ.99.04ರಷ್ಟು ಮತದಾನವಾಗಿದೆ.
ಹೊಸನಗರ ತಾಲೂಕಿನಲ್ಲಿ ಶೇ.100ರಷ್ಟ ಮತದಾನವಾಗಿದೆ. ಬೆಳಗ್ಗೆ 10 ಗಂಟೆಗೆ ಶೇ.28.90, ಮಧ್ಯಾಹ್ನ 12 ಗಂಟೆಗೆ ಶೇ.66.56, ಮಧ್ಯಾಹ್ನ 2 ಗಂಟೆಗೆ ಶೇ.97.40 ರಷ್ಟು ಮತದಾನವಾಗಿದೆ.
ಸೊರಬದಲ್ಲಿ ಶೇ.99.69ರಷ್ಟು ಮತದಾನವಾಗಿದೆ. ಬೆಳಗ್ಗೆ 10ಕ್ಕೆ ಶೇ.19.50ರಷ್ಟು, ಮಧ್ಯಾಹ್ನ 12 ಗಂಟೆಗೆ 90.57ರಷ್ಟು, ಮಧ್ಯಾಹ್ನ 2 ಗಂಟೆಗೆ 98.11ರಷ್ಟು ಮತದಾನವಾಗಿತ್ತು.
ಶಿಕಾರಿಪುರದಲ್ಲಿ ಶೇ.100ರಷ್ಟು ಮತದಾನವಾಗಿದೆ. ಬೆಳಗ್ಗೆ 10ಕ್ಕೆ ಶೇ.30.60ರಷ್ಟು, ಮಧ್ಯಾಹ್ನ 12 ಗಂಟೆಗೆ ಶೇ.94, ಮಧ್ಯಾಹ್ನ 2 ಗಂಟೆಗೆ 97.20ರಷ್ಟು ಮತದಾನವಾಗಿದೆ.
ಎಲ್ಲೆಲ್ಲಿ ಎಷ್ಟು ಮಂದಿ ಮತ ಹಾಕಿಲ್ಲ?
ಶಿವಮೊಗ್ಗದಲ್ಲಿ 501 ಮತದಾರರಿದ್ದು ಎಲ್ಲರೂ ಹಕ್ಕು ಚಲಾಯಿಸಿದ್ದಾರೆ. ಸಾಗರದಲ್ಲಿ 416, ಹೊಸನಗರದಲ್ಲಿ 308, ಶಿಕಾರಿಪುರದಲ್ಲಿ 500 ಮತದಾರರಿದ್ದು ಎಲ್ಲರೂ ಮತ ಹಾಕಿದ್ದಾರೆ. ಸೊರಬದಲ್ಲಿ 318 ಮತದಾರರಿದ್ದು, 317 ಮಂದಿ ಮತ ಹಾಕಿದ್ದಾರ. ತೀರ್ಥಹಳ್ಳಿಯಲ್ಲಿ 351 ಮತದಾರರಿದ್ದಾರೆ. 349 ಮಂದಿ ಮಾತ್ರ ಹಕ್ಕು ಚಲಾಯಿಸಿದ್ದಾರೆ. ಭದ್ರಾವತಿಯಲ್ಲಿ 478 ಮತದಾರರಿದ್ದು, 477 ಮಂದಿ ಮತ ಹಾಕಿದ್ದಾರೆ.
ಇನ್ನು, ಈ ವಿಧಾನ ಪರಿಷತ್ ಕ್ಷೇತ್ರ ವ್ಯಾಪ್ತಿಗೆ ಸೇರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಶೇ.99.71ರಷ್ಟು ಮತದಾನವಾಗಿದೆ. ನ್ಯಾಮತಿಯಲ್ಲಿ ಶೇ.100, ಚನ್ನಗಿರಿಯಲ್ಲಿ ಶೇ.99.87ರಷ್ಟು ಮತದಾನವಾಗಿದೆ.
ಒಟ್ಟು 4164 ಮತದಾರರು ಇದ್ದು, 4158 ಮತದಾರರು ಮತದಾನ ಮಾಡಿದ್ದಾರೆ. ಇದರಿಂದ ವಿಧಾನ ಪರಿಷತ್ ಚುನಾವಣೆಗೆ ಶೇ.99.86ರಷ್ಟು ಮತದಾನವಾಗಿದೆ. ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆ ಸೇರಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200