ಶಿವಮೊಗ್ಗದಲ್ಲಿ ಎರಡು ದಿನ ರೈತರಿಗೆ ತರಬೇತಿ, ಏನೆಲ್ಲ ತರಬೇತಿ ನೀಡಲಾಗುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 5 JANUARY 2024

SHIMOGA : ವಿನೋಬನಗರದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ರೈತರಿಗೆ ಮೇವು ಬೆಳೆಗಳ ಕುರಿತು ತರಬೇತಿಯನ್ನು ಆಯೋಜಿಸಲಾಗಿದೆ. ಜ.10 ಮತ್ತು 11ರಂದು ತರಬೇತಿ ನೀಡಲಾಗುತ್ತದೆ. ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ತರಬೇತಿ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ಏನೇನೆಲ್ಲ ತರಬೇತಿ ನೀಡಲಾಗುತ್ತದೆ?

ಮಲೆನಾಡು ಗಿಡ್ಡತಳಿ ಹೊಂದಿರುವ ಸಣ್ಣ ಹಿಡುವಳಿದಾರಿಗೆ ಹಸಿರು ಮೇವಿನ ತಳಿಗಳ ಪ್ರದರ್ಶನ ಹಾಗೂ ಮೇವಿನ ಬೆಳೆಗಳ ಬೇಸಾಯ ಕ್ರಮಗಳು. ಮೇವು ಬೀಜಗಳ ಸಂಸ್ಕರಣೆ ಹಾಗೂ ಮೇವಿನ ತಳಿಗಳ ಪಸರಣೆ (ಪ್ರಾಯೋಗಿಕ ತರಬೇತಿ). ಹುಲ್ಲುಗಾವಲು ನಿರ್ವಹಣೆಯ ಅಗತ್ಯತೆಯ ಕುರಿತಾದ ವಿವಿಧ ವಿಷಯಗಳ ಕುರಿತು ತರಬೇತಿ. ಮಲೆನಾಡು ಗಿಡ್ಡ ತಳಿಯ ಹಾಲು, ಸಗಣಿ ಮತ್ತು ಗಂಜಳದಿಂದ ತಯಾರಿಸಲಾದ ವಿವಿಧ ಉತ್ಪನ್ನಗಳ ಪ್ರದರ್ಶನ ಆಯೋಜಿಸಲಾಗುತ್ತದೆ.

ಹೆಸರು ನೋಂದಾಯಿಸುವುದು ಹೇಗೆ?

ತರಬೇತಿಯಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಹೆಸರನ್ನು ಡಾ. ಹರೀಶ್ ಎಂ.- ಮೊಬೈಲ್‌ ನಂಬರ್‌ 9470747820 ಹಾಗೂ ಡಾ. ವೆಂಕಟೇಶ್ – ಮೊಬೈಲ್‌ ನಂಬರ್‌ 9482373685 ಗಳಿಗೆ SMS/ವಾಟ್ಸಪ್‌ ಮೂಲಕ ಸಂಪರ್ಕಿಸಬಹುದು. ರಾ.ಕೃ.ವಿಕಾಸ ಯೋಜನಾ ಸಂಯೋಜಕರು, ಪ್ರಾಣಿ ಅನುವಂಶೀಯತೆ ಹಾಗೂ ತಳಿಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ವಿನೋಬನಗರ, ಶಿವಮೊಗ್ಗ ಇಲ್ಲಿ ನೇರ ಸಂಪರ್ಕ ಮಾಡಿ ಹೆಸರು ನೋಂದಾಯಿಸಬಹುದಾಗಿದೆ.

ಇದನ್ನೂ ಓದಿ – ಅಡಿಕೆ ಧಾರಣೆ | 5 ಜನವರಿ 2024 | ಶಿವಮೊಗ್ಗ ಸೇರಿ ಯಾವ್ಯಾವ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ರೇಟ್?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 5, 2024

Leave a Comment