ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಆಗಸ್ಟ್ 2020
ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆ, ತುಂಗಾ ಜಲಾಶಯದ ಒಳ ಹರಿವು ತಗ್ಗಿದೆ. ಹಳೆ ಶಿವಮೊಗ್ಗ ಭಾಗದಲ್ಲಿ ಇದ್ದ ಮುಳುಗಡೆ ಭೀತಿ ದೂರಾಗಿದೆ.
ಇವತ್ತು ಒಳ, ಹೊರ ಹರಿವೆಷ್ಟು?
ತುಂಗಾ ಜಲಾಶಯಕ್ಕೆ ಇವತ್ತು 50,601 ಕ್ಯೂಸೆಕ್ ಒಳಹರಿವು ಇದೆ. ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಹಾಗಾಗಿ ತುಂಗಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ.
ಇವತ್ತು ಹೊರ ಹರಿವು ಕಡಿಮೆ ಆಗಿರುವುದರಿಂದ, ಮಂಟಪದ ಅರ್ಧ ಭಾಗ ಮತ್ತೆ ಕಾಣಿಸುತ್ತಿದೆ. ಕಳೆದ ವರ್ಷ ಈ ಹೊತ್ತಿಗೆ 1,03,855 ಕ್ಯೂಸೆಕ್ ಒಳ ಮತ್ತು ಹೊರ ಹರಿವು ದಾಖಲಾಗಿತ್ತು. ಹಳೆ ಶಿವಮೊಗ್ಗ ಭಾಗ ಜಲಾವೃತವಾಗಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]