
ಶಿವಮೊಗ್ಗ ಲೈವ್.ಕಾಂ | SHIMOGA | 13 ಏಪ್ರಿಲ್ 2020
ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ ಮತ್ತಿಬ್ಬರಲ್ಲಿ ಕೆಎಫ್‍ಡಿ ಸೋಂಕು ದೃಢವಾಗಿದೆ. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತೀರ್ಥಹಳ್ಳಿ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡಿನಬೈಲು ಗ್ರಾಮದ ಭಾರತಿ (49) ಎಂಬುವವರಲ್ಲಿ ಕೆಎಫ್‍ಡಿ ಸೋಂಕು ಇರುವುದು ದೃಢವಾಗಿದೆ. ಇವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ಸೇರಿಸಲಾಗಿದೆ.

ಸಾಗರದಲ್ಲೂ ಒಂದು ಕೇಸ್ ಪತ್ತೆ
ಸಾಗರ ತಾಲೂಕಿನ ಮಹಿಳೆಯೊಬ್ಬರಿಗು ಕೆಎಫ್‍ಡಿ ದೃಢವಾಗಿದೆ. ಅರಳಗೋಡಿನ ಕಸಗುಪ್ಪೆ ಗ್ರಾಮದ ಚಂದ್ರಕಲಾ (50) ಅವರಿಗೆ ಸೋಂಕು ಇರುವುದು ದೃಢವಾಗಿದೆ. ಇವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶರಾವತಿ ಅಭಯಾರಣ್ಯ ಪ್ರವೇಶ ಬಂದ್
ಶರಾವತಿ ಅಭಯಾರಣ್ಯದ ಭಾರಂಗಿ ಹೋಬಳಿಯ ಅರಳಗೋಡು, ಜೋಗ – ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೆನ್ನಿ ಶರಾವತಿ ವಲಯಾರಣ್ಯ ಪ್ರದೇಶದೊಳಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಕೆಎಫ್‍ಡಿ ಬಾಧಿತ ಪ್ರದೇಶಗಳಾಗಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವನ್ಯಜೀವಿ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಪ್ರೀತಿ ರಾಮದಾಸ್ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]