ಇವತ್ತು ತೀರ್ಥಹಳ್ಳಿ ಹೊರತು ಉಳಿದೆಲ್ಲೆಡೆ ತಾಪಮಾನ ತುಸು ಇಳಿಕೆ? – ಹವಾಮಾನ ವರದಿ

 ಶಿವಮೊಗ್ಗ  LIVE 

Published On: 27 October 2025 | Monday

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಬಹುತೇಕ ಕಡಿಮೆಯಾಗಿದೆ. ಹವಾಮಾನ ಇಲಾಖೆ ಜಿಲ್ಲೆಗೆ ಇವತ್ತು ಯಾವುದೇ ಅಲರ್ಟ್‌ ಪ್ರಕಟಿಸಿಲ್ಲ. ಆದರೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. (Weather)

ಇನ್ನು, ತೀರ್ಥಹಳ್ಳಿ ಹೊರತು ಉಳಿದೆಲ್ಲ ತಾಲೂಕುಗಳಲ್ಲಿ ತಾಪಮಾನ ತಸು ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

Sigandur-Janthre-2026-scaled.

ಶಿವಮೊಗ್ಗದಲ್ಲಿ ಹೇಗಿದೆ ವಾತಾವರಣ?

ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ.

ತೀರ್ಥಹಳ್ಳಿಯಲ್ಲಿ ಇವತ್ತು ಗರಿಷ್ಠ 31 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ.

ಸಾಗರ, ಹೊಸನಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ.‌

ಇದನ್ನೂ ಓದಿ » ಶಿವಮೊಗ್ಗದಲ್ಲಿಯು ಅ.31ರಿಂದ ಏಕತಾಯಾತ್ರೆ, ಹೇಗಿರುತ್ತೆ ಕಾರ್ಯಕ್ರಮ?

Weather

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment