ಶಿವಮೊಗ್ಗ ಲೈವ್.ಕಾಂ | HOSANAGARA | 26 ಡಿಸೆಂಬರ್ 2019
ಚಾರಣಿಗರ ಹಾಟ್ ಫೇವರೆಟ್ ತಾಣ ಕೊಡಚಾದ್ರಿ ಗಿರಿ ಮೇಲೆ, ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು, ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ನಿರ್ಧರಿಸಿದೆ. ಬೆಟ್ಟದ ಮೇಲಿರುವ ಪ್ರವಾಸಿ ಮಂದಿರದಲ್ಲಿ ಪ್ರವಾಸಿಗರಿಗೆ ಕೊಠಡಿ ನೀಡದಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದೆ.

ಹೊಸ ವರ್ಷಾಚರಣೆಗೇಕೆ ಬ್ರೇಕ್?
ಕೊಡಚಾದ್ರಿಯಲ್ಲಿ ಶೋಲಾ ಅರಣ್ಯ ಮತ್ತು ಹುಲ್ಲುಗಾವಲಿದೆ. ಇಲ್ಲಿ ಬಂದು ಹೊಸ ವರ್ಷಾಚರಣೆ ಮಾಡುವವರು ಮೋಜು ಮಸ್ತಿ ಮಾಡುತ್ತಾರೆ, ಫೈರ್ ಕ್ಯಾಂಪ್ ಹಾಕುತ್ತಾರೆ. ಇದರಿಂದ ಅರಣ್ಯಕ್ಕೆ ಬೆಂಕಿ ತಗುಲುವ ಆತಂಕವಿದೆ. ಹಾಗಾಗಿ ಈ ಬಾರಿಯಿಂದ ಗಿರಿಯ ಮೇಲೆ ಹೊಸ ವರ್ಷಾಚರಣೆಯನ್ನು ನಿರ್ಬಂಧಿಸಲು ಕೊಲ್ಲೂರು ವನ್ಯಜೀವಿ ವಿಭಾಗದ ವಲಯ ನಿರ್ಧರಿಸಿದೆ.
ಯಾವತ್ತಿಂದ ನಿರ್ಬಂಧ?
ಕೊಡಚಾದ್ರಿ ಗಿರಿ ಮೇಲೆ ಪ್ರವಾಸಿಗರು ಉಳಿಯಲು ಲೋಕೋಪಯೋಗಿ ಇಲಾಖೆಯ ಗೆಸ್ಟ್ ಹೌಸ್ ಇದೆ. ಇದರ ಹೊರತು ಅಲ್ಲಿ ತಂಗಲು ಅವಕಾಶವಿಲ್ಲ. ಹಾಗಾಗಿ ವಲಯ ಅರಣ್ಯಾಧಿಕಾರಿ ಅವರು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದು, ಕೊಠಡಿಗಳನ್ನು ನೀಡದಂತೆ ಮನವಿ ಮಾಡಿದ್ದಾರೆ. ಡಿಸೆಂಬರ್ 28 ರಿಂದ ಜನವರಿ 1ರವರೆಗೆ ಯಾರೂ ತಂಗಲು ಅವಕಾಶ ಮಾಡಿಕೊಡಬಾರದು ಎಂದು ತಿಳಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]