SHIVAMOGGA LIVE NEWS | 25 MARCH 2023
SHIMOGA : ನಗರದಾದ್ಯಂತ ಮಾ.26 ಮತ್ತು ಮಾ.27ರಂದು ನೀರು ಪೂರೈಕೆ (water supply) ವ್ಯತ್ಯಯವಾಗಲಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ – ಕೂಡಲಿ ಜಾತ್ರೆ, ತುಂಗಾ – ಭದ್ರಾ ಸಂಗಮದಲ್ಲಿ ಮಿಂದೆದ್ದ ಭಕ್ತ ಸಮೂಹ, ಹೇಗಿತ್ತು ಈ ಭಾರಿ ವೈಭವ?
ಗಾಜನೂರು ಮೂಲಸ್ಥಾವರಕ್ಕೆ ವಿದ್ಯುತ್ ಸರಬರಾಜಾಗುವ ಮತ್ತು ಕೃಷ್ಣರಾಜೇಂದ್ರ ಜಲಶುದ್ದೀಕರಣ ಘಟಕಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಹಿನ್ನೆಲೆ ಎರಡು ದಿನ ಶಿವಮೊಗ್ಗ ನಗರದಲ್ಲಿ ನೀರು ಸರಬರಾಜು (water supply) ವ್ಯತ್ಯಯವಾಗಲಿದೆ ಎಂದು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣೆ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಅವರು ಪ್ರಕಟಣೆಯಲ್ಲಿ ತಿಳಿಸಿದೆ.