ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 20 ಸೆಪ್ಟೆಂಬರ್ 2019

ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ NSUI ಕಾರ್ಯಕರ್ತರು ಶಿವಮೊಗ್ಗ ಬಸ್ ಸ್ಟ್ಯಾಂಡ್ ವೃತ್ತದಲ್ಲಿ ಶೂ, ಚಪ್ಪಲಿ ಪಾಲಿಷ ಮಾಡಿ, ಹಣ್ಣು, ಟೀ ಮಾರಾಟ ಮಾಡಿ ವಿಭಿನ್ನ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಆಶೋಕ ವೃತ್ತದಲ್ಲಿ NSUI ಕಾರ್ಯಕರ್ತರು, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಚ್ಚೇ ದಿನ್ ಕಬ್ ಆಯೇಗಾ ಎಂದು ಘೋಷಣೆ ಕೂಗುತ್ತ ಶೂ ಪಾಲಿಷ್ ಮಾಡುತ್ತಾ ಪ್ರತಿಭಟಿಸಿದರು.
ಅಂಬಾನಿ, ಅದಾನಿಗಳಿಗೆ ಮಾತ್ರ ಈ ದೇಶದಲ್ಲಿ ಒಳ್ಳೆಯ ದಿನಗಳು ಬರುತ್ತಿದೆ. ಆದರೆ ಸಾಮಾನ್ಯ ನಾಗರಿಕರು ಉದ್ಯೋಗ ಇಲ್ಲದೆ ಪರಿತಪಿಸುವಂತಾಗಿದೆ. ಪದವೀಧರರು ಕೆಲಸಕ್ಕಾಗಿ ಅಲೆದಾಡುವುದು ತಪ್ಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

NSUI ರಾಜ್ಯ ಉಪಾಧ್ಯಕ್ಷ ಚೇತನ್, ಶ್ರೀಜಿತ್, ಜಿಲ್ಲಾ ಕಾರ್ಯಾಧ್ಯಕ್ಷ ವಿನಯ್ ಟಿ.ವಿ, ಜಿಲ್ಲಾಧ್ಯಕ್ಷ ಬಾಲಾಜಿ, ವಿಜಯ್, ರಾಘವೇಂದ್ರ, ರವಿ, ಪ್ರದೀಪ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
