TELL ME WHY | 15 ಅಕ್ಟೋಬರ್ 2019

ಟಿಕೆಟ್ ರೇಟು ಕಡಿಮೆ. ನಿಗದಿತ ಸ್ಥಳವನ್ನು ವೇಗ ಮತ್ತು ಆರಾಮವಾಗಿ ತಲುಪಬಹುದು ಅನ್ನುವ ಕಾರಣಕ್ಕೆ ಹಲವರು ರೈಲು ಬಳಸುತ್ತಾರೆ. ಆದರೆ ಪ್ರತಿ ರೈಲು ಕೂಡ ಹಲವು ಕುತೂಹಲಕಾರಿ ಸಂಗತಿಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಒಂದನ್ನು ಇವತ್ತಿನ TELL ME WHY ಸೀರಿಸ್’ನಲ್ಲಿದೆ.
ರೈಲು ಬೋಗಿಗಳ ಮೇಲೆ ಸಾಮಾನ್ಯವಾಗಿ ಐದು ಅಂಕಿಗಳ ನಂಬರ್ ಇರುತ್ತೆ. ತುಂಬಾ ಜನ ಇದನ್ನು ರೈಲಿನ ನಂಬರ್ ಅಂದುಕೊಳ್ಳುತ್ತಾರೆ. ಇನ್ನೂ ಕೆಲವರು ಇದು ಬೋಗಿಗಳ ಸಂಖ್ಯೆ ಇರಬಹುದು ಎಂದುಕೊಳ್ಳುತ್ತಾರೆ. ಅದರೆ ಇದು ರೈಲ್ವೆ ಇಲಾಖೆಯ ಸೀಕ್ರೆಟ್ ಕೋಡಿಂಗ್ ಅನ್ನುವುದು ಬಹುತೇಕರಿಗೆ ಗೊತ್ತಿಲ್ಲ.
ಭಾರತೀಯ ರೈಲ್ವೆಯಲ್ಲಿ ಬಳಕೆ ಆಗುತ್ತಿರುವ ಎಲ್ಲ ರೈಲು ಬೋಗಿಗಳ ಮೇಲು ಐದು ನಂಬರ್ ಇರುತ್ತದೆ. ಈ ಐದು ನಂಬರ್’ಗಳ ಪೈಕಿ ಮೊದಲೆರಡು ನಂಬರ್’ಗಳು ಒಂದು ಕೋಡ್. ಉಳಿದ ಮೂರು ಮತ್ತೊಂದು ಕೋಡ್ ನಂಬರ್ ಆಗಿದೆ.
ಮೊದಲ ಎರಡು ನಂಬರ್’ಗಳು ರೈಲ್ವೆ ಬೋಗಿ ನಿರ್ಮಾಣವಾದ ವರ್ಷವನ್ನು ಸೂಚಿಸುತ್ತದೆ. ಈ ಕೆಳಗಿರುವ ಫೋಟೋದಲ್ಲಿ ರೈಲ್ವೆ ಬೋಗಿಯ ಸಂಖ್ಯೆಯ 98337 ಎಂದು ಇದೆ.

ಈ ಪೈಕಿ ಮೊದಲ ಎರಡು ನಂಬರ್ 98. ಇದು ಈ ರೈಲು ಬೋಗಿ ನಿರ್ಮಾಣವಾದ ವರ್ಷ. ಅಂದರೆ 1998 ಎಂದರ್ಥ. 01, 02, 03 ಎಂದು ಇದ್ದರೆ ಆ ಬೋಗಿಗಳು 2000ದಿಂದ ಈಚೆಗೆ ನಿರ್ಮಾಣವಾಗಿದ್ದು ಎಂದರ್ಥ.
ಉಳಿದ ಮೂರು ಸಂಖ್ಯೆಗಳು ರೈಲ್ವೆ ಕೋಚ್ ಯಾವ ಕ್ಲಾಸ್’ನದ್ದು ಎಂದು ಹೇಳುವ ಕೋಡ್. ಸ್ಲೀಪರ್ ಕೋಚ್’ಗೆ ಒಂದು ಕೋಡ್, ಎಸಿ ಕೋಚ್’ಗೆ ಮತ್ತೊಂದು ಕೋಡ್ ಇರಲಿದೆ.

ಕೊನೆಯ ಮೂರು ನಂಬರ್ 001 ರಿಂದ 025ವರೆಗು ಇದ್ದರೆ ಅದು ಫಸ್ಟ್ ಕ್ಲಾಸ್ ಎಸಿ ಕೋಚ್ ಎಂದರ್ಥ.
026 ರಿಂದ 050ವರೆಗು ನಂಬರ್ ಇದ್ದರೆ ಎಸಿ ಫಸ್ಟ್ ಕ್ಲಾಸ್ ಮತ್ತು ಎಸಿ 2 ಟೈರ್ ಕೋಚ್.
051 ರಿಂದ 100ವರೆಗೆ ಎಸಿ 2 ಟೈರ್ ಕೋಚ್.
101 ರಿಂದ 150ವರೆಗೆ ಎಸಿ 3 ಟೈರ್ ಕೋಚ್.
151 ರಿಂದ 200ವರೆಗೆ ಎಸಿ ಚೇರ್ ಕಾರ್ ಕೋಚ್.
201 ರಿಂದ 400ವರೆಗೆ ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್.
401 ರಿಂದ 600ವರೆಗೆ ಸೆಕೆಂಡ್ ಕ್ಲಾಸ್ ಜನರಲ್ ಕಂಪಾರ್ಟ್’ಮೆಂಟ್
601 ರಿಂದ 700ವರೆಗೆ ಜನ ಶತಾಬ್ದಿ ಸಿಟ್ಟಿಂಗ್ ಕ್ಲಾಸ್.
701 ರಿಂದ 800ವರೆಗೆ ಸಿಟ್ಟಿಂಗ್ ಮತ್ತು ಲಗೇಜ್ ರಾಕ್.
ಹೀಗೆ ಭಾರತೀಯ ರೈಲ್ವೆ ತನ್ನ ಸೇವೆಯನ್ನು ನೀಡುವ ಸಲುವಾಗಿ ಹಲವು ಕೋಡ್’ಗಳನ್ನು ಬಳಸುತ್ತದೆ. ಇದರಲ್ಲಿ ಬಹುತೇಕವು ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಇಂತಹ ಹಲವು ಕುತೂಹಲಕಾರಿ ಸಂಗತಿಗಳನ್ನು TELL ME WHY?ನಲ್ಲಿ ನಿಮ್ಮ ಮುಂದಿಡಲಿದ್ದೇವೆ. .


Good info
Very good information…
Thanks for Good information