ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 20 ಸೆಪ್ಟೆಂಬರ್ 2019

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಚೆ ಇಲಾಖೆ ಸಿಬ್ಬಂದಿ ಗೋಪಿ ಸರ್ಕಲ್’ನಲ್ಲಿರುವ ಪ್ರಧಾನ ಅಂಚೆ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸಿದರು.

ಹೊಸ ರಾಷ್ಟ್ರೀಯ ಪಿಂಚಣಿ ಪದ್ಧತಿ ರದ್ದುಗೊಳಿಸಿ ಎಲ್ಲರಿಗು ಹಳೆ ಪಿಂಚಣಿ ವ್ಯವಸ್ಥೆಯನ್ನೆ ಮುಂದುವರೆಸಬೇಕು, ರೈಲ್ವೆ ಇಲಾಖೆಯಲ್ಲಿ ಇರುವಂತೆ ಶೇ.100ರಷ್ಟು ಅನುಕಂಪ ಆಧಾರಿತ ನೌಕರಿ ವ್ಯವಸ್ಥೆಯನ್ನು ತಕ್ಷಣದಿಂದಲೆ ಜಾರಿಗೊಳಿಸಬೇಕು, ಬೆಂಚ್ ಮಾರ್ಕ್ ಪದ್ಧತಿ ತಕ್ಷಣದಿಂದ ಕೈಬಿಡಬೇಕು, ಅಂಚೆ ನೌಕರರ ಸಂಘದ ಸದಸ್ಯರ ವಿರುದ್ಧ ಅನುಸರಿಸುತ್ತಿರುವ ಮಲತಾಯಿ ಧೋರಣೆ ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಧರಣಿನಿರತರು ಆಗ್ರಹಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]