ನಂದಿನಿ ಗ್ರಾಹಕರಿಗೆ ಗುಡ್‌ ನ್ಯೂಸ್‌, 1 ಕೆ.ಜಿ ಬಕೆಟ್‌ ಮೊಸರು ಮಾರುಕಟ್ಟೆಗೆ ಎಂಟ್ರಿ, ಎಷ್ಟಿರುತ್ತೆ ರೇಟ್?‌

Nandini-Curd-1-KG-Bucket-in-Shimoga-market.

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟವು (ಶಿಮುಲ್) ಮಾರ್ಚ್ 1ರಿಂದ ಜಾರಿಗೆ ಬರುವಂತೆ 1 ಕೆ.ಜಿ ತೂಕದ ನಂದಿನಿ ಮೊಸರು ಬಕೆಟ್ ಅನ್ನು ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. (special discount) ಒಂದು ಕೆ.ಜಿ ಮೊಸರು ಬಕೆಟ್‌ ದರ ₹95 ನಿಗದಿ ಮಾಡಲಾಗಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಆರಂಭಿಕ ಕೊಡುಗೆಯಾಗಿ ಪ್ರತಿ ಬಕೆಟ್‌ಗೆ ₹10 ರಿಯಾಯಿತಿ ನೀಡಲಾಗಿದೆ. ಹೀಗಾಗಿ ಗ್ರಾಹಕರಿಗೆ ಇದು ₹85 ದರದಲ್ಲಿ ಲಭ್ಯವಾಗಲಿದೆ ಎಂದು ಶಿಮುಲ್‌ ವ್ಯವಸ್ಥಾಪಕ ನಿರ್ದೇಶಕರು … Read more

‘ಒಂದು ಕೋಟಿ ರುಪಾಯಿ ನೆರವು, ಸರ್ಕಾರಿ ನೌಕರಿ ಕೊಡಬೇಕು’, ಕುರುಬರ ವೇದಿಕೆ ಪಟ್ಟು

Sangolli-Rayanna-Kurubara-vedike-president-ramakrishna-mudli-and-malthesh-press-meet.

ಶಿವಮೊಗ್ಗ: ಊರುಗಡೂರಿನಲ್ಲಿ ಹತ್ಯೆಯಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾಂಕೇತ್ ಕುಟುಂಬಕ್ಕೆ ಸೂಕ್ತ ನ್ಯಾಯ (compensation) ಒದಗಿಸಬೇಕು ಮತ್ತು ನಗರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಹಾವಳಿ ತಡೆಗಟ್ಟಿ, ಶಿವಮೊಗ್ಗವನ್ನು ಗಾಂಜಾ ಮುಕ್ತಗೊಳಿಸಬೇಕು ಎಂದು ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ ಅಧ್ಯಕ್ಷ ರಾಮಕೃಷ್ಣ ಮೂಡ್ಲಿ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಕೃಷ್ಣ ಮೂಡ್ಲಿ, ಕ್ರಿಕೆಟ್ ಆಡುವಾಗ ನಡೆದ ಸಣ್ಣ ಗಲಾಟೆಯು ದ್ವೇಷಕ್ಕೆ ಕಾರಣವಾಗಿ ಈ ಕೊಲೆ ನಡೆದಿದೆ. ಶಾಲೆಯಲ್ಲಿ ರಾತ್ರಿ ವಿಶೇಷ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದ ಸಾಂಕೇತ್‌ನನ್ನು … Read more

ಸಚಿವ ಮಧು ಬಂಗಾರಪ್ಪ ಜನ್ಮದಿನ, ವಿದ್ಯಾರ್ಥಿಗಳು, ಪೌರ ಕಾರ್ಮಿಕರಿಗೆ ವಿಮಾನಯಾನ

Congress-President-R-Prasanna-Kumar-Press-meet-about-Madhu-Bangarappa-birthday

ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜನ್ಮದಿನದ ಅಂಗವಾಗಿ ಮಾರ್ಚ್‌ 2ರಂದು ಶಿವಮೊಗ್ಗ ಹಾಗೂ ಸೊರಬ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು (special programs) ಆಯೋಜಿಸಲಾಗಿದೆ ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌.ಪ್ರಸನ್ನ ಕುಮಾರ್‌, ಸಚಿವರ ಜನ್ಮದಿನವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸಮಾಜದ ವಿವಿಧ ವರ್ಗದವರನ್ನು ಒಳಗೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು. ಏನೇನೆಲ್ಲ ಕಾರ್ಯಕ್ರಮ ಇರಲಿದೆ? ಅಂದು ಬೆಳಗ್ಗೆ 8 … Read more

ವಾಸವಿ ಯುವಜನ ಸಂಘದ ಅಧ್ಯಕ್ಷರಾಗಿ ಶ್ರೀನಾಗ್‌, ಕನ್ನಿಕಾ ಸಖಿಯರ ಸಂಘದ ಅಧ್ಯಕ್ಷ ಶ್ವೇತಾ ಸಂದೀಪ್

Srinag-New-President-of-Vasavi-yuvajana-sanga.

ಶಿವಮೊಗ್ಗ: ನಗರದ ವಿನಾಯಕ ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ವಾಸವಿ ಯುವಜನ ಸಂಘದ ನೂತನ ಪದಾಧಿಕಾರಿಗಳ (new president) ಪದಗ್ರಹಣ ಹಾಗೂ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕನ್ನಿಕಾ ಸಖಿಯರ ಸಂಘದ ಉದ್ಘಾಟನಾ ಸಮಾರಂಭವು ನಡೆಯಿತು. ವಾಸವಿ ಯುವಜನ ಸಂಘದ ನಿಕಟಪೂರ್ವ ಅಧ್ಯಕ್ಷ ಸಿ.ಆರ್. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ಮಾಜಿ ಅಧ್ಯಕ್ಷ ಎಸ್.ಎನ್. ಶಬರೀಶ್ ಉದ್ಘಾಟಿಸಿದರು. ಸಮಾರಂಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಸುನಿಲ್ … Read more

ಭದ್ರಾವತಿಯ 10 ಮಂದಿಗೆ ತಲಾ 1 ವರ್ಷ ಜೈಲು, ₹8000 ದಂಡ, ಕಾರಣವೇನು?

BHADRAVATHI-NEWS-UPDATE

ಭದ್ರಾವತಿ: ಹಂಚಿನ ಸಿದ್ಧಾಪುರ (Bhadravathi) ಗ್ರಾಮದಲ್ಲಿ ನಡೆದಿದ್ದ ಹಲ್ಲೆ ಹಾಗೂ ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿನ ಒಂದನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಹತ್ತು ಮಂದಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. 2019ರ ಮಾರ್ಚ್‌ 8ರಂದು ಶಿವರಾತ್ರಿ ಹಬ್ಬದ ಸಂದರ್ಭ ದೇವಸ್ಥಾನಕ್ಕೆ ಹೋಗಿದ್ದ ಸಾಕ್ಷಿ ಅಭಿಲಾಷ್ ಎಂಬುವವರನ್ನು ಆರೋಪಿ ರುದ್ರೇಶ್ ಹಾಗೂ ಇತರರು ಅವಹೇಳನಕಾರಿಯಾಗಿ ಮಾತನಾಡಿಸಿ ಕಿಚಾಯಿಸಿದ್ದರು. ಇದೇ ವಿಚಾರವಾಗಿ ಅಂದು ಸಂಜೆ ಆರೋಪಿಗಳು ಗುಂಪುಕಟ್ಟಿಕೊಂಡು … Read more

ಉಡುಪಿ ವ್ಯಕ್ತಿಯನ್ನು ಅರೆಸ್ಟ್‌ ಮಾಡಿದ ತೀರ್ಥಹಳ್ಳಿಯ ಮಾಳೂರು ಪೊಲೀಸ್‌, ಯಾಕೆ?

Thirthahalli-Maluru-police-arrest-one-from-Udupi.

ತೀರ್ಥಹಳ್ಳಿ: ಮನೆಯ ಪಕ್ಕದಲ್ಲಿಟ್ಟಿದ್ದ ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳನ್ನು (centring sheets) ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಕುಂಬ್ರಿಕೊಡ್ಲು ನಿವಾಸಿ ಮೊಹಿದ್ದೀನ್ (42) ಎಂಬಾತನನ್ನು ಬಂಧಿಸಲಾಗಿದೆ. ಫೆ.2ರಂದು ತೀರ್ಥಹಳ್ಳಿ ತಾಲೂಕು ಕೂಡಿಗೆ ಗ್ರಾಮದ ಗಬಡಿಯ ಮೇಘರಾಜ್‌ ಎಂಬುವವರಿಗೆ ಸೇರಿದ್ದ ಕಬ್ಬಿಣದ ಶೀಟ್‌ಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಮಾಳೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಅಂದಾಜು ₹1 ಲಕ್ಷ ಮೌಲ್ಯದ ಒಟ್ಟು 150 ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಅಂದಾಜು ₹1 ಲಕ್ಷ … Read more

ಶಿವಮೊಗ್ಗದ ಎಂಆರ್‌ಎಸ್‌ ಸರ್ಕಲ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ, ಪೊಲೀಸರಿಗೆ ಮನವಿ, ಕಾರಣವೇನು?

ABVP-protest-at-MRS-Circle-in-Shimoga

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್ ಹತ್ಯೆ ಖಂಡನೀಯ. ಜಾತಿ ಹಾಗೂ ಧರ್ಮವನ್ನು ನೋಡದೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಘಟಕದಿಂದ (ABVP protest) ಎಂಆರ್‌ಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗೆ ಡ್ರಗ್ಸ್ ಹಾಗೂ ಗಾಂಜಾ ಪದಾರ್ಥಗಳು ಸುಲಭವಾಗಿ ಸರಬರಾಜು ಆಗುತ್ತಿದ್ದು ಈ ಹಿಂಸಾತ್ಮಕ ಕೃತ್ಯಕ್ಕೆ ಅದುವೇ ಕಾರಣ. ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆ ರಾಜ್ಯದಲ್ಲಿ ಡ್ರಗ್ಸ್ ಜಾಲ … Read more

ಶಿಕಾರಿಪುರದಲ್ಲಿ ಯಡಿಯೂರಪ್ಪ ಜನ್ಮದಿನ ಅದ್ಧೂರಿ ಆಚಾರಣೆ, ಸಾವಿರ ಸಾವಿರ ಜನ ಭಾಗಿ, ಯಾರೆಲ್ಲ ಏನೆಲ್ಲ ಹೇಳಿದರು?

280226 BS Yedyurappa 83 Birthday in Shikaripura

ಶಿಕಾರಿಪುರ: ರಾಜ್ಯದ ಉದ್ದಗಲಕ್ಕೂ ಓಡಾಟ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಏಕೈಕ ಗುರಿಯೊಂದಿಗೆ ಮುನ್ನಡೆಯುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (Yediyurappa) ಹೇಳಿದರು. ಕುಮದ್ವತಿ ಕಾಲೇಜು ಆವರಣದ ಏಕಲವ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಯಡಿಯೂರಪ್ಪ ಅವರ 84ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಮಾತು ಸಾಧನೆಯಾಗಬಾರದು. ಬದಲಿಗೆ ಸಾಧನೆಯೇ ಮಾತು ಆಗಬೇಕು ಎಂಬ ಮಂತ್ರದಲ್ಲಿ ನಂಬಿಕೆ ಇಟ್ಟವನು ನಾನು. ಅದಕ್ಕೆ ಶ್ರಮವಹಿಸಿ ಕೆಲಸ ಮಾಡುವುದು ಅಗತ್ಯ. ಶೋಷಿತರ, ದಮನಿತರ ಏಳಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನ … Read more

ಮಾರ್ಚ್‌ 1ರಂದು ಶಿವಮೊಗ್ಗ ತಾಲೂಕಿನ ಹಲವೆಡೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ಶಿವಮೊಗ್ಗ: ತಾವರೆಚಟ್ನಹಳ್ಳಿ ವಿದ್ಯುತ್‌ ವಿತರಣ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಮಾರ್ಚ್‌ 1 ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (power cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಕುವೆಂಪುನಗರ ಸೂಡ ಸಿ & ಡಿ ಬ್ಲಾಕ್, ಶಿವಕುಮಾರಸ್ವಾಮಿ ಲೇಔಟ್ ಮತ್ತು ಇನ್ಪ್ರಾ ಸಿಟಿ, ಮ್ಯಾಕ್ಸ್ ಲೇಔಟ್, ಎಂ.ಇ.ಎಸ್. ಲೇಔಟ್, ರೆಡ್ಡಿ ಲೇಔಟ್, ಸವಳಂಗರಸ್ತೆ, ರತ್ನಗಿರಿ ನಗರ ಮತ್ತು ಹುಣಸೋಡು, ಕಲ್ಲಗಂಗೂರು … Read more

ಬಂಜಾರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಶೋಕ್‌ ನಾಯ್ಕ್‌ ದಿಢೀರ್‌ ರಾಜೀನಾಮೆ, ಕಾರಣವೇನು?

Former-MLA-K-B-Ashok-Naik

ಶಿವಮೊಗ್ಗ: ಜಿಲ್ಲಾ ಬಂಜಾರ (Banjara) ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅಶೋಕ್‌ ನಾಯ್ಕ್, ಸಂಘದ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜೀನಾಮೆಗೆ ಕಾರಣವೇನು? ವೈಯಕ್ತಿಕ ಮತ್ತು ಕುಟುಂಬದ ಜವಾಬ್ದಾರಿ: ಪ್ರಸಕ್ತ ಸನ್ನಿವೇಶದಲ್ಲಿ ಕುಟುಂಬ ಹಾಗೂ ವೈಯಕ್ತಿಕ ಕೆಲಸಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದ ಅನಿವಾರ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಹೊಸ ಪೀಳಿಗೆಗೆ ಅವಕಾಶ: ಸಮಾಜದ … Read more