ಶಿವಮೊಗ್ಗ ಲೈವ್.ಕಾಂ | 7 ಡಿಸೆಂಬರ್ 2018
ನಗರದ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ನೀಡಲು, ಪಾಲಿಕೆ ಅಧಿಕಾರಿಗಳು ಬೆಳಗ್ಗೆಯಿಂದಲೇ ಆಪರೇಷನ್ ಆರಂಭಿಸಿದ್ದಾರೆ. ಪೊಲೀಸ್ ರಕ್ಷಣೆಯೊಂದಿಗೆ ಜೆಸಿಬಿ ತಂದು, ಸೆಲ್ಲರ್’ಗಳ ತೆರವಿಗೆ ಮುಂದಾಗಿದ್ದಾರೆ.
ಕುವೆಂಪು ರಸ್ತೆಯಿಂದ ಆಪರೇಷನ್ ಶುರುವಾಗಿದೆ. ಹಾಗಾಗಿ ಕಟ್ಟಡ ಮಾಲೀಕರಲ್ಲಿ ನಡುಕ ಶುರುವಾಗಿದೆ. ಶಿವಮೊಗ್ಗ ಸಿಟಿಯಲ್ಲಿ 86 ಕಟ್ಟಡಗಳಿಗೆ ನೊಟೀಸ್ ನೀಡಲಾಗಿದೆ. ಆದರೂ ಸೆಲ್ಲರ್ ತೆರವು ಮಾಡದೆ ಇದ್ದಿದ್ದಕ್ಕೆ, ಪಾಲಿಕೆ ಅಧಿಕಾರಿಗಳೇ ಫೀಲ್ಡಿಗಿಳಿದಿದ್ದಾರೆ.
ಏನಿದು ಸೆಲ್ಲರ್ ತೆರುವು ಕಾರ್ಯಾಚರಣೆ?
ಶಿವಮೊಗ್ಗ ನಗರದಲ್ಲಿ ವಾಣಿಜ್ಯ ಬಳಕೆಗೆ ಕಟ್ಟಡ ನಿರ್ಮಿಸಬೇಕಿದ್ದರೆ, ಕೆಳ ಅಂತಸ್ತನ್ನು ವಾಹನಗಳ ಪಾರ್ಕಿಂಗ್’ಗೆ ಬಿಟ್ಟುಕೊಡಬೇಕು. ಇಲ್ಲವಾದಲ್ಲಿ ಕಟ್ಟ ನಿರ್ಮಾಣಕ್ಕೆ ಪಾಲಿಕೆ ಅನುಮತಿ ಕೊಡುವುದಿಲ್ಲ. ಆದರೆ, ಕಟ್ಟಡ ನಿರ್ಮಾಣದ ಬಳಿಕ, ಸೆಲ್ಲರ್’ಗಳನ್ನು ಪಾರ್ಕಿಂಗ್’ಗೆ ಬಿಟ್ಟುಕೊಡದೇ, ವಾಣಿಜ್ಯ ಕಾರಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ನಗರದ ವಿವಿಧೆಡೆ ಪಾರ್ಕಿಂಗ್ ಸಮಸ್ಯೆ ಸೃಷ್ಟಿಯಾಗಿತ್ತು. ಇದಕ್ಕೆ ಮುಕ್ತಿ ನೀಡುವ ಸಲುವಾಗಿಯೇ, ಪಾಲಿಕೆ ಅಧಿಕಾರಿಗಳು ಫೀಲ್ಡಿಗಿಳಿದಿದ್ದಾರೆ.
‘ಒಂದೇ ಒಂದು ಚಾನ್ಸ್ ಕೊಡಿ.. ಪ್ಲೀಸ್’
ಇನ್ನು, ಪಾಲಿಕೆ ಅಧಿಕಾರಿಗಳು ಜೆಸಿಬಿ ಜೊತೆಗೆ ಕಟ್ಟಡಗಳ ಬಳಿಗೆ ಬರುತ್ತಿದ್ದಂತೆ, ಬೆಳಂಬೆಳಗ್ಗೆ ಕಟ್ಟಡ ಮಾಲೀಕರು ಓಡೋಡಿ ಬಂದಿದ್ದಾರೆ. ಸೆಲ್ಲರ್’ಗಳನ್ನು ತಾವೇ ತೆರವು ಮಾಡುವುದಾಗಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಪಾಲಿಕೆ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ. ಆದರೆ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಅಂತಲೂ ಸ್ಪಷ್ಪಪಡಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
