ಶಿವಮೊಗ್ಗ ಲೈವ್.ಕಾಂ | SHIMOGA | 09 ಡಿಸೆಂಬರ್ 2019
ಅರಸಿಕೆರೆ ತುಮಕೂರು ನಡುವೆ ಬಾಣಸಂದ್ರ ರೈಲ್ವೆ ನಿಲ್ದಾಣ ಯಾರ್ಡ್’ನಲ್ಲಿ ವಿವಿಧ ಕಾಮಗಾರಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲುಗಳನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಡಿಸೆಂಬರ್ 10 ರಿಂದ 13ರವರೆಗೆ ಕಾಮಗಾರಿಗಳು ನಡೆಯಲಿದೆ. ಈ ಅವಧಿಯಲ್ಲಿ ಹಲವು ರೈಲುಗಳನ್ನು ಕ್ಯಾನ್ಸಲ್, ಕೆಲವುಗಳನ್ನು ಡೈವರ್ಟ್ ಮಾಡಲಾಗಿದೆ.
ಶಿವಮೊಗ್ಗ ಬೆಂಗಳೂರು ಪ್ಯಾಸೆಂಜರ್ ರದ್ದು
ಈ ಮಾರ್ಗದಲ್ಲಿ ಸಾಗುವ ಬೆಂಗಳೂರು ಶಿವಮೊಗ್ಗ ಬೆಂಗಳೂರು ಪ್ಯಾಸೆಂಜರ್ ರೈಲು ಕ್ಯಾನ್ಸಲ್ ಮಾಡಲಾಗಿದೆ. ರೈಲು ಸಂಖ್ಯೆ 56917 / 56918 ಬೆಂಗಳೂರು ಶಿವಮೊಗ್ಗ ಬೆಂಗಳೂರು ಪ್ಯಾಸೆಂಜರ್ ರೈಲು ರದ್ದುಗೊಳಿಸಲಾಗಿದೆ. ಡಿಸೆಂಬರ್ 10 ಮತ್ತು 13ರಂದು ಈ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಶಿವಮೊಗ್ಗ ಬೆಂಗಳೂರು ಪ್ಯಾಸೆಂಜರ್ ರೈಲು ಪ್ರತಿದಿನ ಮಧ್ಯಾಹ್ನ 12.30ಕ್ಕೆ ಶಿವಮೊಗ್ಗದಿಂದ ಹೊರಡುತ್ತಿತ್ತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಈ ಮೇಲ್ ಐಡಿ | [email protected]
Train No.56917/56918 KSR Bengaluru-Shivamogga Town-KSR Bengaluru passenger journeys commencing on 10.12.2019 and 13.12.2019 are cancelled.
