SHIVAMOGGA LIVE NEWS | 28 ಮಾರ್ಚ್ 2022
ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್ ದರ ಪುನಃ ಏರಿಕೆ ಆಗಿದೆ. ಇದರಿಂದ ವಾಹನ ಸವಾರರಿಗೆ ಭೀತಿ ಎದುರಾಗಿದೆ.
ಇವತ್ತು ಪೆಟ್ರೋಲ್ ದರ ಪ್ರತಿ ಲೀಟರ್’ಗೆ 31 ಪೈಸೆ ಏರಿಕೆಯಾಗಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ದರ 106.22 ರೂ.ಗೆ ಏರಿಕೆಯಾಗಿದೆ.
ಒಟ್ಟು ಎಷ್ಟು ರೂ. ಏರಿಕೆ?: ಮಾರ್ಚ್ 22ರಂದು 84 ಪೈಸೆ, ಮಾ.23ರಂದು 84 ಪೈಸೆ, ಮಾ.25ರಂದು 81 ಪೈಸೆ, ಮಾರ್ಚ್ 26ರಂದು 77 ಪೈಸೆ, ಮಾರ್ಚ್ 27ರಂದು 54 ಪೈಸೆ, ಮಾರ್ಚ್ 28ರಂದು 31 ಪೈಸೆ ಹೆಚ್ಚಳವಾಗಿದೆ. ಇದೊಂದು ವಾರದಲ್ಲಿ 4.11 ರೂ. ಹೆಚ್ಚಳವಾಗಿದೆ.
ಇನ್ನು, ಡಿಸೇಲ್ ದರ ಪ್ರತಿ ಲೀಟರ್’ಗೆ 34 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಪ್ರತಿ ಲೀಟರ್ ಡಿಸೇಲ್ ದರ 90.24 ರೂ.ಗೆ ಏರಿಕೆ ಆಗಿದೆ.
ಒಟ್ಟು ಎಷ್ಟು ರೂ. ಏರಿಕೆ?: ಮಾರ್ಚ್ 22ರಂದು 77 ಪೈಸೆ, ಮಾ.23ರಂದು 79 ಪೈಸೆ, ಮಾ.25ರಂದು 78 ಪೈಸೆ, ಮಾ.26ರಂದು 72 ಪೈಸೆ, ಮಾರ್ಚ್ 27ರಂದು 54 ಪೈಸೆ, ಮಾರ್ಚ್ 28ರಂದು 34 ಪೈಸೆ ಏರಿಕೆಯಾಗಿದೆ. ಈ ವಾರದಲ್ಲಿ ಡಿಸೇಲ್ ದರ 3.94 ರೂ. ದುಬಾರಿಯಾಗಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200