SHIVAMOGGA LIVE NEWS | 26 JANUARY 2023
SHIMOGA | ಶಾಲೆ, ಕಾಲೇಜು ಸಮೀಪ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಪೆಟ್ಟಿಗೆ ಅಂಗಡಿಗಳು, ಜೆರಾಕ್ಸ್ ಶಾಪ್, ಬೇಕರಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವಿಶೇಷ ಕಾರ್ಯಾಚರಣೆ ನಡೆಸಿ 557 ಕೋಟ್ಪಾ ಪ್ರಕರಣಗಳು (KOTPA Case), 7 ಕೋಟ್ಪಾ ಎಫ್ಐಆರ್, 182 ಲಘು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯು ಪೊಲೀಸರು ಕಾರ್ಯಾಚರಣೆ ನಡೆಸಿದರು. 64 ಶಾಲೆ, ಕಾಲೇಜುಗಳ ಸಮೀಪ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ.
ಎಲ್ಲೆಲ್ಲಿ ಎಷ್ಟು ಕೇಸ್ ಹಾಕಲಾಗಿದೆ?
ಶಿವಮೊಗ್ಗ ಎ ಉಪ ವಿಭಾಗದಲ್ಲಿ 14 ಶಾಲೆ, ಕಾಲೇಜು ಬಳಿ ಕಾರ್ಯಾಚರಣೆ ನಡೆಸಿ 110 ಕೋಟ್ಪಾ ಸ್ಥಳದಲ್ಲೆ ದಂಡ ಹಾಕಲಾಗಿದೆ. 2 ಕೋಟ್ಪಾ ಕಾಯ್ದೆ (KOTPA Case) ಅಡಿ ಎಫ್ಐಆರ್, 2 ಲಘು ಪ್ರಕರಣ ದಾಖಲು ಮಾಡಲಾಗಿದೆ.
ಶಿವಮೊಗ್ಗ ಬಿ ಉಪ ವಿಭಾಗದಲ್ಲಿ 15 ಶಾಲೆ, ಕಾಲೇಜು ಬಳಿ ಕಾರ್ಯಾಚರಣೆ ನಡೆಸಲಾಯಿತು. 146 ಕೋಟ್ಪಾ ಸ್ಥಳ ದಂಡ, 30 ಲಘು ಪ್ರಕರಣ ದಾಖಲು
ಶಿಕಾರಿಪುರ ಉಪ ವಿಭಾಗದಲ್ಲಿ 6 ಶಾಲೆ, ಕಾಲೇಜುಗಳ ಬಳಿ 41 ಕೋಟ್ಪಾ ಸ್ಥಳ ದಂಡ, 97 ಲಘು ಪ್ರಕರಣ.
ಸಾಗರ ಉಪ ವಿಭಾಗದಲ್ಲಿ 5 ಶಾಲೆ, ಕಾಲೇಜು ಬಳಿ 29 ಕೋಟ್ಪಾ ಸ್ಥಳ ದಂಡ ಪ್ರಕರಣಗಳು. ಭದ್ರಾವತಿಯಲ್ಲಿ 17 ಶಾಲೆ, ಕಾಲೇಜು ಬಳಿ 136 ಕೋಟ್ಪಾ ಸ್ಥಳ ದಂಡ ಪ್ರಕರಣ. 5 ಕೋಟ್ಪಾ ಕಾಯ್ದೆಯಡಿ ಎಫ್ಐಆರ್ ದಾಖಲು.
ತೀರ್ಥಹಳ್ಳಿ ಉಪ ವಿಭಾಗದಲ್ಲಿ 7 ಶಾಲೆ, ಕಾಲೇಜುಗಳ ಬಳಿ 95 ಕೋಟ್ಪಾ ಸ್ಥಳ ದಂಡ ಪ್ರಕರಣ. 53 ಲಘು ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ – ಶಾಲೆ ಮಕ್ಕಳೊಂದಿಗೆ ಸಾಲಿನಲ್ಲಿ ಕುಳಿತು ಬಿಸಿಯೂಟ ಮಾಡಿದ ಐಪಿಎಸ್ ಅಧಿಕಾರಿ