ಶಿವಮೊಗ್ಗ ಲೈವ್.ಕಾಂ | SORABA | 14 ಅಕ್ಟೋಬರ್ 2019

ಸೊರಬ ಜೂನಿಯರ್ ಕಾಲೇಜು ಬಳಿ ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 12 ಜನರನ್ನು ಅರೆಸ್ಟ್ ಮಾಡಲಾಗಿದೆ.

ಜೂನಿಯರ್ ಕಾಲೇಜಿನ ಜೋತಾಡೆ ಕಟ್ಟಡದಲ್ಲಿದ್ದ ಜನತಾ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್’ನಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಡಿಸಲಾಗುತ್ತಿತ್ತು. ಶಿಕಾರಿಪುರದ ಎಎಸ್’ಪಿ ನಿವಾಸಲು ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ದಾಳಿಯಲ್ಲಿ 95,360 ರೂ. ನಗದು, ಟೇಬಲ್, ಚೇರು, ಇಸ್ಪಿಟ್ ಕಾರ್ಡುಗಳನ್ನು ವಶಕ್ಕೆ ಪಡೆಯಲಾಗಿದೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]