ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 APRIL 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ELECTION SPECIAL : ಶಾಸಕರಾಗಿದ್ದವರು ಸಂಸದರಾಗಬಹುದು ಎಂದು ತೋರಿಸಿದ್ದು ಎ.ಆರ್.ಬದರಿನಾರಾಯಣ. ಆದರೆ ಇವರು ಸಂಸದರಾಗಿ ಉಳಿದದ್ದು ಕೇವಲ ಮೂರು ವರ್ಷ.
ಎರಡು ಕಡೆ ಶಾಸಕರಾಗಿದ್ದರು
ಎ.ಆರ್.ಬದರಿನಾರಾಯಣ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿವಹಿಸಿದ್ದರು. ಮಹಾತ್ಮ ಗಾಂಧೀಜಿ ಅವರ ಅನುಯಾಯಿತು. ತೀರ್ಥಹಳ್ಳಿ ಮತ್ತು ಶಿವಮೊಗ್ಗ ಎರಡು ಕಡೆ ಪ್ರತ್ಯೇಕ ಅವಧಿಯಲ್ಲಿ ಶಾಸಕರಾಗಿದ್ದರು. ಕರ್ನಾಟಕ ಏಕೀರಣದ ಬಳಿಕ 1957ರಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಶಾಂತವೇರಿ ಗೋಪಾಲಗೌಡ ಅವರ ವಿರುದ್ಧ ನಿಂತು ಗೆಲುವು ಸಾಧಿಸಿದ್ದರು. 1967ರಲ್ಲಿ ಶಿವಮೊಗ್ಗ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದರು. ಒಮ್ಮೆ ಶಿಕ್ಷಣ ಸಚಿವರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು.
ಮೂರೇ ವರ್ಷ ಸಂಸದರಾಗಿದ್ದರು
ತುರ್ತು ಪರಿಸ್ಥಿತಿ ನಂತರ 1977ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ, ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಬದರಿನಾರಾಯಣ ಆಯ್ಕೆಯಾಗಿದ್ದರು. ಈ ಸಂದರ್ಭ ಜನತಾ ಪಕ್ಷ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ 1980ರ ಹೊತ್ತಿಗೆ ಸರ್ಕಾರ ಪತನವಾಗಿ, ಲೋಕಸಭೆ ವಿಸರ್ಜನೆಯಾಯಿತು. 1980ರ ಲೋಕಸಭೆ ಚುನಾವಣೆ ಸಂದರ್ಭ ಇಂದಿರಾ ಗಾಂಧಿ ಅಲೆ ಜೋರಿತ್ತು. ಆಗ ರಾಜ್ಯದಲ್ಲಿ ಇಂದಿರಾ ಕಾಂಗ್ರೆಸ್ ಮತ್ತು ದೇವರಾಜು ಅರಸು ಕಾಂಗ್ರೆಸ್ ಎಂದು ಪಕ್ಷ ಇಬ್ಭಾಗವಾಗಿತ್ತು. ಬದರಿನಾರಾಯಣ ಅವರು ಅರಸು ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಆದರೆ ಅವರಿಗೆ ಸೋಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗ, ದಾವಣಗೆರೆ ಎರಡೂ ಕಡೆಗೂ ಇವರು ಸಂಸದರಾಗಿದ್ದರು, ಯಾಕಿಂಗೆ?