ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 2 APRIL 2024
ELECTION NEWS : ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರೊಂದಿಗೆ ಪತಿ, ನಟ ಶಿವರಾಜ್ ಕುಮಾರ್ ಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಕಾಂಗ್ರೆಸ್ ಪಾಲಿಗೆ ಕ್ರೌಡ್ ಪುಲ್ಲರ್ (ಜನರನ್ನು ಸೆಳೆಯುವುದು) ಆಗಿದ್ದಾರೆ. ಹೋದಲ್ಲೆಲ್ಲ ಶಿವಣ್ಣಗೆ ಹಾಡು, ಡೈಲಾಗ್, ಡಾನ್ಸ್‌ಗೆ ಡಿಮಾಂಡ್ ಕೇಳಿ ಬರುತ್ತಿದೆ. ಇದನ್ನೆ ಈಗ ಬಿಜೆಪಿ ಟ್ರೋಲ್ ವಸ್ತುವಾಗಿ ಬಳಸಿಕೊಳ್ಳುತ್ತಿದೆ.
ಕ್ರೌಡ್ ಪುಲ್ಲರ್ ಆದ ಶಿವಣ್ಣ
ಗೀತಾ ಶಿವರಾಜ್ ಕುಮಾರ್ ಅವರೊಂದಿಗೆ ಶಿವರಾಜ್ ಕುಮಾರ್ ಅವರು ಕ್ಷೇತ್ರದಾದ್ಯಂತ ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ. ಶಿವಣ್ಣ ಜೊತೆಯಲ್ಲಿರುವುದು ಕಾಂಗ್ರೆಸ್‌ಗೆ ಲಾಭವಾಗಿದೆ. ಜನ ಸೇರಿಸಲು ಕಾರ್ಯಕರ್ತರು ಕಷ್ಟಪಡಬೇಕಾಗಿಲ್ಲ. ಇನ್ನು, ಪ್ರಚಾರಕ್ಕೆ ಹೋದಲೆಲ್ಲ ಹಾಡು, ಡ್ಯಾನ್ಸ್, ಡೈಲಾಗ್‌ಗೆ ಡಿಮಾಂಡ್ ಬೆಳೆಯುತ್ತಿದೆ. ಶಿವರಾಜ್ ಕುಮಾರ್ ಅವರು ಜನರ ಬೇಡಿಕೆಯಂತೆ ಡೈಲಾಗ್, ಹಾಡು ಹೇಳುತ್ತಿದ್ದಾರೆ. ‘ಗೀತಾ ಶಿವರಾಜ್ ಕುಮಾರ್ ಅವರು ಗೆದ್ದ ಮೇಲೆ ನಿಮ್ಮ ಮುಂದೆ 24 ಗಂಟೆ ನಿರಂತರ ಡಾನ್ಸ್ ಮಾಡುತ್ತೇನೆ’ ಅಂತಾ ಭರವಸೆ ನೀಡಿದ್ದಾರೆ. ಇನ್ನು ಸೆಲ್ಫಿ, ಫೋಟೊಗೆ ಕೂಡ ಜನ ಮುಗಿಬೀಳುತ್ತಿದ್ದಾರೆ.
ರಂಜಿಸುವ ಜೊತೆಗೆ ವಿಷಯ ತಲುಪಿಸಲು ಯತ್ನ
ಶಿವರಾಜ್ ಕುಮಾರ್ ಅವರ ಉಪಸ್ಥಿತಿ ಕಾಂಗ್ರೆಸ್‌ಗೆ ಮತ್ತು ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಶಿವಣ್ಣನ ಹಾಡು, ಡೈಲಾಗ್‌ಗು ಮೊದಲು ಕಾಂಗ್ರೆಸ್ ಮುಖಂಡರು ಗ್ಯಾರಂಟಿ ಯೋಜನೆಗಳು, ಕಾಂಗ್ರೆಸ್‌ನ ಗುರಿ, ಬಿಜೆಪಿ ವಿರುದ್ಧ ಟೀಕೆಯನ್ನು ಜನರಿಗೆ ತಲುಪಿಸುತ್ತಿದ್ದಾರೆ. ಮತ್ತೊಂದೆಡೆ ಶಿವರಾಜ್ ಕುಮಾರ್ ಅವರು ಹಾಡು, ಡೈಲಾಗ್‌ಗೆ ಸೀಮಿತವಾಗಿಲ್ಲ. ‘ನಿಮ್ಮೂರ ಮನೆ ಮಗಳಿಗೆ ತವರಿಗೆ ಉಡುಗೊರೆ ನೀಡಿ ಹರಸಿ. ಕೆಲಸ ಮಾಡದಿದ್ದರೆ ಹೇಳಿ’ ಎಂದು ಪ್ರಚಾರ ಮಾಡುತ್ತಿದ್ದಾರೆ.

ಟ್ರೋಲ್ ಆರಂಭಿಸಿದ ಬಿಜೆಪಿ
ಮತ್ತೊಂದೆಡೆ ಶಿವರಾಜ್ ಕುಮಾರ್ ಅವರ ಹಾಡು, ಡೈಲಾಗ್‌ಗಳ ವಿಚಾರವನ್ನು ಬಿಜೆಪಿ ಟ್ರೋಲ್ ವಸ್ತುವಾಗಿ ಬಳಸಿಕೊಂಡಿದೆ. ಈ ಹಿಂದೆ ಗೀತಾ ಶಿವರಾಜ್ ಕುಮಾರ್ ಅವರು ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭ ಬಿಜೆಪಿಯಲ್ಲಿದ್ದ ಆಯನೂರು ಮಂಜುನಾಥ್ ನೀಡಿದ್ದ ಹೇಳಿಕೆಯನ್ನು ಟ್ರೋಲ್ ವಸ್ತುವಾಗಿ ಮಾಡಿಕೊಳ್ಳಲಾಗಿದೆ. ‘ಅಭ್ಯರ್ಥಿ ಮಾತನಾಡುವುದಿಲ್ಲ. ಪಕ್ಕದಲ್ಲಿ ಇವರು ಹಾಡು ಹೇಳುತ್ತಾರೆ. ಪಾರ್ಲಿಮೆಂಟ್ ಮನರಂಜನೆ ಕೊಡುವ ಜಾಗ ಅಂದುಕೊಂಡಿದ್ದಾರʼ ಎಂದು ಪ್ರಶ್ನಿಸಿದ್ದರು. ಈ ವಿಡಿಯೋವನ್ನು ಈಗ ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ – ‘ಬಿಜೆಪಿಯ ರಾಘವೇಂದ್ರ ನಾಳೆ ಬಾ ಗಿರಾಕಿ’, ಶಿವಮೊಗ್ಗದಲ್ಲಿ ಕಾಂಗ್ರೆಸ್ ವಕ್ತಾರ ವ್ಯಂಗ್ಯ, ಕಾರಣವೇನು?
ತಿರುಗೇಟು ನೀಡಿದ ಕಾಂಗ್ರೆಸಿಗರು
ಇತ್ತ ಬಿಜೆಪಿಯ ಟ್ರೋಲ್‌ಗೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ. ‘ಆರಾಧನಾ, ಆಶ್ರಯ, ಗ್ರಾಮೀಣ ಕೃಪಾಂಕ ನೀಡಿದ ಬಂಗಾರಪ್ಪ ಅವರ ಮಗಳು. ಕನ್ನಡದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಡಾ.ರಾಜ್‌ಕುಮಾರ್ ಮನೆಯ ಸೊಸೆಯಾಗಿದ್ದಾರೆ. ಇದಕ್ಕಿಂತಲೂ ಇನ್ನೆಂತಹ ಅರ್ಹತೆ ಬೇಕು. ಇದೇ ಕಾರಣಕ್ಕೆ ಗೀತಾ ಶಿವರಾಜ್ ಕುಮಾರ್ ಅವರು ಸಮರ್ಥ ಅಭ್ಯರ್ಥಿ’ ಎಂದು ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ – ಸಂಸತ್ತಿನಲ್ಲಿ ಶಿವಮೊಗ್ಗ ಸಂಸದರು ಕೇಳಿದ ಮೊದಲ ಪ್ರಶ್ನೆ ಏನು? ಸಚಿವರ ಉತ್ತರವೇನಿತ್ತು? ಇಲ್ಲಿದೆ ಡಿಟೇಲ್ಸ್


