ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 NOVEMBER 2022
SHIMOGA | ಜಿಲ್ಲೆಯ ರೈತರಿಗೆ ಅರ್ಥಿಕವಾಗಿ ಬಲ ನೀಡಿದ್ದ ಅಡಕೆ ಈ ಬಾರಿ ಪ್ರಮುಖ ಚುನಾವಣಾ ವಿಷಯವಾಗಿದೆ. ಅಡಕೆ ಮತ್ತು ಅಡಕೆ ಬೆಳೆಗಾರರ ಪರವಾಗಿ ನಿಲ್ಲುವವರಿಗೆ ಹೆಚ್ಚಿನ ಮತ ಲಭಿಸಲಿದೆ ಅನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಟ್ರೆಂಡ್. ಇದೆ ಕಾರಣಕ್ಕೆ ಜಿಲ್ಲೆಯಲ್ಲಿ ಅಡಕೆ ಕೇಂದ್ರಿತ ರಾಜಕಾರಣ ಆರಂಭವಾಗಿದೆ. (adike as election issue)
2023ರ ವಿಧಾನ ಸಭೆ ಚುನಾವಣೆಯಲ್ಲಿ ಅಡಕೆ ಪ್ರಮುಖ ವಿಷಯವಾಗಲಿದೆ. ಅದಕ್ಕೆ ಐದು ಕಾರಣವಿದೆ.
(adike as election issue)
ಕಾರಣ 1 – ಎಲೆ ಚುಕ್ಕೆ ರೋಗ
ಎಲೆ ಚುಕ್ಕೆ ರೋಗ ಅಡಕೆ ಬೆಳಗಾರರ ಭವಿಷ್ಯವನ್ನು ಕರಾಳವಾಗಿಸಿದೆ. ಇಳುವರಿ ಕುಸಿದು ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಕರೋನಾಗಿಂತಲು ವೇಗವಾಗಿ ರೋಗ ಹರಡುತ್ತಿದ್ದು ಔಷಧವು ಇಲ್ಲ, ಪರಿಹಾರವು ಇಲ್ಲದೆ ರೈತರು ಪರಿತಪಿಸುವಂತಾಗಿದೆ. ಹಾಗಾಗಿ ಈ ಬಾರಿ ಅಡಕೆ ಎಲೆ ಚುಕ್ಕೆ ರೋಗ ಪ್ರಮುಖ ರಾಜಕೀಯ ವಿಷಯವಾಗಲಿದೆ.
ರಾಜ್ಯ ಸರ್ಕಾರ ಕೋಟಿ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಈಚೆಗೆ ತಜ್ಞರ ತಂಡವು ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದೆ. ಇದರಿಂದ ರೈತರಿಗಾದ ಪ್ರಯೋಜನವೇನು ಎಂದು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ. ಅಲ್ಲಲ್ಲಿ ಪ್ರತಿಭಟನೆ, ಪಾದಯಾತ್ರೆ, ಹಕ್ಕೊತ್ತಾಯಗಳನ್ನು ನಡೆಸಲಾಗುತ್ತಿದೆ. ಎಲೆ ಚುಕ್ಕೆ ರೋಗ ಮತ್ತು ರಾಜಕೀಯ ಮೇಲಾಟದಲ್ಲಿ ಪರಹಾರ ಸಿಗದೆ ಬೆಳಗಾರನ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ.
(adike as election issue)
ಕಾರಣ 2 – ಟಾಸ್ಕ್ ಫೋರ್ಸ್
ಅಡಕೆ ಬೆಳೆಗಾರರಿಗೆ ಅಭಯ ನೀಡಲು ಸರ್ಕಾರ ಅಡಕೆ ಕಾರ್ಯಪಡೆ ರಚಿಸಿದೆ. ಅಡಕೆ ಬೆಳೆಗಾರರು, ಮಾರಾಟಗಾರರು, ತಜ್ಞರು ಸೇರಿದಂತೆ ಹಲವರು ಕಾರ್ಯಪಡೆಯಲ್ಲಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇದರ ಅಧ್ಯಕ್ಷರಾಗಿದ್ದಾರೆ. ಸಭೆಗಳನ್ನು ನಡೆಸಿ ಅಡಕೆಯ ಮಾನ, ಬೆಳೆಗಾರರ ಭವಿಷ್ಯ ಕಾಪಾಡುವ ಕುರಿತು ಚರ್ಚಿಸಲಾಯಿತು. ಅಡಕೆಯ ಉಪ ಉತ್ಪನ್ನಗಳ ಸಂಶೋಧನೆ, ಉತ್ಪಾದನೆಗೆ ಒತ್ತು ನೀಡಲು ಚಿಂತಿಸಲಾಯಿತು.
ಈ ಮಧ್ಯೆ ವಿರೋಧ ಪಕ್ಷಗಳು ಟಾಸ್ಕ್ ಪೋರ್ಸ್ ವಿರುದ್ಧವು ಆಕ್ರೋಶ ಹೊರ ಹಾಕಿವೆ. ಕಾರ್ಯಪಡೆಯಿಂದ ಆಗಿರುವ ಪ್ರಯೋಜನವೇನು? ಅಡಕೆ ಬೆಳೆಗಾರರಿಗೆ ಕಾರ್ಯಪಡೆ ಬಲ ತುಂಬಲು ವಿಫಲವಾಗಿದೆ ಎಂದು ಆರೋಪಿಸಿವೆ. ಕಾರ್ಯಪಡೆ ಸ್ಥಾಪಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದ ಬೆಳೆಗಾರರು, ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರ ಸಿಗದೆ ಪರಿತಪಿಸುತ್ತಿದ್ದಾರೆ.
(adike as election issue)
ಕಾರಣ 3 – ಸಂಶೋಧನ ಕೇಂದ್ರ
ಅಡಕೆ ಬೆಳೆದರೆ ಹಣವಷ್ಟೆ ಬರುವುದಿಲ್ಲ. ಸಾಲು ಸಾಲು ಸಮಸ್ಯೆಗಳು ಬೆನ್ನು ಹತ್ತುತ್ತವೆ. ಅಡಕೆಗೆ ಒಂದಿಲ್ಲೊಂದು ಸಮಸ್ಯೆ ಇದ್ದಿದ್ದೆ. ಕೊಳೆ ರೋಗದಿಂದ ಎಲೆ ಚುಕ್ಕೆ ರೋಗದವರೆಗೆ ವರ್ಷದಿಂದ ವರ್ಷಕ್ಕೆ ಹೊಸ ಮಾದರಿಯ ಸಮಸ್ಯೆ ಎದುರಾಗುತ್ತದೆ. ಇವುಗಳಿಗೆ ಥಟ್ ಅಂತಾ ಪರಿಹಾರ ಒದಗಿಸಲು ಸಂಶೋಧನ ಕೇಂದ್ರ ಬೇಕು ಎಂಬ ಬೇಡಿಕೆ ಇತ್ತು. ಕಳೆದ ಚುನಾವಣೆ ಹೊತ್ತಿಗೆ ತೀರ್ಥಹಳ್ಳಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಡಕೆ ಸಂಶೋಧನ ಕೇಂದ್ರ ಸ್ಥಾಪನೆಯ ಭರವಸೆ ನೀಡಿದ್ದರು. ಇದು ಮಲೆನಾಡ ಅಡಕೆ ಬೆಳೆಗಾರರಿಗೆ ತುಸು ನೆಮ್ಮದಿ ಮೂಡಿಸಿತ್ತು.
ಅಡಕೆ ಸಂಶೋಧನ ಕೇಂದ್ರವು ಉಳಿದ ಭರವಸೆಗಳಂತೆ ಕನಸಾಗಿಯೆ ಉಳಿದಿದೆ. ಈ ಬಾರಿ ಚುನಾವಣೆಯಲ್ಲಿ ಇದು ಕೂಡ ರಾಜಕಾರಣಿಗಳ ಮತ ಗಳಿಕೆಯ ಪ್ರಮುಖ ವಿಷಯ ವಸ್ತುವಾಗಿದೆ. ಸಂಶೋಧನೆ ಕೇಂದ್ರ ಸ್ಥಾಪಿಸಿಯೇ ಸಿದ್ಧ ಎಂದು ಬಿಜೆಪಿ ಮುಖಂಡರು ವಾದಿಸುತ್ತಿದ್ದಾರೆ. ಈವರೆಗು ಸ್ಥಾಪನೆಯಾಗದಿರಲು ಕಾರಣವೇನು? ಸಂಶೋಧನ ಕೇಂದ್ರ ರೂಪುರೇಷ ಏನು ಎಂದು ವಿರೋಧ ಪಕ್ಷದವರು ಪ್ರಶ್ನಿಸುತ್ತಿದ್ದಾರೆ.
(adike as election issue)
ಕಾರಣ 4 – ಕೋರ್ಟ್ ಅಂಗಳದಲ್ಲಿ ಅಡಕೆಯ ಮಾನ
‘ಅಡಕೆಯಿಂದ ಕ್ಯಾನ್ಸರ್ ಬರಲಿದೆ’, ‘ಆರೊಗ್ಯಕ್ಕೆ ಹಾನಿಕಾರಕ’ ಎಂದು ಪದೇ ಪದೆ ಸುದ್ದಿಯಾಗುತ್ತಿತ್ತು. ಇದು ಅಡಕೆ ಬೆಲೆ ಪಾತಾಳಕ್ಕೆ ಕುಸಿಯುಂತೆ ಮಾಡುತ್ತಿತ್ತು. ಅಡಕೆ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣವಿದೆ. ಕಳೆದೊಂದು ದಶಕದಿಂದ ವಿಚಾರಣೆ ನಡೆಯುತ್ತಿದ್ದು, ಸಂಶೋಧನೆಗಳು ಆಗುತ್ತಿವೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಇದು ಕೂಡ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಮತ ಬ್ಯಾಂಕ್ ಭದ್ರಗೊಳಿಸಲು ಇದು ಪ್ರಮುಖ ವಿಷಯವಾಗಿದೆ.
ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜಿಲ್ಲೆಯ ಲಕ್ಷಾಂತರ ಜನರ ಭವಿಷ್ಯ ಅಡಕೆ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಅಡಕೆ ಪ್ರಮುಖ ಚುನಾವಣಾ ವಿಷಯವಾಗಿದ್ದು, ಪ್ರಣಾಳಿಕೆಗಳಲ್ಲಿ ಜಾಗ ಪಡೆಯುವ ಸಾದ್ಯತೆ ಇದೆ. ಆದರೆ ಗೊಂದಲದಲ್ಲಿ ಇರುವ ಅಡಕೆ ಬೆಳೆಗಾರನ ಮನಸನ್ನು ಗೆಲ್ಲುವವರಾರು ಅನ್ನುವುದು ಕುತೂಹಲ ಮೂಡಿಸಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | 2023ರ ಸಾರ್ವತ್ರಿಕ ರಜೆ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ, ಎಷ್ಟು ರಜೆಗಳಿವೆ?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422