SHIVAMOGGA LIVE NEWS | 19 DECEMBER 2023
SHIMOGA : ಬೈಪಾಸ್ ರಸ್ತೆಯಲ್ಲಿ ಸೇತುವೆ ಉದ್ಘಾಟನೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಉದ್ಘಾಟನೆ ಕಾರ್ಯಕ್ರಮ ಅಧಿಕೃತವೋ ಅನಧಿಕೃತವೋ ಎಂದು ಸಂಸದ ರಾಘವೇಂದ್ರ ಅವರನ್ನು ಪ್ರಶ್ನಿಸಿದ್ದಾರೆ.
4 ಪ್ರಮುಖ ತಕರಾರು
ಕಾಮಗಾರಿ ಪೂರ್ಣಗೊಂಡಿರುವ ಪ್ರಮಾಣಪತ್ರ ಇಲ್ಲದೆ, ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿಲ್ಲ. ಸಂಸದ ರಾಘವೇಂದ್ರ ಅವರು ಏಕಾಏಕಿ ಸೇತುವೆ ಉದ್ಘಾಟಿಸಿದ್ದಾರೆ. ಮುಂದೆ ಅನಾಹುತ ಸಂಭವಿಸಿದೆ ಯಾರು ಜವಾಬ್ದಾರರು?
ಸೇತುವೆ ಉದ್ಘಾಟನೆ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾಗದೆ ಬಿಜೆಪಿ ಕಾರ್ಯಕ್ರಮವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಚಾರ ತಿಳಿಸಿಲ್ಲ. ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಅವರು ಉಪಸ್ಥಿತರಿರಲಿಲ್ಲ. ಅಧಿಕಾರಿಗಳಿಗು ವಿಚಾರ ಗೊತ್ತಿಲ್ಲ. ಕೆಲವು ಬಿಜೆಪಿ ನಾಯಕರನ್ನು ಇಟ್ಟುಕೊಂಡು ತರಾತುರಿಯಲ್ಲಿ ಉದ್ಘಾಟನೆ ನೆರವೇರಿಸಲಾಗಿದೆ.
ಶಿವಮೊಗ್ಗದ ಸೇತುವೆಗಳು, ರಿಂಗ್ ರೋಡ್, ಮೇಲ್ಸೇತುವೆಗಳ ಆಸುಪಾಸಿನಲ್ಲಿ ಬಿಜೆಪಿ ಮುಖಂಡರ ಆಸ್ತಿಪಾಸ್ತಿ ಇದೆ. ಅವರಿಗೆ ಅನುಕೂಲ ಆಗುವಂತೆ ಯೋಜನೆ ರೂಪಿಸಲಾಗಿದೆ. ಸಿಗಂದೂರು ಸೇತುವೆ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈವರೆಗು ಆ ಕಾಮಗಾರಿ ಪೂರ್ಣಗೊಂಡಿಲ್ಲ.
ಸಾಗರದಿಂದ ತುಮಕೂರಿನವರೆಗೆ ರಸ್ತೆ ಅಗಲೀಕರಣಕ್ಕೆ 6 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ನಿತಿನ್ ಗಡ್ಕರಿ ಅವರು ತಿಳಿಸಿದ್ದರು. ಆದರೆ ಈಗ ತ್ಯಾವರೆಕೊಪ್ಪದಿಂದ ತಾಳಗುಪ್ಪದವರೆಗೆ 650 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣ ಮಾಡುವುದಾಗಿ ಸಂಸದ ರಾಘವೇಂದ್ರ ತಿಳಿಸಿದ್ದಾರೆ. ಹಾಗಾದರೆ ಹಿಂದೆ ನಿತಿನ್ ಗಡ್ಕರಿ ಅವರು ಹೇಳಿದ 6 ಸಾವಿರ ಕೋಟಿ ರೂ. ಏನಾಯಿತು. ಈ 650 ಕೋಟಿ ರೂ. ಅದಕ್ಕೆ ಹೆಚ್ಚುವರಿಯಾಗಿರುವ ಹಣವೆ ಎನ್ನುವುದನ್ನು ರಾಘವೇಂದ್ರ ಸ್ಪಷ್ಟಪಡಿಸಬೇಕು.
ಇದನ್ನೂ ಓದಿ – ಹೊಳೆ ಬಸ್ ಸ್ಟಾಪ್ನಿಂದ ಅಮೀರ್ ಅಹಮದ್ ಸರ್ಕಲ್ವರೆಗೆ ಪಾರ್ಕಿಂಗ್ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಆದೇಶ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200