Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಕ್ಷೇತ್ರ ಪರಿಚಯ | ಭದ್ರಾವತಿ – ಯಾರೆ ಗೆದ್ದರು ಇಲ್ಲಿ ಜನರ ಬೇಡಿಕೆ ಒಂದೇ

ಕ್ಷೇತ್ರ ಪರಿಚಯ | ಭದ್ರಾವತಿ – ಯಾರೆ ಗೆದ್ದರು ಇಲ್ಲಿ ಜನರ ಬೇಡಿಕೆ ಒಂದೇ

08/12/2022 6:58 PM
ನಿತಿನ್‌ ಕೈದೊಟ್ಲು

SHIVAMOGGA LIVE NEWS | 8 DECEMBER 2022

ಭದ್ರಾವತಿ : ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಕೈಗಾರಿಕ ಹಬ್ ಆಗಿದ್ದ ಕ್ಷೇತ್ರ, ಭದ್ರಾವತಿ. ಇಲ್ಲಿ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷಗಳ ಹಣಾಹಣಿಗಿಂತಲು ವ್ಯಕ್ತಿ ಪ್ರತಿಷ್ಠೆಯೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಬಾರಿ ತುಸು ವಿಭಿನ್ನ ಚಿತ್ರಣವಿದೆ. ಮಾಜಿ ಶಾಸಕ ಅಪ್ಪಾಜಿ ಗೌಡ ಅವರು ಇಲ್ಲದೆ ಈ ಚುನಾವಣೆ ನಡೆಯುತ್ತಿದೆ. Bhadravathi Legislative Assembly

 

ಇವತ್ತಿನ ನ್ಯೂಸ್‌
» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

Shimoga Nanjappa Hospital

1957ರಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಮೊದಲ ಚುನಾವಣೆ ನಡೆಯಿತು. ಆ ಬಳಿಕ ಕ್ಷೇತ್ರವು 14 ವಿಧಾನ ಸಭೆ ಚುನಾವಣೆ ಕಂಡಿದೆ. 1994ರ ಚುನಾವಣೆ ಬಳಿಕ ಈ ಕ್ಷೇತ್ರದ ರಾಜಕೀಯ ಮತ್ತೊಂದು ಮಜಲು ಪಡೆಯಿತು. ಇಬ್ಬರು ಪ್ರಬಾವಿ ನಾಯಕರ ನಡುವೆ ನೇರಾನೇರ ಕದನ ಏರ್ಪಟ್ಟಿತು.

Bhadravathi Legislative Assembly

ಕಾರ್ಮಿಕ ಕೇಂದ್ರಿತ ರಾಜಕೀಯ

Kshetra-Parichaya-Logoವಿಐಎಸ್ಎಲ್, ಎಂಪಿಎಂ ಕಾರ್ಖಾನೆಗಳು ಇದ್ದಿದ್ದರಿಂದ ಭದ್ರಾವತಿಯನ್ನು ಶಿವಮೊಗ್ಗ ಜಿಲ್ಲೆಯ ಕೈಗಾರಿಕ ಹಬ್ ಎಂದು ಬಣ್ಣಿಸಲಾಗುತ್ತಿತ್ತು. ಕಾರ್ಮಿಕ ಸಂಘಟನೆಗಳು, ಕಾರ್ಮಿಕರು ನಾಯಕರು ಇಲ್ಲಿ ಅತ್ಯಂತ ಪ್ರಭಾವಶಾಲಿಗಳಾಗಿದ್ದರು. ಈಗ ರಾಜಕೀಯವಾಗಿ ಸಕ್ರಿಯವಾಗಿರುವ ಹಲವರು ಕಾರ್ಮಿಕ ನಾಯಕರಾಗಿ ಹೋರಾಟಗಳು ನಡೆಸಿದವರೆ.

ಭದ್ರಾವತಿ ಕ್ಷೇತ್ರವು 1957ರಲ್ಲಿ ಮೊದಲ ವಿಧಾನಸಭೆ ಚುನಾವಣೆ ಕಂಡಿತು. ಆಗ ಡಿ.ಟಿ.ಸೀತಾರಾಮ ರಾವ್ (ಕಾಂಗ್ರೆಸ್), 1962ರಲ್ಲಿ ಟಿ.ಡಿ.ದೇವೇಂದ್ರಪ್ಪ (ಕಾಂಗ್ರೆಸ್), 1967ರಲ್ಲಿ ಎ.ಕೆ.ಅನ್ವರ್ (ಪ್ರಜಾ ಸೋಷಿಯಲಿಸ್ಟ್ ಪಾರ್ಟಿ), 1972ರಲ್ಲಿ ಎ.ಕೆ.ಅನ್ವರ್ (ಕಾಂಗ್ರೆಸ್), 1978ರಲ್ಲಿ ಜಿ.ರಾಜಶೇಖರ್, 1983ರಲ್ಲಿ ಎಸ್.ಸಿದ್ದಪ್ಪ (ಜನತಾ ಪಕ್ಷ), 1985ರಲ್ಲಿ ಎಸ್.ಸಿದ್ದಪ್ಪ (ಸ್ವತಂತ್ರ), 1989ರಲ್ಲಿ ಇಸಾಮಿಯಾ (ಕಾಂಗ್ರೆಸ್) ಆಯ್ಕೆಯಾಗಿದ್ದರು.

ಇದನ್ನೂ ಓದಿ – ಕ್ಷೇತ್ರ ಪರಿಚಯ | ಶಿವಮೊಗ್ಗ ಗ್ರಾಮಾಂತರ – 2 ಪರ್ಸೆಂಟ್ ಮತಗಳಿಂದ ಗೆಲುವು, ಸೋಲು ನಿರ್ಧಾರವಾಗಿತ್ತು

MJ Appaji Gowda Bhadravathi

1994 ಮತ್ತು 1999ರಲ್ಲಿ ಎಂ.ಜೆ.ಅಪ್ಪಾಜಿ ಗೌಡ (ಸ್ವತಂತ್ರ), 2004ರಲ್ಲಿ ಬಿ.ಕೆ.ಸಂಗಮೇಶ್ವರ (ಸ್ವತಂತ್ರ), 2008ರಲ್ಲಿ ಬಿ.ಕೆ.ಸಂಗಮೇಶ್ವರ (ಕಾಂಗ್ರೆಸ್), 2013ರಲ್ಲಿ ಎಂ.ಜೆ.ಅಪ್ಪಾಜಿಗೌಡ (ಜೆಡಿಎಸ್), 2018ರಲ್ಲಿ ಬಿ.ಕೆ.ಸಂಗಮೇಶ್ವರ (ಕಾಂಗ್ರೆಸ್) ಗೆದ್ದಿದ್ದಾರೆ.

Bhadravathi Legislative Assembly

2018ರ ಚುನಾವಣೆ ಫಲಿತಾಂಶ

ಅಭ್ಯರ್ಥಿಪಡೆದ ಮತ
ಬಿ.ಕೆ.ಸಂಗಮೇಶ್ವರ75,722
ಎಂ.ಜೆ. ಅಪ್ಪಾಜಿಗೌಡ64,155
ಗೆಲುವಿನ ಅಂತರ11,567

BK Sangameshwara Bhadravathi

2018ರ ಮತದಾರರ ವಿವರ

ಒಟ್ಟು ಮತದಾರರು2,07,749
ಚಲಾವಣೆಯಾದ ಮತ1,51,450
ಶೇಕಡವಾರು ಮತದಾನ73.67

ಜಾತಿವಾರು ಬಲಾಬಲ

ಭದ್ರಾವತಿ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಇದರ ಹೊರತು ಲಿಂಗಾಯತ ಸಮುದಾಯ, ಮುಸ್ಲಿಮರು, ಪರಿಶಿಷ್ಟ ಜಾತಿ, ಪಂಗಡದವರು ನಿರ್ಣಾಯಕರಾಗುತ್ತಾರೆ. ಕುರುಬ ಸಮುದಾಯ, ಬ್ರಾಹ್ಮಣರು, ಈಡಿಗ ಸಮುದಾಯದವರು ಕೂಡ ಇಲ್ಲಿ ಪ್ರಮುಖವಾಗುತ್ತಾರೆ.

ಅಪ್ಪಾಜಿಗೌಡರಿಲ್ಲದ ಮೊದಲ ಚುನಾವಣೆ

ಭದ್ರಾವತಿ ಕ್ಷೇತ್ರದಲ್ಲಿ ಮಾಜಿ ಶಾಸಕ ಅಪ್ಪಾಜಿ ಗೌಡ ಅವರು ಇಲ್ಲದ ಮೊದಲ ಚುನಾವಣೆ ಇದು. ಹಾಗಾಗಿ ಜೆಡಿಎಸ್ ಪಕ್ಷದಿಂದ ಅಪ್ಪಾಜಿ ಗೌಡ ಅವರ ಪತ್ನಿ ಶಾರದಾ ಅಪ್ಪಾಜಿಗೌಡ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಇನ್ನು, ಕಾಂಗ್ರೆಸ್ ಪಕ್ಷದಿಂದ ಬಿ.ಕೆ.ಸಂಗಮೇಶ್ವರ ಅವರು ಪುನರಾಯ್ಕೆ ಬಯಸಿ ಅಖಾಡಕ್ಕೆ ಇಳಿಯಲಿದ್ದಾರೆ.

Sharada Appaji Gowda Bhadravathi

ಕಳೆದ ಬಾರಿಯಂತೆ ಈ ಬಾರಿಯು ಬಿಜೆಪಿಯಲ್ಲಿ ಹಲವು ಅಪೇಕ್ಷಿತರಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಅಪೇಕ್ಷಿತರನ್ನೆಲ್ಲ ಪಕ್ಕಕ್ಕೆ ಸರಿಸಿ ಅಚ್ಚರಿಯ ಅಭ್ಯರ್ಥಿಯನ್ನು ಪ್ರಕಟಿಸಲಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಅಂತಹ ನಿರ್ಧಾರ ಪ್ರಟಿಸುವ ಸಾದ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ – ಕ್ಷೇತ್ರ ಪರಿಚಯ | ಶಿವಮೊಗ್ಗ ಕ್ಷೇತ್ರ, ಜಾತಿ ಲೆಕ್ಕಾಚಾರ ತಲೆ ಕೆಳಗಾಗಿಸಿದ ಕ್ಷೇತ್ರ, ಹಿನ್ನೆಲೆ ಏನು?

2023ರ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಅಪ್ಪಾಜಿ ಗೌಡ ಅವರು ಇಲ್ಲ ಎಂಬ ಸಿಂಪಥಿ ಕೆಲಸ ಮಾಡುತ್ತೆದೆಯೋ, ಸಂಗಮೇಶ್ವರ ಅವರು ಪುನರಾಯ್ಕೆ ಆಗುತ್ತಾರೋ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಆದರೆ ಯಾರೆ ಗೆದ್ದರು ‘ವಿಐಎಸ್ಎಲ್, ಎಂಪಿಎಂ ಕಾರ್ಖಾನೆಗಳನ್ನ ಪುನಾರಂಭ ಮಾಡಿ’ ಎಂದು ಜನರು ಬೇಡಿಕೆ ಇಡುತ್ತಿದ್ದಾರೆ. ಕಾರ್ಖಾನೆಗಳು ಪುನಾರಂಭವಾದರೆ ಕ್ಷೇತ್ರ ಆರ್ಥಿಕವಾಗಿ ಸದೃಢವಾಗಲಿದೆ. ಜೊತೆಗೆ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.

CLICK & JOIN – SHIVAMOGGA LIVE COMMUNITY CLICK & JOIN – SHIVAMOGGA LIVE COMMUNITY

Shimoga Nanjappa Hospital

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article Truck-Tyre-Blast-on-Agumbe-Ghat. BREAKING NEWS – ಆಗುಂಬೆ ಘಾಟಿ ತಿರುವಿನಲ್ಲಿ ಲಾರಿ ಟೈರ್ ಸ್ಫೋಟ
Next Article Areca Price in Shimoga APMC ಅಡಕೆ ರೇಟ್ | 8 ಡಿಸೆಂಬರ್ 2022 | ಶಿವಮೊಗ್ಗ, ಸಾಗರ, ಚನ್ನಗಿರಿ ಸೇರಿ ವಿವಿಧ ಮಾರುಕಟ್ಟೆಯಲ್ಲಿ ಧಾರಣೆ

ಇದನ್ನೂ ಓದಿ

Bhadra-dam-General-Image
BHADRAVATHI

ಭದ್ರಾ ಎಡದಂಡೆ ನಾಲೆ, ಮುಂಗಾರು ಹಂಗಾಮಿನ ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ, ಕಾರಣವೇನು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
17/06/2025
lunatic-dog-manace-at-dasarakallahalli-in-bhadravathi-taluk
BHADRAVATHI

ದಾಸರಕಲ್ಲಹಳ್ಳಿಯಲ್ಲಿ ಬೆಳಗ್ಗೆಯಿಂದ ಬಡಿಗೆ ಹಿಡಿದು ಓಡಾಡುತ್ತಿರುವ ಗ್ರಾಮಸ್ಥರು, ಮಕ್ಕಳು, ಕಾರಣವೇನು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
17/06/2025
Bhadra-Dam-General-Image
BHADRAVATHI

ಭದ್ರಾ ಡ್ಯಾಂ ಒಳ ಹರಿವು ತುಸು ಏರಿಕೆ, ಇವತ್ತು ಎಷ್ಟಿದೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
17/06/2025
Bhadra-Dam-General-Images
BHADRAVATHI

ಭದ್ರಾ ಜಲಾಶಯದ ಒಳ ಹರಿವು ತುಸು ಹೆಚ್ಚಳ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
16/06/2025
BHADRAVATHI-NEWS-UPDATE
BHADRAVATHI

ಜನ್ನಾಪುರ ಸಮೀಪ ಕೆರೆಯಲ್ಲಿ ವೃದ್ಧನ ಮೃತದೇಹ ಪತ್ತೆ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
14/06/2025
VISL-Contract-Workers-union-meets-Pejavara-seer
BHADRAVATHISHIVAMOGGA CITY

VISL ಕಾರ್ಮಿಕರಿಗೆ ಪೇಜಾವರ ‍ಸ್ವಾಮೀಜಿ ಅಭಯ, ಏನಂದ್ರು ಶ್ರೀಗಳು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
11/06/2025
Previous Next

ಶಿವಮೊಗ್ಗ ಲೈವ್ ಗ್ರೂಪ್ ಸೇರಲು ಕ್ಲಿಕ್ ಮಾಡಿ

🟢 shivamoggalive.com

whatsapp-logo
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?