SHIVAMOGGA LIVE NEWS | 18 MARCH 2023
SHIMOGA : ನಗರದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ (Sankalpa Yathre) ನಡೆಯಿತು. ರಾಮಣ್ಣಶ್ರೇಷ್ಠಿ ಪಾರ್ಕ್ನಿಂದ ಲಕ್ಷ್ಮೀ ಟಾಕೀಸ್ ಸರ್ಕಲ್ವರೆಗೆ ಮರವಣಿಗೆ ನಡೆಯಿತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಆರುಣ್ ಸೇರಿದಂತೆ ಹಲವು ನಾಯಕರು ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದರು.
ತೀರ್ಮಾನಿಸುವ ಕಾಲ ಬಂದಿದೆ
ಲಕ್ಷ್ಮೀ ಟಾಕೀಸ್ ಸರ್ಕಲ್ನಲ್ಲಿ ಸಭೆಯನ್ನು (Sankalpa Yathre) ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕಾಂಗ್ರೆಸ್ ಪಕ್ಷ ದೇಶದ್ರೋಹಿ ಸಂಘಟನೆಗಳ ಜೊತೆಗೆ ಕೈ ಜೋಡಿಸಿದೆ. ಹಾಗಾಗಿ ಭಯೋತ್ಪಾದಕರನ್ನು ಕಿತ್ತೊಗೆಯುವವರು ಬೇಕೋ, ಅವರನ್ನು ಬೆಂಬಲಿಸುವವರು ಬೇಕೋ ಎಂದು ನಿರ್ಣಯಿಸುವ ಸಂದರ್ಭ ಬಂದಿದೆ. ಶಿವಮೊಗ್ಗದ ಏಳು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಇದನ್ನೂ ಓದಿ – ಕಾಂಗ್ರೆಸ್ ಪಕ್ಷದ ವಿರುದ್ಧ ಮಾಜಿ ಮಿನಿಸ್ಟರ್ ಗಂಭೀರ ಆರೋಪ, ತಕ್ಕ ಪಾಠ ಕಲಿಸುವಂತೆ ಮತದಾರರಿಗೆ ಮನವಿ