SHIVAMOGGA LIVE NEWS | 1 APRIL 2024
ELECTION NEWS : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮನೆ ಬಾಗಿಲಿಗೆ ಬಂದರೆ ನಾಳೆ ಬನ್ನಿ ಎಂದು ತಿಳಿಸಿ. ನೀವು ಇವತ್ತಿಗೆ ಉಪಯೋಗ ಆಗುವ ಯಾವುದೆ ಕೆಲಸ ಮಾಡಿಲ್ಲ. ಆದ್ದರಿಂದ ನೀವು ನಾಳೆ ಬಾ ಗಿರಾಕಿ ಎಂದು ತಿಳಿಸಿ ಕಳುಹಿಸಿ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ವ್ಯಂಗ್ಯವಾಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಾಂಗ್ರೆಸ್ ಕಚೇರಿಯಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ನ ಬೂತ್ ಅಧ್ಯಕ್ಷರ ಸಮಾವೇಶ ಮತ್ತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸುಧೀರ್ ಕುಮಾರ್ ಭಾಷಣದ 5 ಪ್ರಮುಖಾಂಶ
ಈ ಬಾರಿಯ ಚುನಾವಣೆ ಕೂಗುಮಾರಿಗಳು ವರ್ಸಸ್ ಜೀವಪರತೆಗಳ ಮಧ್ಯೆ ನಡೆಯಲಿದೆ. ಕೂಗುಮಾರಿ ಬಿಜೆಪಿಯವರ ಕಾಲದಲ್ಲಿ ಕಾಂಗ್ರೆಸ್ ಪಕ್ಷದವರು ಜನರ ಮನೆ ಬಳಿ ಹೋಗಲು ಬಿಡುತ್ತಿರಲಿಲ್ಲ. ಈಗ ಕಾಂಗ್ರೆಸ್ನವರು ಹೋದರೆ ನೀರು, ಬೆಲ್ಲ ಕೊಟ್ಟು ಮನೆಯೊಳಗೆ ಕರೆಯುತ್ತಾರೆ. ಕಾಂಗ್ರೆಸ್ ಪಕ್ಷ ಎಂದಿಗೂ ತನ್ನ ಕಾರ್ಯಕರ್ತರು ತಲೆ ತಗ್ಗಿಸುವಂತೆ ಮಾಡುವುದಿಲ್ಲ.
ಚುನಾವಣಾ ಬಾಂಡ್ ಹೆಸರಿನಲ್ಲಿ ಲಂಚಕ್ಕೂ ರಶೀದಿ ನೀಡಿದ ಹೀನ ಸ್ಥಿತಿಗೆ ಬಿಜೆಪಿ ತಲುಪಿದೆ. ಚುನಾವಣಾ ಬಾಂಡ್ಗಳ ವಿಚಾರದಲ್ಲಿ ಕಾಂಗ್ರೆಸ್ ಇದ್ದಿದ್ದರೆ, ನಮ್ಮ ಕಾರ್ಯಕರ್ತರು ಬೀದಿಯಲ್ಲಿ ತಲೆ ಎತ್ತದ ಹಾಗೆ ಮಾಡುತ್ತಿದ್ದರು. ಬಿಜೆಪಿಯನ್ನು ವಿನಾಕಾರಣ ಬೆಂಬಲಿಸುತ್ತಿದ್ದ ಮೇಲ್ಮಮಧ್ಯಮ ವರ್ಗದವರಿಗೆ ಚುನಾವಣಾ ಬಾಂಡ್ನ ವಿಚಾರ ಬಯಲಾದ ಮೇಲೆ ಯೋಚಿಸುತ್ತಿದ್ದಾರೆ. ನಾ ಕಾವೂಂಗ, ನಾ ಖಾನೆ ದೂಂಗ ಅಂದವರ ಉತ್ತರವಿಲ್ಲವಾಗಿದೆ.
ಗೀತಾ ಶಿವರಾಜ್ ಕುಮಾರ್ ಅವರಿಗೆ ಏನು ಅನುಭವವಿದೆ ಎಂದು ರಾಘವೇಂದ್ರ ಅವರು ಪ್ರಶ್ನಿಸಿದ್ದಾರೆ. ನಿಮ್ಮಂತೆ ಚೆಕ್ನಲ್ಲಿ ಹಣ ಪಡೆದು ನಿಮ್ಮ ಅಕೌಂಟ್ಗೆ ಹಣ ಹಾಕಿಸಿಕೊಳ್ಳುವ ಅನುಭವ ಗೀತಾ ಶಿವರಾಜ್ ಕುಮಾರ್ ಅವರಿಗಿಲ್ಲ. ಚೋಟ ಸಿಗ್ನೇಚರ್ ಹಾಕಿ ಅಪ್ಪನನ್ನು ಜೈಲಿಗೆ ಕಳುಹಿಸಿದ ಅನುಭವವೂ ಇಲ್ಲ. ಆರಾಧನಾ, ಆಶ್ರಯ, ಗ್ರಾಮೀಣ ಕೃಪಾಂಕ ನೀಡಿದ ಬಂಗಾರಪ್ಪ ಅವರ ಮಗಳು. ಕನ್ನಡದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಡಾ.ರಾಜ್ಕುಮಾರ್ ಮನೆಯ ಸೊಸೆಯಾಗಿದ್ದಾರೆ. ಇದಕ್ಕಿಂತಲೂ ಇನ್ನೆಂತಹ ಅರ್ಹತೆ ಬೇಕು. ಇದೇ ಕಾರಣಕ್ಕೆ ಗೀತಾ ಶಿವರಾಜ್ ಕುಮಾರ್ ಅವರು ಸಮರ್ಥ ಅಭ್ಯರ್ಥಿ.
ಈಶ್ವರಪ್ಪ ಅವರಿಗೆ ಯಡಿಯೂರಪ್ಪ ಮತ್ತು ರಾಘವೇಂದ್ರ ಅವರ ಮೇಲೆ ಸಿಟ್ಟಿದೆ. ಹಾಗಾಗಿ ಕಾಂಗ್ರೆಸ್ಗೆ ಮತ ನೀಡಿ ಯಡಿಯೂರಪ್ಪ, ರಾಘವೇಂದ್ರ ಅವರ ಮೇಲೆ ಸಿಟ್ಟು ತೀರಿಸಿಕೊಳ್ಳಲಿ.
ಇದನ್ನೂ ಓದಿ – ಆಯನೂರು ಮಂಜುನಾಥ್ ವಿರುದ್ಧ ಡಾ. ಧನಂಜಯ ಸರ್ಜಿ ಗರಂ, ತಕ್ಕ ಪಾಠದ ಭವಿಷ್ಯ
ಬೂತ್ ಅಧ್ಯಕ್ಷರು ಚುನಾವಣೆ ಹೊತ್ತಿಗೆ ಪ್ರತಿ ಮನೆಗೆ ಕನಿಷ್ಠ ಐದು ಬಾರಿ ತೆರಳಬೇಕು. ಪ್ರತಿ ಮನೆಯಲ್ಲಿ ಕನಿಷ್ಠ ಹತ್ತು ನಿಮಿಷ ಕಳೆಯಬೇಕು. ಗ್ಯಾರಂಟಿ ಯೋಜನೆಗಳು, ಅದರ ಪ್ರಯೋಜನದ ಕುರಿತು ಮನವರಿಕೆ ಮಾಡಿಕೊಟ್ಟು ಮತ ಕೇಳಬೇಕು.