SHIVAMOGGA LIVE NEWS | 28 ಫೆಬ್ರವರಿ 2022
ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಮೆರವಣಿಗೆಯ ನೇತೃತ್ವ ವಹಿಸಿದ್ದ ಸಚಿವ ಕೆ.ಎಸ್ ಈಶ್ವರಪ್ಪ, ಬಿ.ವೈ. ರಾಘವೇಂದ್ರ, ಚನ್ನಬಸಪ್ಪ ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಗ್ರಹಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರು, ಸಚಿವ ಈಶ್ವರಪ್ಪ ಅವರನ್ನು ಎ1 ಆರೋಪಿ ಮಾಡಬೇಕು. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ಗಲಭೆಯಿಂದ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಬೇಕು. ಒಂದು ವೇಳೆ ಸಚಿವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲು ಮಾಡದೆ ಇದ್ದರೆ ಮಾರ್ಚ್ 6 ಅಥವಾ 7ರಂದು ಪ್ರತಿಭಟನೆ ನಡೆಸಲಾಗುತ್ತದೆ. ರಾಜ್ಯದ ನಾಯಕರು ಈ ಸಂದರ್ಭ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹೇಳಿದ ಪ್ರಮುಖಾಂಶಗಳು
» ‘ಹರ್ಷ ವಿರುದ್ಧ ಕೇಸ್ ದಾಖಲಾಗಿತ್ತು. ಆತ ಜೈಲಿನಲ್ಲಿದ್ದ. ಆತ ಬಿಡುಗಡೆಯಾದಾಗ ಬಿಜೆಪಿಯವರು ಯಾವುದೇ ಸಹಾಯ ಮಾಡಲಿಲ್ಲ. ಅವನ ಹೆಸರೇ ಇವರಿಗೆ ಗೊತ್ತಿರಲಿಲ್ಲ. ಹರ್ಷ ಮಹಾನಗರ ಪಾಲಿಕೆಯಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕಿದ್ದ. ಅವನಿಗೊಂದು ಕೆಲಸವನ್ನೂ ಕೊಡಿಸಲಿಲ್ಲ. ಬದುಕಿದ್ದಾಗ ಏನನ್ನೂ ವಿಚಾರಿಸದ ಬಿಜೆಪಿ ನಾಯಕರು ಹೆಣದ ಮುಂದೆ ರಾಜಕಾರಣ ಮಾಡಿದರು’
» ‘ಹರ್ಷನ ಸಾವಿನ ಬಗ್ಗೆ ನಮಗೂ ಅನುಕಂಪವಿದೆ. ಆತನ ಹತ್ಯೆ ಮಾಡಿದವರಿಗೆ ಶಿಕ್ಷೆಯಾಗಬೇಕಾದುದು ನ್ಯಾಯ. ಕಾಂಗ್ರೆಸ್ ಮುಖಂಡರು ಕೂಡ ಅದನ್ನೇ ಹೇಳಿದ್ದಾರೆ. ನ್ಯಾಯಾಂಗ ತನಿಖೆಯಾಗಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು.’
» ‘ಹಲವು ಹಿಂದೂ ಯುವಕರು ಕೊಲೆಯಾಗಿದ್ದಾರೆ. ಶಿವಮೊಗ್ಗದಲ್ಲಿಯೇ ಗೋಕುಲ್, ವಿಶ್ವನಾಥ್ ಶೆಟ್ಟಿ, ಜೀವನ್ ಸೇರಿದಂತೆ ಹಲವು ಯುವಕರ ಕೊಲೆಗಳಾಗಿವೆ. ಬಿಜೆಪಿಯವರೇ ಹೇಳುವಂತೆ ರಾಜ್ಯದಲ್ಲಿ ಸುಮಾರು 37 ಜನ ಹಿಂದೂ ಯುವಕರು, ಮುಖಂಡರು ಹತ್ಯೆಯಾಗಿದ್ದಾರೆ. ಆದರೆ, ಎಲ್ಲಿಯೂ ಬಿಜೆಪಿಯವರು ಸಾಂತ್ವನ ಹೇಳಲಿಲ್ಲ. ಹಣದ ನೆರವು ನೀಡಲಿಲ್ಲ. ವೀರಾವೇಶ ಮಾಡಲಿಲ್ಲ. ಉತ್ತರ ಪ್ರದೇಶದ ಚುನಾವಣೆ ಹಿನ್ನಲೆಯಲ್ಲಿ ಹರ್ಷ ಪ್ರಕರಣವನ್ನು ಮಾತ್ರ ಪ್ರತಿಬಿಂಬಿಸಿದ್ದಾರೆ.’
» ‘ಕರ್ಫ್ಯೂ ಮತ್ತು ನಿಷೇಧಾಜ್ಞೆ ಕಾರಣದಿಂದ ವ್ಯಾಪಾರಸ್ಥರು ಹೈರಾಣಾಗಿದ್ದಾರೆ. ಬೀದಿ ಬದಿ ವ್ಯಾಪಾರಿಗಳಂತೂ ಒಂದು ಹೊತ್ತಿನ ಊಟಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ. ಈ ಎಲ್ಲಾ ನಷ್ಟವನ್ನು ಬಿಜೆಪಿಯವರೇ ತುಂಬಿಕೊಡಬೇಕು. ಯಾವ ಕೋಮಿನವರೇ ಆಗಿರಲಿ, ಗಾಯಾಳುಗಳ ಚಿಕಿತ್ಸಾ ವೆಚ್ಚಾ ಭರಿಸಬೇಕು. ಆಸ್ತಿ, ಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು.’
ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ, ಹೆಚ್.ಸಿ. ಯೋಗೀಶ್, ರೇಖಾ ರಂಗನಾಥ್, ಪ್ರಮುಖರಾದ ಚಂದ್ರ ಭೂಪಾಲ್, ವಿಶ್ವನಾಥ್ ಕಾಶಿ, ನಾಗರಾಜ್, ಎನ್.ಡಿ. ಪ್ರವೀಣ್, ಚಂದನ್, ಚಂದ್ರಶೇಖರ್ ಮೊದಲಾದವರಿದ್ದರು.