ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 22 ನವೆಂಬರ್ 2019
ನೆರೆ ಪರಿಹಾರ ವಿತರಣೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ. ಬಿಜೆಪಿ ಪಕ್ಷದವರಿಗೆ ಮಾತ್ರ ದೊಡ್ಡ ಮೊತ್ತದ ಪರಿಹಾರ ವಿತರಿಸಲಾಗುತ್ತಿದೆ ಅಂತಾ ಜಿಲ್ಲಾ ಕಾಂಗ್ರೆಸ್ ಆರೋಪ ಮಾಡಿದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಹಿರಂಗ ಸವಾಲನ್ನು ಹಾಕಲಾಗಿದೆ.
ಬಿಜೆಪಿ ಕಾರ್ಯಕರ್ತರಿಗಷ್ಟೆ 35 ಸಾವಿರ
ಭಾರೀ ಮಳೆ, ನೆರೆಯಿಂದ ಮನೆ ಕಳೆದುಕೊಂಡಿರುವ ಕೆಲವರಿಗೆ ಕೇವಲ 10, 20 ಸಾವಿರ ಪರಿಹಾರದ ಹಣ ನೀಡಲಾಗಿದೆ. ಆದರೆ ಒಂದು ಪಕ್ಷದ ಕಾರ್ಯಕರ್ತರಿಗೆ ಮಾತ್ರ 35 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. ಮನೆ ಚೆನ್ನಾಗಿದ್ದರು ಕೆಲವರಿಗೆ ದೊಡ್ಡ ಮೊತ್ತದ ಪರಿಹಾರದ ಹಣ ತುಲುಪಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದ್ದಾರೆ.
ಮನೆ ಪಕ್ಕದಲ್ಲಿರುವವರ ಪರಿಸ್ಥಿತಿ ಗೊತ್ತಿಲ್ಲ
ಸಚಿವ ಈಶ್ವರಪ್ಪ ಅವರು ಶಿವಮೊಗ್ಗಕ್ಕೆ ಬಂದಾಗಲೆಲ್ಲ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುತ್ತಾರೆ. ಅದರೆ ನೆರೆ ಸಂತ್ರಸ್ತರ ನೋವು ಕೇಳಲು ಒಂದು ಬಾರಿಯು ಹೋಗಿಲ್ಲ. ಅವರ ಮನೆ ಸಮೀಪದಲ್ಲಿರುವ ರಾಜೀವ್ ಗಾಂಧಿ ಬಡಾವಣೆ, ಅಂಗಳಯ್ಯನ ಕೇರಿ ಕಡೆಗೆ ಮುಖ ಹಾಕಿಲ್ಲ. ಜನ ಐದು ಬಾರಿ ಇವರನ್ನು ಆಯ್ಕೆ ಮಾಡಿದ್ದಾರೆ. ಅದರೆ ಇವರು ಬಡವರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಉಸ್ತುವಾರಿ ಸಚಿವರಿಗೆ ಓಪನ್ ಚಾಲೆಂಜ್
ಇನ್ನು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಓಪನ್ ಚಾಲೆಂಜ್ ಹಾಕಿದ ಸುಂದರೇಶ್, ಮನೆ ಕಳೆದುಕೊಂಡಿರುವವರ ಸ್ಥಿತಿ ಇನ್ನು ಬದಲಾಗಿಲ್ಲ. ಅರೆಬರೆ ಕುಸಿದ ಕಟ್ಟಡಗಳಲ್ಲೇ ಪ್ಲಾಸ್ಟಿಕ್ ಶೀಟುಗಳನ್ನು ಹಾಕಿಕೊಂಡು ಬದುಕುತ್ತಿದ್ದಾರೆ. ಮಹಿಳೆಯರ ಸ್ಥಿತಿಯಂತೂ ಹೇಳತೀರದು. ಇವರ ಸ್ಥಿತಿ ಕಣ್ಣಾರೆ ಕಂಡು, ನೋವು ಅಲಿಸಲು ಸಚಿವ ಈಶ್ವರಪ್ಪ ಅವರು ಬರುತ್ತಾರಾ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ನಾನು ಹೇಳಿದ್ದು ಸುಳ್ಳಾದರೆ..
ಜಿಲ್ಲಾಧಿಕಾರಿ ಅವರು ಕಚೇರಿಯಲ್ಲಿ ಕುಳಿತು ಪರಿಹಾರ ವಿತರಿಸಲಾಗಿದೆ ಎಂದು ಹೇಳೋದಲ್ಲ. ಅವರ ಕಚೇರಿಯಿಂದ ಕೆಲವೇ ಕಿ.ಮೀ ದೂರದಲ್ಲಿರುವ ನೆರೆ ಸಂತ್ರಸ್ತರ ಬಳಿಗೆ ಹೋಗಿ ನೋಡಿ ಬರಲಿ. ಜಿಲ್ಲಾಧಿಕಾರಿ ಅವರಿಗೇನು ಸರ್ಕಾರ ಕಾರು ಕೊಟ್ಟಿಲ್ಲವೇ. ಪರಿಹಾರ ವಿತರಣೆಯಲ್ಲಿ ತಾರತಮ್ಯ ಆಗಿದೆ, ಸರಿಯಾಗಿ ಪರಿಹಾರವನ್ನೂ ವಿತರಿಸಿಲ್ಲ. ಇದೆಲ್ಲ ಸುಳ್ಳಾದರೆ ನಾನು ಕಾಂಗ್ರೆಸ್ ಕಚೇರಿಗೆ ಕಾಲಿಡುವುದಿಲ್ಲ ಎಂದು ಸುಂದರೇಶ್ ಎಂದರು.
ಸಂತ್ರಸ್ತರ ನೋವು ಆಲಿಸಿದ ಕಾಂಗ್ರೆಸ್ ಟೀಂ
ಸಂತ್ರಸ್ತರ ನೋವು ಆಲಿಸಲು ಜಿಲ್ಲಾ ಕಾಂಗ್ರೆಸ್ ನಿಯೋಗವೊಂದು ಶಿವಮೊಗ್ಗ ನಗರದ ವಿವಿಧೆಡೆ ಭೇಟಿ ನೀಡಿತ್ತು. ರಾಜೀವ್ ಗಾಂಧಿ ಬಡಾವಣೆ, ಬಾಪೂಜಿನಗರ ಸೇರಿದಂತೆ ವಿವಿಧೆಡೆ ನಿಯೋಗ ಭೇಟಿ ತೆರಳಿ, ಮಾಹಿತಿ ಸಂಗ್ರಹಿಸಿತು. ಈ ವೇಳೆ ಪರಿಹಾರವೇ ಸಿಗದೆ ಜನರು ನೋವಿನಲ್ಲಿ ದಿನ ದೂಡುತ್ತಿರುವುದು ಬೆಳಕಿಗೆ ಬಂದಿದೆ.
ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಕಾಶಿ ವಿಶ್ವನಾಥ್, ಚಂದ್ರಭೂಪಾಲ್, ನಾಗರಾಜ್, ಎಸ್.ಪಿ.ಶೇಷಾದ್ರಿ, ರಮೇಶ್ ಹೆಗ್ಡೆ, ರಾಮೇಗೌಡ, ನಾಜೀಮಾ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Shimoga District Congress Challenges In charge Minister KS Eshwarappa to visit flood affected areas of the city. District President alleges that the relief fund has been misused and most of the amount has been given to BJP Workers.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422