ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಮೇ 2020
ಕರೋನ ಬಂದ ಸಂಕಷ್ಟ ಕಾಲದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನು, ರಾಜ್ಯ ಸರ್ಕಾರ ಕರೋನ ಪರೀಕ್ಷೆಗೆ ಬಳಕೆ ಮಾಡುವ ಪಿಪಿಇ ಕಿಟ್‍ಗಳು, ಸ್ಯಾನಿಟೈಸರ್, ವೆಂಟಿಲೇಟರ್‍ಗಳ ಖರೀದಿಯಲ್ಲಿ ಭಾರಿ ದೊಡ್ಡ ಭ್ರಷ್ಟಾಚಾರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ಶಿವಮೊಗ್ಗ ಲೈವ್.ಕಾಂ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ವಲಸೆ ಕಾರ್ಮಿಕರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಈ ಕುರಿತು ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಈ ನಡುವೆ ಹಲವು ಘೋಷಣೆಗಳನ್ನು ಮಾಡಲಾಗಿದೆ. ಆದರೆ ಯಾವುದೇ ಹಣ ಜನರಿಗೆ ತಲುಪಿಲ್ಲ ಎಂದು ಆರೋಪಿಸಿದರು.
ಹಣ ಬಂದಿದೆಯೋ ಇಲ್ಲವೋ ಸರ್ವೆ
ರಾಜ್ಯ ಮತ್ತು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಪರಿಹಾರದ ಹಣ ಜನರಿಗೆ ತಲುಪಿದೆಯೋ ಇಲ್ಲವೊ ಅನ್ನುವುದನ್ನು ಸರ್ವೆ ಮಾಡಿದ್ದೇವೆ. ಆದರೆ ಈತನಕ ಯಾರಿಗೂ ಒಂದು ರೂಪಾಯಿ ಬಂದಿಲ್ಲ ಎಂದು ಸುಂದರೇಶ್ ಟೀಕಿಸಿದರು.
ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ
ಕರೋನ ಪರೀಕ್ಷೆಗೆ ಬಳಕೆ ಮಾಡುವ ಪಿಪಿಇ ಕಿಟ್‍ಗಳು, ಸ್ಯಾನಿಟೈಸರ್, ವೆಂಟಿಲೇಟರ್‍ಗಳ ಖರೀದಿಯಲ್ಲಿ ಭಾರಿ ದೊಡ್ಡ ಭ್ರಷ್ಟಾಚಾರವಾಗಿದೆ. ಗುಜರಾತ್, ತಮಿಳುನಾಡು ಸೇರಿದಂತೆ ವಿವಿಧೆಡೆಯ ನಕಲಿ ಕಂಪನಿಗಳು, ಮುಳುಗಿ ಹೋಗಿರುವ ಕಂಪನಿಗಳಿಂದ ಹಲವು ವಸ್ತುಗಳನ್ನು ಖರೀದಿಸಲಾಗಿದೆ. 2007ರಲ್ಲಿ ಉತ್ಪಾದನೆಯಾದ ವೆಂಟಿಲೇಟರನ್ನು ನಾಲ್ಕು ಪಟ್ಟು ಹೆಚ್ಚು ಹಣಕ್ಕೆ ಖರೀದಿ ಮಾಡಲಾಗಿದೆ. ಈ ವೆಂಟಿಲೇಟರ್‍ಗಳು ಹಲವು ವರ್ಷ ಬಳಕೆಯಾಗಿವೆ ಎಂದು ವರದಿಯಾಗಿದೆ. ಸಂಕಷ್ಟದ ಸ್ಥಿತಿಯಲ್ಲೂ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]