SHIVAMOGGA LIVE NEWS | 19 AUGUST 2023
SHIMOGA : ಪಕ್ಷ ಸಂಘಟನೆ ಮತ್ತು ಮುಂದಿನ ಚುನಾವಣೆಗಳನ್ನು ಎದುರಿಸಲು ಜೆಡಿಎಸ್ ಪಕ್ಷ (JDS Party) ಕೋರ್ ಕಮಿಟಿ (Core Team) ರಚನೆ ಮಾಡಿದೆ. ಮಾಜಿ ಸಚಿವ ಜಿ.ಟಿ.ದೇವೇಗೌಡ ಇದರ ಅಧ್ಯಕ್ಷರಾಗಿದ್ದಾರೆ. ಶಿವಮೊಗ್ಗದ ಮಾಜಿ ಶಾಸಕ ಕೆ.ಬಿ.ಪ್ರನಸ್ನ ಕುಮಾರ್ ಅವರನ್ನು ಕೋರ್ ಕಮಿಟಿಗೆ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ KSRTC ಬಸ್ ಹತ್ತಿ ವ್ಯಾನಿಟಿ ಬ್ಯಾಗ್ ಗಮನಿಸಿದ ನ್ಯಾಮತಿಯ ಮಹಿಳೆಗೆ ಕಾದಿತ್ತು ಆಘಾತ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜೆಡಿಎಸ್ ಪಕ್ಷ 21 ನಾಯಕರ ಕೋರ್ ಕಮಿಟಿ ಸಿದ್ಧಪಡಿಸಿದೆ. ಹಾಲಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪ್ರಮುಖ ನಾಯಕರ ತಂಡ ರಚಿಸಲಾಗಿದೆ. ವೈ.ಎಸ್.ವಿ. ದತ್ತ ಅವರು ಕೋರ್ ಕಮಿಟಿಯ ಸಂಚಾಲಕರಾಗಿದ್ದಾರೆ. ಶಿವಮೊಗ್ಗದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರು ಕೋರ್ ಕಮಿಟಿ ಸದಸ್ಯರಾಗಿದ್ದಾರೆ. ಈ ಸಮಿತಿ ಪೂರ್ಣ ಅಧಿಕಾರ ನೀಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.