ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 24 ಜುಲೈ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸರ್ಕಾರ ರಚನೆಗೆ ಯಡಿಯೂರಪ್ಪ ಕೊನೆಯ ಹಂತದ ಕಸರತ್ತು ನಡೆಸಿರುವ ಬೆನ್ನಿಗೆ, ಶಿವಮೊಗ್ಗ ಬಿಜೆಪಿಯಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಯಾರಿಗೆಲ್ಲ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿದೆ.
ಶಿವಮೊಗ್ಗದಲ್ಲಿ ಯಾರೆಲ್ಲ ಮಿನಿಸ್ಟರ್ ಆಗಬಹುದು?
ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕ್ ನಾಯ್ಕ ಅವರನ್ನು ಹೊರತುಪಡಿಸಿ, ಉಳಿದೆಲ್ಲರು ಸೀನಿಯರ್ ಎಂಎಲ್ಎಗಳೆ. ಹಾಗಾಗಿ ಯಾರಿಗೆಲ್ಲ ಸಚಿವ ಸ್ಥಾನ ಸಿಗಬಹುದು ಅನ್ನುವ ಕುತೂಹಲ ಮತ್ತು ಲೆಕ್ಕಾಚಾರಗಳು ಶುರುವಾಗಿದೆ.
ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ಗ್ಯಾರಂಟಿ
ಬಿಜೆಪಿ ಸರ್ಕಾರ ರಚನೆಯಾದರೆ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ನಿಶ್ಚಿತ. ಈಶ್ವರಪ್ಪ ಅವರು ಪಕ್ಷದ ಹಿರಿಯ ಮುಖಂಡ ಮತ್ತು ಹಿರಿಯ ಶಾಸಕ, ಉಪ ಮುಖ್ಯಮಂತ್ರಿ ಆಗಿದ್ದವರು, ಸಂಘ ಪರಿವಾರದೊದಿಗೆ ಗುರುತಿಸಿಕೊಂಡವರು, ಬಿಜೆಪಿ ಮತ್ತು RSSನ ಹಿರಿಯರಿಗೆಲ್ಲ ಆತ್ಮೀಯರು. ಈ ಹಿನ್ನೆಲೆಯಲ್ಲಿ ಅವರಿಗೆ ಸಚಿವ ಸ್ಥಾನ ಖಚಿತ.
ಹಾಲಪ್ಪ, ಕುಮಾರ್ ಬಂಗಾರಪ್ಪ ಯಾರಿಗೆ ಸಚಿವ ಸ್ಥಾನ?
ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮತ್ತು ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಅವರಲ್ಲಿ ಯಾರಿಗೆ ಸಚಿವ ಸ್ಥಾನ ಒಲಿಯುತ್ತದೆ ಅನ್ನುವುದು ಇನ್ನು ಕುತೂಹಲವಾಗಿದೆ. ಇಬ್ಬರು ಹಿರಿಯ ಶಾಸಕರು, ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಈಡಿಗ ಸಮುದಾಯದ ಕೋಟಾದಲ್ಲಿ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗಬಹುದು ಅನ್ನುವ ಲೆಕ್ಕಾಚಾರವಿದೆ.
ಪ್ರಕರಣ ಒಂದರಿಂದಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ಹಾಲಪ್ಪ, ಆ ಪ್ರಕರಣದಿಂದ ಖುಲಾಸೆಯಾಗಿದ್ದಾರೆ. ಅವರು ಈಗ ಯಡಿಯೂರಪ್ಪ ಆಪ್ತ ಶಾಸಕರ ಪೈಕಿ ಒಬ್ಬರು. ಹಾಗಾಗಿ ಹಾಲಪ್ಪ ಮಿನಿಸ್ಟರ್ ಆಗುತ್ತಾರೆ ಅನ್ನುವುದು ಅವರ ಬೆಂಬಲಿಗರ ನಿರೀಕ್ಷೆ.
ಎಸ್.ಎಂ.ಕೃಷ್ಣ ಅವಧಿಯಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಕುಮಾರ್ ಬಂಗಾರಪ್ಪ ಅವರು, ಈಗ ಯಡಿಯೂರಪ್ಪ ಸಂಪುಟಕ್ಕೆ ಸೇರಬಹುದು ಅನ್ನುವ ನಿರೀಕ್ಷೆ ಅವರ ಬೆಂಬಲಿಗರದ್ದು. ವಿಧಾನಸಭೆ ಚುನಾವಣೆ ಸಂದರ್ಭ ಯಡಿಯೂರಪ್ಪ ಅವರೆ ಕುಮಾರ್ ಬಂಗಾರಪ್ಪ ಬೆನ್ನಿಗೆ ನಿಂತಿದ್ದರು. ಅವರನ್ನು ಗೆಲ್ಲಿಸಿ ಕಳುಹಿಸುವಂತೆ ಮತದಾರರಿಗೆ ಮನವಿಯನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕುಮಾರ್ ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರವಿದೆ.
ಆರಗ ಜ್ಞಾನೇಂದ್ರ ಅವರಿಗೆ ಮಿನಿಸ್ಟರ್ ಆಗುವ ಲಕ್ ಇದೆಯಾ?
ತೀರ್ಥಹಳ್ಳಿಯ ಆರಗ ಜ್ಞಾನೇಂದ್ರ ಅವರು ಬಿಜೆಪಿಯ ಹಿರಿಯ ಮುಖಂಡರು, ಸೀನಿಯರ್ ಎಂಎಲ್ಎ. ಜೆಡಿಎಸ್ – ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತವಾಗಿದ್ದರು. ‘ಆಗ ಹಿರಿಯರಿಗೆ ಅದ್ಯತೆ ಎಂದು ಯಡಿಯೂರಪ್ಪ, ಈಶ್ವರಪ್ಪ, ಡಿ.ಹೆಚ್.ಶಂಕರಮೂರ್ತಿ ಅವರು ಸಂಪುಟ ಸೇರಿದ್ದರು. ಮತ್ತೆ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಸೋಲನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ’ ಅನ್ನುತ್ತಾರೆ ಹಿರಿಯ ಪತ್ರಕರ್ತ ಸಂತೋಷ್.
ಪರಿಷತ್ ಸದಸ್ಯರಿಗೆ ಒಲಿಯಬಹುದಾ ಅದೃಷ್ಟ?
ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಮತ್ತು ರುದ್ರೇಗೌಡ ಅವರು ಶಿವಮೊಗ್ಗ ಜಿಲ್ಲೆಯವರೆ. ಅವರಿಗೆ ಸಚಿವ ಸ್ಥಾನ ಸಗಬಹುದೇ ಎಂಬ ವಿಶ್ಲೇಷಣೆ ನಡೆಯುತ್ತಿದೆ.
‘ಬಿ.ಎಸ್.ಪಿ ಶಾಸಕ, ಪಕ್ಷೇತರರು ಮತ್ತು ಅತೃಪ್ತರಿಗೆ ಸಚಿವ ಸ್ಥಾನ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಈಶ್ವರಪ್ಪ ಹೊರತು ಬೇರೆಯವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ. ಹೀಗಿದ್ದಾಗ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಸಚಿವರ ಪಟ್ಟಿಗೆ ಸೇರಿಸಲು ಯಡಿಯೂರಪ್ಪ ಮನಸು ಮಾಡುವುದು ಕಷ್ಟ’ ಅನ್ನುತ್ತಾರೆ ಶಿವಮೊಗ್ಗದ ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ.
ಜಿಲ್ಲೆಗೆ ಯಡಿಯೂರಪ್ಪ ಹೆಚ್ಚು ಪ್ರಾತಿನಿದ್ಯ ನೀಡಬಹುದು ಎಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ಲೆಕ್ಕಾಚಾರ ಹಾಕಿದ್ದಾರೆ. ಆದರೆ ಸಚಿವ ಸ್ಥಾನದ ಪಟ್ಟಿಯನ್ನು ಹೈಕಮಾಂಡ್ ರೆಡಿ ಮಾಡುತ್ತದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದೆ. ಇದರು ಕುತಹೂಲವನ್ನು ಇನ್ನಷ್ಟು ಹೆಚ್ಚಿಸಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]