ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 30 MARCH 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
POLITICAL NEWS : ಕಾಂಗ್ರೆಸ್ ಪಕ್ಷದಲ್ಲಿ ಇದ್ದೀನಿ ಎಂಬ ಕಾರಣಕ್ಕೆ ಆಯನೂರು ಮಂಜುನಾಥ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಟೀಕಿಸುವುದು ಸರಿಯಲ್ಲ. ಯಡಿಯೂರಪ್ಪ ಅವರ ಆಶೀರ್ವಾದ ಮತ್ತು ಬಿಜೆಪಿ ಪಕ್ಷದಿಂದಾಗಿಯೇ ಆಯನೂರು ಮಂಜುನಾಥ್ ನಾಲ್ಕು ಸದನಗಳಲ್ಲೂ ಸ್ಥಾನಮಾನ ಮತ್ತು ಎಲ್ಲಾ ಬಗೆಯ ಅಧಿಕಾರದ ಫಲಾನುಭವಿಯಾಗಿದ್ದಾರೆ ಎಂದು ಬಿಜೆಪಿ ಉಪಾಧ್ಯಕ್ಷ ಮತ್ತು ಲೋಕಸಭೆ ಚುನಾವಣೆ ಪ್ರಭಾರಿ ಡಾ. ಧನಂಜಯ ಸರ್ಜಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಧನಂಜಯ ಸರ್ಜಿ, ಈಗ ಕಾಂಗ್ರೆಸ್ನಲ್ಲಿ ಇದ್ದೇನೆ ಎನ್ನುವ ಕಾರಣಕ್ಕಾಗಿ ಯಡಿಯೂರಪ್ಪ ಅವರ ವಿರುದ್ಧ ಆಯನೂರು ಮಂಜುನಾಥ್ ಟೀಕೆ ಮಾಡುತ್ತಿರುವುದು ಸಮರ್ಥನೀಯವಲ್ಲ. ಬಿಜೆಪಿಯಿಂದ ಬೇರೆ ಯಾರೂ ಪಡೆಯಲಾಗದ ಎಲ್ಲ ಫಲಗಳನ್ನು ಪಡೆದ ಬಹುದೊಡ್ಡ ಫಲಾನುಭವಿ ಅವರು. ಮಾತನಾಡಲಿಕ್ಕೆ ಒಬ್ಬ ರಾಜಕಾರಣಿ ಬೇಕು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಅವರಿಗೆ ಮನ್ನಣೆ ಹಾಕಿದೆ. ಅಂತವರು ಯಡಿಯೂರಪ್ಪ ಅವರ ಬಗ್ಗೆ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಗಳಿಸಿಕೊಂಡ ಮತಗಳ ಸಂಖ್ಯೆ ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಮುಂದೆ ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ವಿದ್ಯಾವಂತರು ಹಾಗೂ ಪ್ರಜ್ಞಾವಂತರು ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಜನರಿಗೆ ಮ್ಯೂಸಿಕಲ್ ಚೇರ್ ಆಡಿಸಿದ ಅಧಿಕಾರಿಗಳು, ಪಾಲಿಕೆಯಿಂದ ವಿಭಿನ್ನ ಪ್ರಯತ್ನ, ಯಾಕೆ?