ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 5 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ELECTION SPECIAL : ಸಂಸತ್ತಿನ ಕಲಾಪಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಬಳಕೆ ಹೆಚ್ಚು. ಆದರೆ ಕಲಾಪದಲ್ಲಿ ಪ್ರಾದೇಶಿಕ ಭಾಷೆಯಲ್ಲಿಯು ಪ್ರಶ್ನೆಗಳನ್ನು ಕೇಳಬಹುದು. ಚರ್ಚೆಗಳನ್ನು ನಡೆಸಬಹುದು. ಇಂತಹದ್ದೊಂದು ಪದ್ಧತಿಗೆ ಮುನ್ನುಡಿ ಬರೆದಿದ್ದೆ ಶಿವಮೊಗ್ಗದ ಸಂಸದ. ಸಂವಿಧಾನದ ಎಂಟನೇ ಷೆಡ್ಯೂಲ್‌ನಲ್ಲಿರುವ ಭಾಷೆಗಳಲ್ಲೆ ಸಂಸತ್ತಿನಲ್ಲಿ ಚರ್ಚಿಸಲು ಹಕ್ಕು ಇದೆ ಎಂದು ತೋರಿಸಿದ್ದೇ ಶಿವಮೊಗ್ಗದ ಸಂಸತ ಜೆ.ಹೆಚ್.ಪಟೇಲ್.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸಂಸದರಾಗಿದ್ದರು ಜೆ.ಹೆಚ್.ಪಟೇಲ್
ಜೆ.ಹೆಚ್.ಪಟೇಲ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅವರ ಆಡಳಿತ ಮತ್ತು ಹರಿತ ಮಾತಿನ ಕುರಿತು ಇಂದಿಗೂ ಚರ್ಚೆ ನಡೆಯುತ್ತಿವೆ. ಆದರೆ ಇದಕ್ಕೂ ಮೊದಲು ಜೆ.ಹೆಚ್.ಪಟೇಲ್ ಅವರು ಸಂಸದರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು ಅನ್ನುವುದು ಬಹುತೇಕರಿಗೆ ಗೊತ್ತಿಲ್ಲ. 1967ರಲ್ಲಿ ಜೆ.ಹೆಚ್.ಪಟೇಲ್ ಅವರು ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಶಿವಮೊಗ್ಗದ ಸಂಸದರಾಗಿ ಆಯ್ಕೆಯಾಗಿದ್ದರು.
ಪ್ರಾದೇಶಿಕ ಭಾಷೆಯಲ್ಲಿ ಚರ್ಚಿಸಿದ ಮೊದಲಿಗ
ಈಗ ಹಲವು ಸಂಸದರು ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ, ಕನ್ನಡದಲ್ಲಿ ಪ್ರಶ್ನೆ ಕೇಳುವುದು, ಚರ್ಚೆ ನಡೆಸುವುದನ್ನು ಗಮನಿಸಿದ್ದೇವೆ. ಆದರೆ ಇದೆಲ್ಲ ಆರಂಭವಾಗಿದ್ದು ಜೆ.ಹೆಚ್.ಪಟೇಲ್ ಅವರು ಸಂಸದರಾಗಿದ್ದಾಗ. ಎಲ್ಲ ಸಂಸದರಿಗು ಅರ್ಥವಾಗಲಿ ಎಂದು ಕಲಾಪದಲ್ಲಿ ಹಿಂದಿ ಮತ್ತು ಇಂಗ್ಲೀಷ್‌ನಲ್ಲಿಯೇ ಚರ್ಚೆಗಳನ್ನು ನಡೆಸಲಾಗುತ್ತಿತ್ತು. ಮೊದಲ ಬಾರಿ ಇವರೆಡು ಭಾಷೆಯನ್ನು ಬದಿಗಿಟ್ಟು ಪ್ರದೇಶಿಕ ಭಾಷೆಯಲ್ಲಿ ಚರ್ಚೆ, ಪ್ರಶ್ನೆಗಳನ್ನು ಕೇಳಿದ್ದವರು ಜೆ.ಹೆಚ್.ಪಟೇಲ್. ಆಗ ಲೋಕಸಭೆ ಸ್ಪೀಕರ್ ಆಗಿದ್ದ ನೀಲಂ ಸಂಜೀವ ರೆಡ್ಡಿ ಅವರು ಜೆ.ಹೆಚ್.ಪಟೇಲ್ ಅವರ ನಿರ್ಧಾರಕ್ಕೆ ಪ್ರೋತ್ಸಾಹ ನೀಡಿದ್ದರು. ಅಲ್ಲಿಯತನಕ ಪ್ರದೇಶಕ ಭಾಷೆಯಲ್ಲಿ ಚರ್ಚೆ ನಡೆಸಬಹುದು ಎಂಬ ಕಲ್ಪನೆಯೂ ಹಲವು ಸಂಸದರಿಗೆ ಇರಲಿಲ್ಲ. ಅರಿವಿದ್ದವರು ಹಿಂದಿ, ಇಂಗ್ಲೀಷ್‌ಗೆ ಒಗ್ಗಿಕೊಂಡಿದ್ದರು.
ಇದನ್ನೂ ಓದಿ – ಸಂಸತ್ತಿನಲ್ಲಿ ಶಿವಮೊಗ್ಗ ಸಂಸದರು ಕೇಳಿದ ಮೊದಲ ಪ್ರಶ್ನೆ ಏನು? ಸಚಿವರ ಉತ್ತರವೇನಿತ್ತು? ಇಲ್ಲಿದೆ ಡಿಟೇಲ್ಸ್