SHIVAMOGGA LIVE NEWS | 29 NOVEMBER 2022
ಶಿವಮೊಗ್ಗ : ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾಗುತ್ತಿದೆ. ಹಾಗಾಗಿ ಐದು ಸಾವಿರ ಕೋಟಿ ರೂ. ಹೂಡಿಕೆ ಮಾಡಿಸಿ ಎಂದು ಸವಾಲು ಹಾಕಿದ್ದೆ. ಈ ಬಾರಿ ಹೂಡಿಕೆದಾರರ ಸಮಾವೇಶ ನಡೆಯಿತು. ಶಿವಮೊಗ್ಗ ಜಿಲ್ಲೆಗೆ ಯಾರೊಬ್ಬರು ಹೂಡಿಕೆ ಮಾಡದಿರಲು ಕಾರಣವೇನು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. (shimoga airport)
ಶಿವಮೊಗ್ಗದ ಎನ್ಇಎಸ್ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ಕಾಂಗ್ರೆಸ್ ಜಾಗ್ರತಾ ಸಮಿತಿ ಆಯೋಜಿಸಿದ್ದ ಮಲೆನಾಡ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕಮಾರ್ ಅವರು, ಶಿವಮೊಗ್ಗದಲ್ಲಿ ಯಾಕೆ ಯಾರೊಬ್ಬರು ಹೂಡಿಕೆ ಮಾಡುತ್ತಿಲ್ಲ ಎಂದರು.
(shimoga airport)
6 ಗಂಟಗೆ ಅಂಗಡಿ ಬಂದ್
ಶಿವಮೊಗ್ಗದಲ್ಲಿ ನಿತ್ಯ ಕೋಮು ಗಲಭೆ, ಶಾಂತಿ ಭಾಂಗ ಉಂಟಾಗುತ್ತಿದೆ. ಸಂಜೆ ಆರು ಗಂಟೆಗೆಲ್ಲ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಇದೆ ಕಾರಣಕ್ಕೆ ಶಿವಮೊಗ್ಗದಲ್ಲಿ ಯಾರೊಬ್ಬರು ಹೂಡಿಕೆ ಮಾಡುತ್ತಿಲ್ಲ ಎಂದರು.
ALSO READ – ‘VISLಗೆ ಸಾವಿರಾರು ಕೋಟಿ ಬರುತ್ತೆ ಅಂದಿದ್ದರು, ಒಂದು ಕೋಟಿಯೂ ಹೂಡಿಕೆಯಾಗಲಿಲ್ಲ’
ಇನ್ನು, ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ವೇಳೆ 302 ರೈತರು ಸಂತ್ರಸ್ಥರಾದರು. ಅವರಿಗೆ ನಿವೇಶನ ನೀಡಬೇಕಿತ್ತು. ಈವರೆಗು ಆ ಸಂತ್ರಸ್ಥರಿಗೆ ನಿವೇಶನ ನೀಡಿಲ್ಲ. ಸಂತ್ರಸ್ಥರಿಗೆ ನಿವೇಶನ ನೀಡಲು ಹತ್ತು ವರ್ಷ ಬೇಕಾ ಎಂದು ಡಿ.ಕೆ.ಶಿವಕುಮಾರ್ ಅವರು ಪ್ರಶ್ನಿಸಿದರು.
(shimoga airport)
ದ್ವೇಷ ಹಂಚಿದವರು ಮತ ಕದಿಯುತ್ತಿದ್ದಾರೆ
ಈವರೆಗೂ ದ್ವೇಷ ಹಂಚುತ್ತಿದ್ದ ಬಿಜೆಪಿಯವರು ಈಗ ಮತ ಕದಿಯಲು ಮುಂದಾಗಿದ್ದಾರೆ. ಕಳೆದ 5 ವರ್ಷದಲ್ಲಿ 80 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ಚಿಲುಮೆ ಎಂಬ ಹೆಸರಿನಲ್ಲಿ ಸಚಿವ ಅಶ್ವಥ ನಾರಾಯಣ ಕೃಪಾಪೋಷಿತ ನಾಟಕ ಮಂಡಳಿ ಸೃಷ್ಟಿಯಾಗಿದೆ. ಅದಕ್ಕೆ ಬೆಂಬಲವಾಗಿದ್ದ ಅಧಿಕಾರಿಗಳು ಈಗ ಸಿಕ್ಕಿಬಿದ್ದಿದ್ದಾರೆ ಎಂದರು.
(shimoga airport)
ರೈತರ ಖಾತೆಗೆ ಬಂತು ಲಕ್ಷ ಲಕ್ಷ ಹಣ
ಇನ್ನು, ನಮ್ಮ ಕ್ಷೇತ್ರದಲ್ಲಿ ಹಲವು ರೈತರ ಖಾತೆಗೆ ಲಕ್ಷ ಲಕ್ಷ ರೂ. ಹಣ ಬಂದಿದೆ. ರೈತರ ಖಾತೆಯಲ್ಲಿ 10 ಸಾವಿರ ಮಾತ್ರ ಉಳಿಸಿ, ಲಕ್ಷ ಲಕ್ಷ ಹಣವನ್ನು ಚಿಲುಮೆ ಸಂಸ್ಥೆಯವರು ಪಡೆದುಕೊಂಡು ಹೋಗಿದ್ದಾರೆ. ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ. ಹಾಗಾಗಿ ಹೆಚ್ಚಿನ ವಿಚಾರವನ್ನು ಆನಂತರ ಚರ್ಚೆ ಮಾಡುತ್ತೇನೆ ಎಂದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200