ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ELECTION NEWS : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಭಾರಿ ನಿರಾಸೆಯಾಗಿದೆ. ದೆಹಲಿಗೆ ಬರುವಂತೆ ತಿಳಿಸಿದ್ದ ವರಿಷ್ಠರು ಕೊನೆಗೆ ಈಶ್ವರಪ್ಪ ಭೇಟಿಗೆ ಸಮಯವೆ ಕೊಟ್ಟಿಲ್ಲ. ಹಾಗಾಗಿ ಅವರು ಬರಿಗೈಲಿ ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ದೆಹಲಿಗೆ ಹಾರಿದ್ದರು ಈಶ್ವರಪ್ಪ
ಪುತ್ರನಿಗೆ ಟಿಕೆಟ್ ಸಿಗದ ಹಿನ್ನೆಲೆ ಬಂಡಾಯವೆದ್ದಿರುವ ಈಶ್ವರಪ್ಪ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದರು. ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ತಮಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ದೆಹಲಿಗು ಆಹ್ವಾನಿಸಿದ್ದಾರೆ ಎಂದು ಈಶ್ವರಪ್ಪ ಅವರೆ ತಿಳಿಸಿದ್ದರು. ಅದರಂತೆ ಈಶ್ವರಪ್ಪ ತಮ್ಮ ಆಪ್ತರ ಜೊತೆಗೆ ದೆಹಲಿಗೆ ಹಾರಿದ್ದರು.
ಕಾದೂ ಕಾದು ಬರಿಗೈಲಿ ವಾಪಸ್
ಸಂಜೆ 7 ಗಂಟೆ ಹೊತ್ತಿಗೆ ಅಮಿತ್ ಷಾ ಅವರ ಭೇಟಿ ನಿಗದಿಯಾಗಿದೆ ಎಂದು ಈಶ್ವರಪ್ಪ ಅವರು ತಿಳಿಸಿದ್ದರು. ಆದರೆ ದೆಹಲಿ ತಲುಪಿದ್ದ ಈಶ್ವರಪ್ಪ ಅವರು ತಡರಾತ್ರಿವರೆಗು ಕಾದರು ಅಮಿತ್ ಷಾ ಭೇಟಿಯ ಸುಳಿವು ಸಿಗಲಿಲ್ಲ. ಭೇಟಿ ಸಾಧ್ಯವಿಲ್ಲ ಎಂದು ಅಮಿತ್ ಷಾ ಅವರ ಕಚೇರಿಯಿಂದ ಈಶ್ವರಪ್ಪಗೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳಗಿನ ಜಾವ ವಿಮಾನ ಹತ್ತಿ ಬೆಂಗಳೂರಿಗೆ ಮರಳಿ ಅಲ್ಲಿಂದ ಈಶ್ವರಪ್ಪ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.
ಈಶ್ವರಪ್ಪ ಹೇಳೋದೇನು?
ಇನ್ನು, ಈ ಬೆಳವಣಿಗೆ ಕುರಿತು ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ, ‘ಅಮಿತ್ ಶಾ ಅವರ ಸೂಚನೆ ಮೇರೆಗೆ ದೆಹಲಿಗೆ ಬಂದಿದ್ದೆ. ಆದರೆ ಸದ್ಯ ಭೇಟಿಗೆ ಸಿಗುವುದಿಲ್ಲ ಎಂಬುದಾಗಿ ಅವರ ಕಚೇರಿಯಿಂದ ಸಂದೇಶ ಬಂದಿದೆ. ನಾನು ಚುನಾವಣೆಗೆ ನಿಲ್ಲಬೇಕು. ರಾಘವೇಂದ್ರ ಅವರನ್ನು ಸೋಲಿಸಬೇಕು ಎಂಬುದು ಇದರ ಅರ್ಥ. ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರ ನಿಲುವು ಇದೇ ಆಗಿದೆ ಅನ್ನುವುದು ಇದರರ್ಥʼ ಎಂದು ತಿಳಿಸಿದರು.
ಕುತೂಹಲ ಮೂಡಿಸಿದ್ದ ಬೆಳವಣಿಗೆ
ಈಶ್ವರಪ್ಪ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿತ್ತು. ಬಿಜೆಪಿ ಕಾರ್ಯಕರ್ತರು, ಈಶ್ವರಪ್ಪ ಬೆಂಬಲಿಗರ ಮಧ್ಯೆ ನಾನಾ ಚರ್ಚೆಗೆ ಕಾರಣವಾಗಿತ್ತು. ಆದರೆ ಅಮಿತ್ ಷಾ ಭೇಟಿಯಾಗದಿರುವುದು ಈಶ್ವರಪ್ಪ ಬೆಂಬಲಿಗರನ್ನು ಚಿಂತೆಗೀಡು ಮಾಡಿದೆ. ಮುಂದಿನ ನಡೆಯ ಕುರಿತು ಕುತೂಹಲ ಮೂಡಿಸಿದೆ.
ಇದನ್ನೂ ಓದಿ – ಶಿವಮೊಗ್ಗದ ಆ ಸಂಸದ ಬಂದರೆ ಪ್ರಧಾನಿಯೇ ಎದ್ದು ನಿಲ್ಲುತ್ತಿದ್ದರು, ಯಾರದು?