SHIVAMOGGA LIVE NEWS | 13 MARCH 2024
SHIMOGA : ತೀವ್ರ ಕುತೂಹಲ ಕೆರಳಿಸಿದ್ದ ಹಾವೇರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಪ್ರಕಟಿಸಲಾಗಿದೆ. ಮಾಜಿ ಸಚಿವ ಈಶ್ವರಪ್ಪ ಪುತ್ರ ಕಾಂತೇಶ್ಗೆ ಟಿಕೆಟ್ ಕೈ ತಪ್ಪಿದೆ.
ಕಣ್ಣೀರಾದ ಈಶ್ವರಪ್ಪ ಕುಟುಂಬ
ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆ.ಈ.ಕಾಂತೇಶ್ ಅವರ ಹೆಸರು ಇಲ್ಲದಿರುವುದಕ್ಕೆ ಈಶ್ವರಪ್ಪ ಕುಟುಂಬದವರು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಈಶ್ವರಪ್ಪ ಅವರ ಮೊಬೈಲ್ಗೆ ಕರೆ ಬಂದಿದ್ದು, ಮನೆಯಿಂದ ದಿಢೀರ್ ದೌಡಾಯಿಸಿದರು.
‘ನನ್ನ ಮಗನಿಗೇಕೆ ಟಿಕೆಟ್ ಕೊಡಿಸಲಿಲ್ಲ?’
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬೆನ್ನಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ನಾನು, ನನ್ನ ಮಗ ಯಡಿಯೂರಪ್ಪ ಅವರ ಮನೆಗೆ ಹೋಗಿದ್ದಾಗ ಹಾವೇರಿ ಕ್ಷೇತ್ರಕ್ಕೆ ಟಿಕೆಟ್ ಕೊಡಿಸುತ್ತೇನೆ ಎಂದಿದ್ದರು. ಈಗಾಗಾಲೆ ಕಾಂತೇಶ್, ಹಾವೇರಿ ಭಾಗದ ಜನರ ವಿಶ್ವಾಸ ಗಳಿಸಿದ್ದರು. ಆದರೆ ಯಡಿಯೂರಪ್ಪ ಅವರಿಂದ ಅನ್ಯಾಯವಾಗಿದೆ. ನನಗೆ ಮೋಸ ಆಗಿದೆ. ನಾನು ಮೋದಿ ಅಭಿಮಾನಿ. ಜನರು ನನಗೆ ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ನಿಲ್ಲಿ ಅಂತಾ ಹೇಳುತ್ತಿದ್ದಾರೆ. ಸ್ಪರ್ಧಿಸಬೇಕೋ, ಬೇಡವೊ ಅನ್ನುವುದು ಗೊತ್ತಿಲ್ಲ ಎಂದರು.
ಯಡಿಯೂರಪ್ಪ ಅವರು ಹಠ ಹಿಡಿದು ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಆದರೆ ಕಾಂತೇಶ್ ಅವರಿಗೇಕೆ ಟಿಕೆಟ್ ಕೊಡಿಸಲಿಲ್ಲ. ಸದ್ಯ ಪಕ್ಷ ಒಂದು ಕುಟುಂಬದ ಕೈಗೆ ಸಿಕ್ಕಿದೆ ಎಂದು ಈಶ್ವರಪ್ಪ ಆರೋಪಿಸಿದರು.
ಇದನ್ನೂ ಓದಿ – ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಹೆಸರು ಪ್ರಕಟ