ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ELECTION SPECIAL : ಇಡೀ ದೇಶದ ಸಮಸ್ಯೆಗಳ ಪರಿಹಾರಕ್ಕೆ ಪ್ರಮುಖ ವೇದಿಕೆ ಲೋಕಸಭೆ. ಇಲ್ಲಿ ಮಾತನಾಡಲು, ತಮ್ಮ ಕ್ಷೇತ್ರ ವ್ಯಾಪ್ತಿಯ ಸಮಸ್ಯೆ ಕುರಿತು ಪ್ರಶ್ನಿಸಲು ಸಂಸದರಿಗೆ ಅವಕಾಶ ದೊರೆಯುವುದು ಅಷ್ಟು ಸುಲಭವಲ್ಲ. ಶಿವಮೊಗ್ಗ ಕ್ಷೇತ್ರದ ಮೊದಲ ಸಂಸದ ಕೆ.ಜಿ.ಒಡೆಯರ್ ಅವರು ಸಂಸತ್ತಿನಲ್ಲಿ ಮೊದಲ ಬಾರಿ ಪ್ರಶ್ನೆ ಕೇಳಿದ್ದು 1953ರ ಸೆಪ್ಟೆಂಬರ್ 9ರಂದು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಮೊದಲ ಪ್ರಶ್ನೆ ಅಡಿಕೆ ಬಗ್ಗೆ
1950 ರಿಂದ 1953ರವರೆಗೆ ಭಾರತದಲ್ಲಿ ಉತ್ಪಾದನೆಯಾದ ಅಡಿಕೆ ಪ್ರಮಾಣವೆಷ್ಟು? ಈ ಅವಧಿಯಲ್ಲಿ ಸರ್ಕಾರ ಆಮದು ಮಾಡಿಕೊಂಡ ಅಡಿಕೆ ಎಷ್ಟು? ದೊರೆತ ಆಮದು ಶುಲ್ಕವೆಷ್ಟು? ಎಂದು ಶಿವಮೊಗ್ಗ ಸಂಸದ ಕೆ.ಸಿ.ಒಡೆಯರ್ ಅವರು ವಾಣಿಜ್ಯ ಮತ್ತು ಕೈಗಾರಿಕ ಸಚಿವರನ್ನು ಪ್ರಶ್ನಿಸಿದ್ದರು.
1950ರಲ್ಲಿ 4.43 ಕೋಟಿ ರೂ., 1951ರಲ್ಲಿ 4.74 ಕೋಟಿ ರೂ. 1952ರಲ್ಲಿ 3.68 ಕೋಟಿ ರೂ. ಆಮದು ಶುಲ್ಕ ಲಭಿಸಿದೆ. ಈ ಅವಧಿಯಲ್ಲಿ ಅಂದಾಜು 10.70 ಸೆಂಟಲ್ ವೇಯ್ಟ್ನಷ್ಟು ಅಡಿಕೆ ಆಮದು ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಪ್ರತಿ ವರ್ಷ ಸರಾಸರಿ 22 ಲಕ್ಷ ಮೌಂಡ್ನಷ್ಟು ಅಡಿಕೆ ಉತ್ಪಾದನೆಯಾಗುತ್ತಿದೆ ಎಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಕರ್ಮಾರ್ಕರ್ ಉತ್ತರಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದ ಮೊದಲ ಸಂಸದ ಯಾರು ಗೊತ್ತಾ? ಬ್ರಿಟೀಷರಿಗೆ ಅವರನ್ನು ಕಂಡರೆ ಮುಖ ಕೆಂಪಾಗುತ್ತಿದ್ದದ್ದು ಯಾಕೆ?