ಮಗಳು ಬಿಜೆಪಿ ಸೇರ್ಪಡೆ ಕುರಿತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮೊದಲ ಪ್ರತಿಕ್ರಿಯೆ, ಏನಂದ್ರು ಹಿರಿಯ ನಾಯಕ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 12 APRIL 2023

SAGARA : ಮಗಳು ಡಾ.ರಾಜನಂದಿನಿ ಕಾಂಗ್ರೆಸ್‌ ತೊರೆದು ದಿಢೀರ್‌ ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮೊದಲ ಪ್ರತಿಕ್ರಿಯೆ (First reaction) ನೀಡಿದ್ದಾರೆ.

111020 Kagodu Thimmappa General Image 1

ರಾಜಕೀಯದಲ್ಲಿ ಬದ್ಧತೆ ಇರಬೇಕು

ಡಾ.ರಾಜನಂದಿನಿ ಅವರು ಈ ರೀತಿ ಮಾಡುತ್ತಾರೆ ಎಂದು ನಾನು ಕನಸು ಮನಸಿನಲ್ಲಿಯು ಅಂದುಕೊಂಡಿರಲಿಲ್ಲ. ರಾಜಕೀಯದಲ್ಲಿ ಸ್ಥಿರತೆ, ಬದ್ಧತೆ ಇಟ್ಟುಕೊಳ್ಳಬೇಕು. ಬದ್ಧತೆಯಿಂದಾಗಿಯೇ ನಾವು ಇಷ್ಟೊಂದು ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಕಾಗೋಡು ತಿಮ್ಮ ಪ್ಪ ತಿಳಿಸಿದರು.

ಇದನ್ನೂ ಓದಿ – ಕಾಂಗ್ರೆಸ್‌ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ದಿಢೀರ್‌ ಬಿಜೆಪಿ ಸೇರ್ಪಡೆ, ಕಾರಣವೇನು? ಮುಂದೇನು?

ಎದೆಗೆ ಚೂರಿ ಹಾಕಿದಂತೆ

ಇಂತಹ ಸನ್ನಿವೇಶದಲ್ಲಿ ಬಿಜೆಪಿ ಸೇರ್ಪಡೆಯಾಗಿರುವುದು ನನ್ನ ಎದೆಗೆ ಚೂರಿ ಹಾಕಿದಂತೆ ಆಗಿದೆ. ಮಗಳಾಗಿ ಈ ರೀತಿ ನಡೆದುಕೊಳ್ಳುತ್ತಾಳೆ ಎಂದು ಕನಸಿನಲ್ಲಿಯು ಕಂಡಿರಲಿಲ್ಲ. ನಾನು ಕಾಂಗ್ರೆಸ್‌ ತೊರೆಯುವುದಿಲ್ಲ. ಕಾಂಗ್ರೆಸ್‌ ಪರವಾಗಿಯೇ ಈ ಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ. ಅವರು ಬಿಜೆಪಿ ಸೇರ್ಪಡೆಯಾದ ವಿಚಾರ ಈಗಷ್ಟೆ ಗೊತ್ತಾಯಿತು. ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ರಾಜಕೀಯ ಅವಕಾಶ ಇತ್ತು

ರಾಜನಂದಿನಿ ಅವರು ನನ್ನೊಂದಿಗೆ ಈ ವಿಚಾರ ಹೇಳಿಕೊಳ್ಳಲಿಲ್ಲ. ಈ ಬಗ್ಗೆ ಬೇಸರವಿದೆ. ಕಾಂಗ್ರೆಸ್‌ ಪಕ್ಷದಲ್ಲಿಯೇ ರಾಜಕೀಯ ಅವಕಾಶವಿತ್ತು. ಒಮ್ಮೆ ಯು ಬಿಜೆಪ ಸೇರ್ಪಡೆ ಕುರಿತು ನನ್ನೊಂದಿಗೆ ಹೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment