SHIVAMOGGA LIVE NEWS | 21 MARCH 2023
SHIMOGA : ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಹೆಸರಿನಲ್ಲಿ ಶಿವಮೊಗ್ಗ ನಗರದಲ್ಲಿ ಮತ್ತೊಮ್ಮೆ ಫ್ಲೆಕ್ಸ್ (Flex) ಪ್ರತ್ಯಕ್ಷವಾಗಿದೆ. ಇದು ಮೂರನೆ ಫ್ಲೆಕ್ಸ್ ಆಗಿದ್ದು, ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಚರ್ಚೆ, ಕುತೂಹಲಕ್ಕೆ ಕಾರಣವಾಗಿದೆ.
ಶಿವಮೊಗ್ಗ ನಗರದ ಪ್ರಮುಖ ಸರ್ಕಲ್ ಗಳು, ರಸ್ತೆಗಳಲ್ಲಿ ಫ್ಲೆಕ್ಸ್ ಗಳನ್ನು (Flex) ಹಾಕಲಾಗಿದೆ. ಸಾರ್ವಜನಿಕರು ಗಮನಿಸಿ, ಅದರಲ್ಲಿರುವ ವಿಷಯಗಳನ್ನು ಸ್ಪಷ್ಟವಾಗಿ ಓದುವಂತೆ ಫ್ಲೆಕ್ಸ್ ಅಳವಡಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದೆ ಫ್ಲೆಕ್ಸ್ ನಲ್ಲಿ?
ಫ್ಲೆಕ್ಸ್ ನಲ್ಲಿ ಯುಗಾದಿ ಹಬ್ಬ ಮತ್ತು ರಂಜಾನ್ ಹಬ್ಬಕ್ಕೆ ಶುಭಾಶಯ ತಿಳಿಸಲಾಗಿದೆ. ಅದರ ಕೆಳಗೆ ಆಯನೂರು ಮಂಜುನಾಥ್ ಅವರ ದೊಡ್ಡ ಭಾವಚಿತ್ರವಿದೆ. ಅದರ ಪಕ್ಕದಲ್ಲಿ ‘ಹೊಸ ವರ್ಷದ ಶೋಭಕೃತ ಸಂವತ್ಸರದಲ್ಲಿ. ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ, ಮುರಿದ ಮನಸ್ಸುಗಳ ಬೆಸುಗೆಯಾಗಲಿ ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ’ ಎಂದು ಬರೆಯಲಾಗಿದೆ.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಹೆಸರಿನಲ್ಲಿ ಇದು ಮೂರನೆ ಫ್ಲೆಕ್ಸ್. ಈ ಹಿಂದೆ ಎರಡು ಫ್ಲೆಕ್ಸ್ ಗಳನ್ನು ಶಿವಮೊಗ್ಗ ನಗರದ ವಿವಿಧೆಡೆ ಅಳವಡಿಸಲಾಗಿತ್ತು. ಅವುಗಳ ಸಾರ್ವಜನಿಕರ ಗಮನ ಸೆಳೆದಿದ್ದವು. ಆದರೆ ಯುಗಾದಿ, ರಂಜಾನ್ ಹಬ್ಬದ ಶುಭ ಕೋರುವ ಮೂರನೆ ಫ್ಲೆಕ್ಸ್ ತೀವ್ರ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಶೆಡ್ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ