SHIVAMOGGA LIVE NEWS | 21 MARCH 2024
SHIMOGA / BHADRAVATHI : ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದಾರೆ. ಜಿಲ್ಲೆಯ ಗಡಿಯಲ್ಲಿ ಭದ್ರಾವತಿ ಕಾಂಗ್ರೆಸ್ ಮುಖಂಡರು ಗೀತಾ ಶಿವರಾಜ್ ಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ನೀಡಿದರು. ತೆರೆದ ಜೀಪ್ನಲ್ಲಿ ಮೆರವಣಿಗೆ ನಡೆಸಲಾಯಿತು. ಶಿವಮೊಗ್ಗದಲ್ಲಿಯು ಬೃಹತ್ ಹಾರಗಳನ್ನು ಹಾಕಿ ಸ್ವಾಗತಿಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎಲ್ಲೆಲ್ಲಿ ಹೇಗಿತ್ತು ಸ್ವಾಗತ?
ಭದ್ರಾವತಿಯ ಕಾರೇಹಳ್ಳಿ ಗ್ರಾಮದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಸೇರಿದಂತೆ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಪತಿ ಶಿವರಾಜ್ಕುಮಾರ್ ಅವರೊಂದಿಗೆ ಆಗಮಿಸಿದ ಗೀತಾ ಅವರನ್ನು ಸ್ವಾಗತಿಸಲಾಯಿತು. ಕಾರೇಹಳ್ಳಿಯ ಶ್ರೀ ಹುಚ್ಚನದಾಸಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಕಾರ್ಯಕರ್ತರು ತಂದಿದ್ದ ಟಗರಿಗೆ ಕುಮಾರ್ ಹೂಮಾಲೆ ಶಿವರಾಜ್ ಕುಮಾರ್ ನಮಸ್ಕರಿಸಿದರು. ಕಾರೇಹಳ್ಳಿಯಿಂದ ತೆರೆದ ಜೀಪಿನಲ್ಲಿ ಪ್ರಚಾರ ಕೈಗೊಂಡ ಗೀತಾ ಶಿವರಾಜ್ಕುಮಾರ್ ಸಾರ್ವಜನಿಕರಿಗೆ ಕೈಮುಗಿಯುತ್ತ ಮತಯಾಚಿಸಿದರು. ಸಹೋದರ, ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮತಯಾಚಿಸಿದರು.
ಬಾರಂದೂರು ಮಾರ್ಗವಾಗಿ ನಗರದ ಸಿ.ಎನ್.ರಸ್ತೆ, ಬಿ.ಎಚ್.ರಸ್ತೆಗಳಲ್ಲಿ ಅದ್ಧೂರಿ ಬೈಕ್ ರ್ಯಾಲಿ ನಡೆಸಿದರು. ಚಾಮೇಗೌಡ ಏರಿಯಾದ ತಿಮ್ಮಯ್ಯ ಮಾರ್ಕೆಟ್ ಬಳಿ ಗೀತಾ ಶಿವರಾಜ್ಕುಮಾರ್ ಅವರಿಗೆ ಕೊಬ್ಬರಿ ಹಾರ ಹಾಕಿ ಸನ್ಮಾನಿಸಿದರು.
ಶಿವಮೊಗ್ಗದಲ್ಲಿಯು ಅದ್ಧೂರಿ ಸ್ವಾಗತ
ಇತ್ತ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು. ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅವರ ಮೆರವಣಿಗೆ ಮಾಡಲಾಯಿತು. ಎಂಆರ್ಎಸ್ ಸರ್ಕಲ್ನಿಂದ ಬೈಕ್ ರ್ಯಾಲಿ ನಡೆಸಲಾಯಿತು. ಹೊಳೆ ಬಸ್ ನಿಲ್ದಾಣದಲ್ಲಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಬೃಹತ್ ಹಾರ ಹಾಕಲಾಯಿತು. ಶಿವಮೊಗ್ಗದ ಲಗಾನ್ ಕಲ್ಯಾಣ ಮಂದಿರದವರೆಗೆ ರ್ಯಾಲಿ ನಡೆಸಲಾಯಿತು.
ಇದನ್ನೂ ಓದಿ – ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನದ ಚುನಾವಣೆಗೆ ದಿನಾಂಕ ಪ್ರಕಟ, ಯಾವಾಗ ಮತದಾನ?