ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 30 ಡಿಸೆಂಬರ್ 2021
ಅವಧಿ ಮುಗಿದ ಮೂರು ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಇವತ್ತು ಮತ ಎಣಿಕೆ ಕಾರ್ಯ ನಡೆದಿದ್ದು, ಮೂರು ಗ್ರಾಮ ಪಂಚಾಯಿತಿಗಳ 39 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಶಿವಮೊಗ್ಗದ ತಾಲೂಕು ಕುಂಸಿ ಗ್ರಾಮ ಪಂಚಾಯಿತಿ 16 ಸ್ಥಾನಕ್ಕೆ ಚುನಾವಣೆ ನಡೆದಿತ್ತು. 55 ಆಕಾಂಕ್ಷಿಗಳು ಸ್ಪರ್ಧೆ ಮಾಡಿದ್ದರು.
ಕುಂಸಿ -1 ಕ್ಷೇತ್ರದಿಂದ – ಕೆ.ಹೆಚ್.ಕೇಶವಮೂರ್ತಿ(ಬಿಸಿಎಂ – ಅ), ಸತ್ಯವತಿ (ಸಾಮಾನ್ಯ ಮಹಿಳೆ), ಕೆ.ಪಿ.ಶಾರದಾ (ಬಿಸಿಎಂ – ಬಿ) ಗೆಲವು ಸಾಧಿಸಿದ್ದಾರೆ.
ಕುಂಸಿ -2 ಕ್ಷೇತ್ರದಿಂದ – ಮಂಜುನಾಥ್ ಹೆಚ್.ಆರ್ (ಸಾಮಾನ್ಯ), ರಾಜೇಶ್ವರಿ (ಎಸ್.ಸಿ), ಶೈಲಾ (ಸಾಮಾನ್ಯ ಮಹಿಳೆ)
ಕುಂಸಿ -3 ಕ್ಷೇತ್ರದಿಂದ – ಇಮ್ತಿಯಾಜ್ ಬಾಷಾ (ಸಾಮಾನ್ಯ), ಕೆ.ಎಲ್.ಪುಷ್ಪಾ (ಬಿಸಿಎಂ-ಎ ಮಹಿಳೆ)
ಕುಂಸಿ -4 ಕ್ಷೇತ್ರದಿಂದ – ಸನಾವುಲ್ಲಾ (ಸಾಮಾನ್ಯ), ಶಾಹೀದಾ ಬೇಗಂ (ಬಿಸಿಎಂ-ಎ ಮಹಿಳೆ), ಗುರುಮೂರ್ತಿ ಕೆ.ಆರ್ (ಎಸ್.ಸಿ)
ಕುಂಸಿ -5 ಕ್ಷೇತ್ರದಿಂದ – ಚಂದ್ರಮ್ಮ (ಎಸ್.ಸಿ), ಶ್ರೀನಿವಾಸ್ (ಸಾಮಾನ್ಯ).
ಕುಂಸಿ -6 ಕ್ಷೇತ್ರದಿಂದ – ರೂಪಾ.ಆರ್ (ಸಾಮಾನ್ಯ ಮಹಿಳೆ), ಚನ್ನಮ್ಮ.ಬಿ.ಎಲ್ (ಎಸ್.ಟಿ. ಮಹಿಳೆ), ಆಂಜನೇಯ (ಸಾಮಾನ್ಯ)
ಶಿವಮೊಗ್ಗದ ಪುರದಾಳು ಗ್ರಾಮ ಪಂಚಾಯಿತಿಯ 9 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 32 ಆಕಾಂಕ್ಷಿಗಳು ಸ್ಪರ್ಧೆ ಮಾಡಿದ್ದರು.
ಚಿತ್ರಶೆಟ್ಟಿಹಳ್ಳಿ – ಕಮಲಾಕ್ಷಿ (ಸಾಮಾನ್ಯ ಮಹಿಳೆ)
ಪುರದಾಳು – ವೈ ಕುಸುಮಾ (ಬಿಸಿಎಂ ಅ ಮಹಿಳೆ), ಪ್ರದೀಪ್ ಎಸ್.ಹೆಬ್ಬೂರು (ಸಾಮಾನ್ಯ), ಭಾರತಿ ನಾಗರಾಜ (ಸಾಮಾನ್ಯ), ಮಾನಸಾ ಸತೀಶ್ (ಸಾಮಾನ್ಯ ಮಹಿಳೆ),
ಅನುಪಿನಕಟ್ಟೆ – ಲಕ್ಷ್ಮಿಬಾಯಿ (ಎಸ್.ಸಿ ಮಹಿಳೆ), ಜಿ.ರಾಮಣ್ಣ (ಸಾಮಾನ್ಯ)
ತ್ಯಾವರೆಕೊಪ್ಪ – ನಾಗವೇಣಿ.ಕೆ (ಎಸ್.ಟಿ ಮಹಿಳೆ), ಎಸ್.ಆರ್.ಗಿರೀಶ್ (ಬಿಸಿಎಂ ಅ)
ಶಿಕಾರಿಪುರ ತಾಲೂಕು ಹಾರೋಗೊಪ್ಪ ಗ್ರಾಮ ಪಂಚಾಯಿತಿಯ 14 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 34 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ
ಹಾರೋಗೊಪ್ಪ -1 ಕ್ಷೇತ್ರದಿಂದ – ಗಂಗೂ ಬಾಯಿ (ಎಸ್.ಸಿ ಮಹಿಳೆ), ಸುಬ್ರಹ್ಮಣ್ಯ (ಸಾಮಾನ್ಯ), ಅಶೋಕ್ ಹೆಚ್.ಜಿ (ಸಾಮಾನ್ಯ), ನೀಲಾಬಾಯಿ (ಸಾಮಾನ್ಯ ಮಹಿಳೆ)
ಹಾರೋಗೊಪ್ಪ -2 ಕ್ಷೇತ್ರ ದಿಂದ – ಕವಿತಾ (ಎಸ್.ಸಿ ಮಹಿಳೆ),
ಯರೇಕಟ್ಟೆ – ಶಿವಮ್ಮ (ಎಸ್.ಟಿ. ಮಹಿಳೆ),
ಹಿರೇಕೊರಲಹಳ್ಳಿ – ಜಗದೀಶ್ (ಎಸ್.ಸಿ), ಎಸ್.ವಿ. ಪಾಟೀಲ್ (ಸಾಮಾನ್ಯ), ಕವಿತಾ (ಸಾಮಾನ್ಯ ಮಹಿಳೆ)
ಅತ್ತಿಬೈಲು – ನಾಗರಾಜ ನಾಯ್ಕ (ಎಸ್.ಸಿ), ಶಿವಮ್ಮ (ಎಸ್.ಸಿ ಮಹಿಳೆ),
ತಟ್ಟೆಹಳ್ಳಿ – ಗಿರೀಶ್ ನಾಯ್ಕ (ಎಸ್.ಸಿ), ಗಾಯತ್ರಿ ಬಾಯಿ (ಎಸ್.ಸಿ ಮಹಿಳೆ)
ಬೆಂಬಲಿಗರ ಸಂಭ್ರಮಾಚರಣೆ
ಮೂರ ಗ್ರಾಮ ಪಂಚಾಯಿತಿ ಚುನಾವಣೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಪಕ್ಷ, ಚಿಹ್ನೆ ಇರದಿದ್ದರೂ, ಪಕ್ಷದ ಬೆಂಬಲಿಗರು ಕಣಕ್ಕಿಳಿದಿದ್ದರು. ಹಾಗಾಗಿ ಮೂರು ಗ್ರಾಮ ಪಂಚಾಯಿತಿ ಚುನಾವಣೆಯತ್ತ ರಾಜಕೀಯ ಪಕ್ಷಗಳ ಮುಖಂಡರು ಕಣ್ಣಿಟ್ಟದ್ದರು. ಕುಂಸಿ ಮತ್ತು ಪುರದಾಳು ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯವು ಶಿವಮೊಗ್ಗದ ತಾಲೂಕು ಕಚೇರಿಯಲ್ಲಿ ನಡೆಯಿತು. ತಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ ಅವರ ಬೆಂಬಲಿಗರು ಸಂಭ್ರಮಾಚಾರಣೆ ಮಾಡಿದರು. ಹೂಮಾಲೆ ಹಾಕಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಮತ ಎಣಿಕೆ ಕಾರ್ಯದ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422