‘ಭ್ರಮೆಯಲ್ಲಿದೆ ಕಾಂಗ್ರೆಸ್‌’, ಜೆಡಿಎಸ್‌ ಆರೋಪ, ‘ಅತಿವೃಷ್ಟಿ ನಿರ್ವಹಣೆ ಹೇಗೆ?’, ಮಾಜಿ ಶಾಸಕ ಪ್ರಶ್ನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 30 MAY 2024

SHIMOGA : ವಿಧಾನ ಪರಿಷತ್ ಚುನಾವಣೆಯನ್ನು ಕಾಂಗ್ರೆಸ್ ಹಣ ಬಲದಲ್ಲಿ (Money Power) ಗೆಲ್ಲಬಹುದು ಎಂಬ ಭ್ರಮೆಯಲ್ಲಿದೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಕಡಿದಾಳ್‌ ಗೋಪಾಲ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಋತ್ಯ ಶಿಕ್ಷಕರ ಕ್ಷೇತ್ರದ ಭೋಜೇಗೌಡ ಹಾಗೂ ಪದವೀಧರ ಕ್ಷೇತ್ರದ ಡಾ.ಧನಂಜಯ ಸರ್ಜಿ ಪರ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ಆದರೆ, ಕಾಂಗ್ರೆಸ್ ಹಣ ಹಂಚುವ ಮೂಲಕ ಮತ ಸೆಳೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಡಾ.ಧನಂಜಯ ಸರ್ಜಿ ವೈದ್ಯಕೀಯ ಕ್ಷೇತ್ರದ ಜತೆಗೆ ಸಮಾಜಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಭೋಜೇಗೌಡ ಅವರು ಶಿಕ್ಷಕರ ಪರ ಕೆಲಸ ಮಾಡಿದ್ದಾರೆ. ಇಬ್ಬರಿಗೂ ಮೊದಲ ಪ್ರಾಶಸ್ತ್ರದ ಮತ ನೀಡಿ ಎಂದರು.

ಇದನ್ನೂ ಓದಿ – ಸ್ಮಾರ್ಟ್‌ ಹೆಲ್ಮೆಟ್‌ ಸಿದ್ಧಪಡಿಸಿದ ಶಿವಮೊಗ್ಗದ ವಿದ್ಯಾರ್ಥಿಗಳು, ಹೇಗೆ ಕೆಲಸ ಮಾಡುತ್ತೆ? ಪ್ರಯೋಜನವೇನು?

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ರಾಜ್ಯ ಸರಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಅತಿವೃಷ್ಟಿಗೆ ಯಾವ ರೀತಿ ಸಿದ್ಧವಾಗುತ್ತಿದೆ ಎಂಬುದೆ ತಿಳಿಯುತ್ತಿಲ್ಲ. ಸಾಂಕ್ರಾಮಿಕ ರೋಗಗಳು ಹರಡದಂತೆ ವ್ಯವಸ್ಥೆ ಮಾಡಿಕೊಳ್ಳುವ ಕಡೆ ಸರಕಾರ ಗಮನ ಹರಿಸಬೇಕು ಎಂದರು.

ದೀಪಕ್ ಸಿಂಗ್, ಕೆ.ಎನ್.ರಾಮಕೃಷ್ಣ, ದಾದಾಪೀರ್, ನರಸಿಂಹ, ಅಲ್ತಾಫ್, ಸಿದ್ದಪ್ಪ, ವಿನಯ್, ಗೋಪಿ ಇದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 30, 2024

Leave a Comment