SHIVAMOGGA LIVE NEWS | 13 ಮಾರ್ಚ್ 2022
ಅರಣ್ಯ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಹುನ್ನಾರವನ್ನು ಡಬಲ್ ಇಂಜಿನ್ ಸರ್ಕಾರಗಳು ಮಾಡುತ್ತಿವೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪಿಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 25 ಸಾವಿರ ರೈತರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ರೈತರಿಗೆ ನೋಟಿಸ್ ಕೊಟ್ಟು ಕೋರ್ಟಿಗೆ ಅಲೆಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸೊರಬ ತಾಲೂಕಿನಲ್ಲಿ 11 ಸಾವಿರ ರೈತರಿಗೆ ಸಮಸ್ಯೆಯಾಗಿದೆ. ರೈತರು ಬೇಲ್ ತೆಗೆದುಕೊಳ್ಳುವ ಪರಿಸ್ಥಿತಿಯನ್ನು ಸರ್ಕಾರ ಸೃಷ್ಟಿ ಮಾಡಿದೆ. ಹೊಟ್ಟೆ ಪಾಡಿಗೆ ಸಾಗುವಳಿ ಮಾಡುತ್ತಿರುವ ಭೂ ಒತ್ತುವರಿದಾರರನ್ನು ಭೂ ಕಬಳಿಕೆದಾರರು ಎಂದು ಕೇಸು ಹಾಕಿಸಿ ಬೆಂಗಳೂರಿಗೆ ಮತ್ತು ಹೈಕೋರ್ಟ್ಗೆ ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಯಡಿಯೂರಪ್ಪ ಅವರು ತಂದ ಕಾನೂನು
ಈ ಕಾನೂನು ತಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಈಗ ಸದನದಲ್ಲಿ ರೈತರಿಗೆ ಅನ್ಯಾಯ ಎಂದು ಹೇಳುತ್ತಿದ್ದಾರೆ. ಈ ಕಾನೂನು ತಿದ್ದುಪಡಿ ಮಾಡದಿದ್ದರೆ ಸರಕಾರಕ್ಕೆ ಒಳ್ಳೆ ಹೆಸರು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರೇ ಮಾಡಿದ ಕಾನೂನಿನ ವಿರುದ್ಧ ಈಗ ಮಾತನಾಡಿರುವುದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ | ‘ಉಕ್ರೇನ್’ನಿಂದ ಮರಳಿದವರ ವಿದ್ಯಭ್ಯಾಸಕ್ಕೆ ಶಿವಮೊಗ್ಗದ ಶರಾವತಿ ಡೆಂಟಲ್ ಕಾಲೇಜಿನಲ್ಲಿ ಅನುಕೂಲ’
ಅರಣ್ಯ ಹಕ್ಕು ಕಾಯ್ದೆ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಮಾಹಿತಿಯ ಕೊರತೆಯಿಂದ ಮಾತನಾಡುತ್ತಿದ್ದಾರೆ. ಅವರು ಇತಿಹಾಸ ಅರಿತು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರ ಕುರಿತು ಮಾತನಾಡಬೇಕು ಎಂದು ಹೇಳಿದರು.
ಸಂಸದರಿಗೆ ಇತಿಹಾಸ ಗೊತ್ತಿಲ್ಲ
2006ರಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಅರಣ್ಯ ಹಕ್ಕು ಕಾಯಿದೆಯಲ್ಲಿ ಲೋಪಗಳಿವೆ ಮತ್ತು ಅಂದು ಸಂಸದರಾಗಿದ್ದವರು ಮಾತನಾಡಿಲ್ಲ ಎಂದು ಆರೋಪ ಮಾಡಿರುವ ಈಗಿನ ಸಂಸದರಿಗೆ ಇತಿಹಾಸವೇ ಗೊತ್ತಿಲ್ಲ. 2002 ರಲ್ಲಿ ಅಂದಿನ ಸಂಸದರಾಗಿದ್ದ ಎಸ್.ಬಂಗಾಪ್ಪ ಅವರು 45 ನಿಮಿಷ ಸಂಸತ್ತಿನಲ್ಲಿ ಮಾತನಾಡಿ ಅನಧಿಕೃತ ಸಾಗುವಳಿದಾರರ ಬಗ್ಗೆ ಮಾತನಾಡಿದ್ದಾರೆ. ಅರಣ್ಯ ಹಕ್ಕು ಕಾಯಿದೆ ಜಾರಿಗೆ ತಂದಿದ್ದೇ ಕಾಂಗ್ರೆಸ್ ಸರಕಾರ ಇದರಿಂದ ಪರಿಶಿಷ್ಟ ಪಂಗಡ ಹಾಗೂ ಗುಡ್ಡಗಾಡು ಪ್ರದೇಶದ ಜನರಿಗೆ ಉಳುವ ಭೂಮಿಗೆ ಹಕ್ಕುಪತ್ರ ಸಿಕ್ಕಿದೆ ಎಂದು ಹೇಳಿದರು.
ಇದನ್ನೂ ಓದಿ | ಮಾಜಿ ಶಾಸಕ ಮಧು ಬಂಗಾರಪ್ಪ ನೇತೃತ್ವದಲ್ಲಿ ಆನವಟ್ಟಿಯಲ್ಲಿ ಪ್ರತಿಭಟನೆಗೆ ನಿರ್ಧಾರ
ಕಾಯಿದೆಯಲ್ಲಿ 75 ವರ್ಷ ದಾಖಲೆ ಬೇಕೆಂಬ ಷರತ್ತು ಇರುವುದು ಮಲೆನಾಡಿನ ಭಾಗದ ಜನರಿಗೆ ತೊಂದರೆಯಾಗಿರುವುದು ನಿಜ. ಆದರೆ ಅದನ್ನು ಸರಿಮಾಡುತ್ತೇವೆ ಎಂದು ಚುನಾಯಿತರಾದ ಬಿಜೆಪಿ ಸರಕಾರ ಯಾಕೆ ಮಾಡಿಲ್ಲ ಮತ್ತು ನಮ್ಮ ಸಂಸದರು ಈ ಬಗ್ಗೆ ಯಾಕೆ ಸಂಸತ್ತಿನಲ್ಲಿ ಮಾತನಾಡಿಲ್ಲ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು.
ಭೂ ಸುಧಾರಣಾ ಕಾಯಿದೆ ಮೂಲಕ ಬಡವರಿಗೆ ಭೂಮಿ ಕೊಟ್ಟಿರುವುದು ಕಾಂಗ್ರೆಸ್ ಪಕ್ಷ, ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪಾರಂ 50, 53 ಜಾರಿಗೆ ತಂದು ಲಕ್ಷಾಂತರ ಭೂ ಹೀನ ರೈತರಿಗೆ ಭೂಮಿ ಕೊಡಲಾಗಿದೆ. ಆದರೆ ಇತಿಹಾಸ ಮರೆಮಾಚುವ ಬಿಜೆಪಿ ನಾಯಕರು ಈಗ ಪ್ರತಿಪಕ್ಷಗಳ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದು ಮಧುಬಂಗಾರಪ್ಪ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಪ್ರಮುಖರಾದ ಜಿ.ಡಿ.ಮಂಜುನಾಥ್, ಡಾ.ಶ್ರೀನಿವಾಸ್ ಕರಿಯಣ್ಣ, ಕಲಗೋಡು ರತ್ನಾಕರ್, ಯು.ಶಿವಾನಂದ್, ಆರ್.ಸಿ.ಪಾಟೀಲ್, ಹುಲ್ತಿಕೊಪ್ಪ ಶ್ರೀಧರ್, ಪ್ರವೀಣ್, ವೈ.ಹೆಚ್.ನಾಗರಾಜ್ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200