SHIVAMOGGA LIVE NEWS | 30 MARCH 2023
SHIMOGA : ವಿಧಾನಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ಗಳನ್ನು (Checkpost) ನಿರ್ಮಿಸಲಾಗಿದೆ. ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಅಕ್ರಮವಾಗಿ ಹಣ ಮತ್ತು ಇತರೆ ವಸ್ತುಗಳನ್ನು ಕೊಂಡೊಯ್ಯುತ್ತಿರುವುದು ಕಂಡು ಬಂದಲ್ಲಿ ಕೂಡಲೆ ವಶಕ್ಕೆ ಪಡೆಯಲಾಗುತ್ತಿದೆ.
ಚುನಾವಣೆ ಹೊತ್ತಲ್ಲಿ ಸಾರ್ವಜನಿಕರು ದಾಖಲೆ ಇಲ್ಲದೆ ಹಣ ಸಾಗಣೆ ಮಾಡುತ್ತಿರುವುದು ಕಂಡು ಬಂದಲ್ಲಿ ಅದನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎಷ್ಟು ಹಣ ಕೊಂಡೊಯ್ಯಲು ಅವಕಾಶವಿದೆ?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು, ಸಾರ್ವಜನಿಕರು 50 ಸಾವಿರ ರೂ.ವರೆಗೆ ಹಣ ಕೊಂಡೊಯ್ಯಲು ಅವಕಾಶವಿದೆ. ಆದರೆ ಅದಕ್ಕಿಂತಲೂ ಹೆಚ್ಚಿನ ಹಣಕ್ಕೆ ಸೂಕ್ತ ದಾಖಲೆ ಇದ್ದರಷ್ಟೆ ಸಾಗಣೆಗೆ ಅವಕಾಶವಿರಲಿದೆ. ಇಲ್ಲದಿದ್ದಲ್ಲಿ ಅಧಿಕಾರಿಗಳು ಹಣ ವಶಕ್ಕೆ ಪಡೆಯುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಮಾತನಾಡಿ, ಚೆಕ್ ಪೋಸ್ಟ್ ನಲ್ಲಿ (Checkpost) ಪ್ರತಿ ವಾಹನವನ್ನು ತಪಾಸಣೆ ಮಾಡಲಾಗುತ್ತದ. ದಾಖಲೆ ಇಲ್ಲದೆ ಹಣ ಅಥವಾ ಇತರೆ ವಸ್ತುಗಳ ಸಾಗಣೆ ಮಾಡುವುದು ಕಂಡು ಬಂದಲ್ಲಿ ವಶಕ್ಕೆ ಪಡೆಯಲಾಗುತ್ತದೆ. ದಾಖಲೆ ರಹಿತವಾಗಿ 10 ಲಕ್ಷಕ್ಕಿಂತ ಕಡಿಮೆ ಮೊತ್ತದ ಹಣ ಕೊಂಡೊಯ್ದರೆ ಪ್ರತ್ಯೇಕ ಪ್ರಕರಣ, 10 ಲಕ್ಷಕ್ಕಿಂತಲೂ ಹೆಚ್ಚಿನ ಹಣ ಕೊಂಡೊಯ್ದರೆ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
ಮದುವೆಗೆ ಇದೆಯಾ ಷರತ್ತು?
ಇನ್ನು, ವಿವಾಹ ಸೇರಿದಂತೆ ವೈಯಕ್ತಿಕ ಕಾರ್ಯಕ್ರಮಗಳಿಗೆ ಯಾವುದೆ ಅನುಮತಿ ಬೇಕಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ‘ಮದುವೆಗೆ ಅನುಮತಿ ಬೇಕಿಲ್ಲ. ಆದರೆ ಮದುವೆ ಕಾರ್ಯಕ್ರಮದಲ್ಲಿ ಪಕ್ಷ, ಅಭ್ಯರ್ಥಿ ಪರವಾಗಿ ಕರಪತ್ರ ಹಂಚುವುದು, ಬ್ಯಾನರ್ ಕಟ್ಟುವುದು ಸೇರಿದಂತೆ ರಾಜಕೀಯ ಚುಟುವಟಿಕೆ ನಡೆಸಿದರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಾರೆ’ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.
ಇದನ್ನೂ ಓದಿ – ನ್ಯೂಸ್ ಚಾನಲ್, ಪೇಪರ್, ವೆಬ್ ಸೈಟ್ ಗಳ ಮೇಲೆ ಕಣ್ಗಾವಲು, ಶಿವಮೊಗ್ಗ ಡಿಸಿ ಕಚೇರಿಯಲ್ಲಿ ಮೀಡಿಯಾ ಸೆಂಟರ್