SHIVAMOGGA LIVE NEWS | 24 APRIL 2023
SHIMOGA : ವಿಧಾನಸಭೆ ಚುನಾವಣೆಯ ನಾಮಪತ್ರ (Nomination) ಹಿಂಪಡೆಯುವ ಪ್ರಕ್ರಿಯೆಗೆ ಇವತ್ತು ಕೊನೆಯ ದಿನ. ಟಿಕೆಟ್ ಸಿಗದೆ ಮುನಿಸಿಕೊಂಡು ಬಂಡಾಯ ಸ್ಪರ್ಧೆ ಮಾಡಿದವರು, ಸ್ವತಂತ್ರವಾಗಿ ಸ್ಪರ್ಧಿಸಿದವರು ಚುನಾವಣಾ ಕಣದಲ್ಲಿ ಉಳಿಯುತ್ತಾರೋ? ಹಿಂದೆ ಸರಿಯುತ್ತಾರೋ? ಎಂಬ ಕುತೂಹಲಕ್ಕೆ ಇವತ್ತು ತೆರೆ ಬೀಳಲಿದೆ.
ಏ.24ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಹಾಗಾಗಿ ಜಿಲ್ಲೆಯಾದ್ಯಂತ ಇವತ್ತು ಯಾರೆಲ್ಲ ನಾಮಪತ್ರ ಹಿಂಪಡೆಯಬಹುದು, ಯಾರೆಲ್ಲ ಕಣದಲ್ಲಿ ಬಿಗಿಯಾಗಿ ಉಳಿಯಲಿದ್ದಾರೆ ಎಂಬ ಕುತೂಹಲ ಮೂಡಿದೆ. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.
ಅಂತಿಮವಾಗಿ ಕಣದಲ್ಲಿರುವವರೆಷ್ಟು?
ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಕ್ಕೆ 142 ನಾಮಪತ್ರ (Nomination) ಸಲ್ಲಿಕೆಯಾಗಿದ್ದವು. 11 ನಾಮಪತ್ರಗಳು ತಿರಸ್ಕೃತಗೊಂಡಿವೆ. ಸದ್ಯ 84 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಿವಮೊಗ್ಗ ಗ್ರಾಮಾಂತರದಲ್ಲಿ 14 ಅಭ್ಯರ್ಥಿಗಳು, ಭದ್ರಾವತಿ 16 ಅಭ್ಯರ್ಥಿಗಳು, ಶಿವಮೊಗ್ಗ 15 ಅಭ್ಯರ್ಥಿಗಳು, ತೀರ್ಥಹಳ್ಳಿ 6 ಅಭ್ಯರ್ಥಿಗಳು, ಶಿಕಾರಿಪುರ 12 ಅಭ್ಯರ್ಥಿಗಳು, ಸೊರಬ 10 ಅಭ್ಯರ್ಥಿಗಳು, ಸಾಗರ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಉಳಿಯುತ್ತಾರೋ? ಹಿಂದೆ ಸರಿಯುತ್ತಾರೋ?
ಟಿಕೆಟ್ ಸಿಗದೆ ಸಿಟ್ಟಾಗಿರುವ ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಅಂತಹವರನ್ನು ಸಮಾಧಾನಪಡಿಸಲು ಪಕ್ಷಗಳ ಮುಖಂಡರು ಪ್ರಯತ್ನ ನಡೆಸಿದ್ದಾರೆ. 40 ಮಂದಿ ಸ್ವತಂತ್ರ ಅಭ್ಯರ್ಥಿಗಳು ಕೂಡ ಅಖಾಡದಲ್ಲಿದ್ದಾರೆ. ಇವರು ಪಡೆಯುವ ಸಣ್ಣ ಮೊತ್ತದ ಮತಗಳು ಕೂಡ ದೊಡ್ಡ ಪರಿಣಾಮ ಉಂಟು ಮಾಡಲಿದೆ. ಈ ಹಿನ್ನೆಲೆ ಅವರನ್ನು ಚುನಾವಣಾ ಕಣದಿಂದ ಹಿಂದೆ ಸರಿಸುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ ಇವತ್ತು ಯಾರೆಲ್ಲ ಕಣದಲ್ಲಿಉಳಿಯಲಿದ್ದಾರೆ, ಯಾರೆಲ್ಲ ನಾಮಪತ್ರ ಹಿಂದಕ್ಕೆ ಪಡೆಯಲಿದ್ದಾರೆ ಎಂಬದು ಸ್ಪಷ್ಟವಾಗಲಿದೆ.
ಇದನ್ನೂ ಓದಿ – ಯಡಿಯೂರಪ್ಪ ಕುಟುಂಬದ ವಿರುದ್ಧ ಆಕ್ರೋಶ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಪ್ರಕಟ, ಶಾಂತವೀರಪ್ಪ ಗೌಡ ನಡೆ ಯಾವ ಕಡೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200