ನಾಮಪತ್ರ ಸಲ್ಲಿಸಿದರು ಉಪೇಂದ್ರ ನೇತೃತ್ವದ ಪಕ್ಷದ ಅಭ್ಯರ್ಥಿ, 17 ಸಾವಿರ ವೋಟ್ ಪಡೆದಿದ್ದ ಶಶಿಕುಮಾರ್ ಕೂಡ ಮತ್ತೆ ಕಣಕ್ಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | 02 ಏಪ್ರಿಲ್ 2019

ಉಪ ಚುನಾವಣೆಯಲ್ಲಿ ಅಚ್ಚರಿ ಅನಿಸುವಷ್ಟು ಮತ ಪಡೆದಿದ್ದ ಶಶಿಕುಮಾರ್ ಮತ್ತೆ ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ ರಿಯಲ್ ಸ್ಟಾರ್ ಉಪೇಂದ್ರ ಅವರ ಪಕ್ಷದಿಂದಲೂ ನಾಮಪತ್ರ ಸಲ್ಲಿಸಿದ್ದಾರೆ ಅಭ್ಯರ್ಥಿ.

ಒಂದಲ್ಲ ಒಂದಿನ ನಾನು ಎಂಪಿ ಆಗ್ತೀನಿ

ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಭದ್ರಾವತಿಯ ಶಶಿಕುಮಾರ್ ಎಸ್.ಗೌಡ, ಮತ್ತೊಮ್ಮೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಶಿಕುಮಾರ್, ಒಂದಲ್ಲ ಒಂದು ದಿನ ಶಿವಮೊಗ್ಗ ಕ್ಷೇತ್ರದ ಸಂಸದನಾಗುತ್ತೇನೆ ಅನ್ನುವ ವಿಶ್ವಾಸವಿದೆ ಎಂದರು.

55869266 817584018603020 8613841629805019136 n.jpg? nc cat=104& nc oc=AQkxhv9VaqXssLb8Q2i2JQcnEUHIcr5G1E1AE 8AtFYdT274QYSncA1KEdu4aBGrbGY& nc ht=scontent.fblr10 1

ಈಗಾಗಲೇ ಎರಡು ಬಾರಿ ಲೋಕಸಭೆ ಚುನಾವಣೆ, ಮೂರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಶಶಿಕುಮಾರ್ ಗೌಡ ಸ್ಪರ್ಧಿಸಿದ್ದರು. ಇತ್ತೀಚೆಗೆ, ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ 17 ಸಾವಿರ ಮತ ಪಡೆದು, ಮೂರನೇ ಸ್ಥಾನದಲ್ಲಿದ್ದರು.

ಉಪೇಂದ್ರ ನೇತೃತ್ವದ ಪಕ್ಷದಿಂದಲೂ ಅಭ್ಯರ್ಥಿ

56157993 817583978603024 5226538920749039616 n.jpg? nc cat=103& nc oc=AQmdZCQb8fk16mxnMk2g9z9dBWIi9tqbpqxg AhXwqz2wPoaz8feffieXR xnwOhqIE& nc ht=scontent.fblr10 1

ರಿಯಲ್ ಸ್ಟಾರ್ ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷದಿಂದಲೂ ಅಭ್ಯರ್ಥಿಯೊಬ್ಬರು ಕಣಕ್ಕಿಳಿದಿದ್ದಾರೆ. ಶಿವಮೊಗ್ಗದ ಶರಾವತಿ ನಗರದ ವೆಂಕಟೇಶ್, ಪ್ರಜಾಕೀಯದ ಅಭ್ಯರ್ಥಿಯಾಗಿದ್ದಾರೆ. ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದ ವೆಂಕಟೇಶ್, ಇವತ್ತು ನಾಮಪತ್ರ ಸಲ್ಲಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment