ಶಿವಮೊಗ್ಗ ಲೈವ್.ಕಾಂ | SHIMOGA NEWS | 2 APRIL 2021
2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗುವುದಿಲ್ಲ. ಆರು ತಿಂಗಳೋ ವರ್ಷವೋ ಮುಖ್ಯಮಂತ್ರಿ ಆಗಬೇಕು. ಈಗಿರುವ ಮುಖ್ಯಮಂತ್ರಿ ಬದಲಾದರಷ್ಟೆ ತಮಗೆ ಅವಕಾಶ ಸಿಗಲಿದೆ. ಆದ್ದರಿಂದಲೇ ಒಳಗಿನ ವಿಚಾರಗಳು, ಅವ್ಯವಹಾರಗಳ ಕುರಿತು ಈಶ್ವರಪ್ಪ ಅವರು ಮಾತನಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ, ಶಿವಮೊಗ್ಗದ ಮಾಜಿ ಶಾಸಕ ಪ್ರಸನ್ನ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನಕುಮಾರ್, ಪತ್ರದ ವಿಚಾರದಲ್ಲಿ ಮುಖ್ಯಮಂತ್ರಿ ಹೇಳುತ್ತಿರುವುದು ಸರಿಯಾದರೆ ಸಚಿವ ಈಶ್ವರಪ್ಪ ಅವರನ್ನು ಮಂತ್ರಿ ಮಂಡಲದಿಂದ ಕೈಬಿಡಬೇಕು. ಈಶ್ವರಪ್ಪ ಅವರು ಹೇಳಿದ್ದು ನಿಜ ಅನ್ನುವುದಾದರೆ ಮುಖ್ಯಮಂತ್ರಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಐಎಎಸ್ ಅಧಿಕಾರಿ ವರ್ಗಾಯಿಸಿದ್ದೇ ಸಾಧನೆ
ಸ್ಮಾರ್ಟ್ ಸಿಟಿ ಕೆಲಸ ಯಾವ ರೀತಿ ನಡೆಯುತ್ತಿವುದು ಶಿವಮೊಗ್ಗದ ಜನತೆಗೆ ಚನ್ನಾಗಿ ಗೊತ್ತಿದೆ. ಆದರೆ, ಈಶ್ವರಪ್ಪ ಅವರು ಶಾಸಕರಾಗುತ್ತಿದ್ದಂತೆ, ಸ್ಮಾರ್ಟ್ ಸಿಟಿ ಎಂಡಿ ಆಗಿದ್ದ ಐಎಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿದರು. ಅದುವೆ ಅವರ ಸಾಧನೆಯಾಗಿದೆ ಎಂದು ಪ್ರಸನ್ನ ಕುಮಾರ್ ಅರೋಪಿಸಿದರು.
ಐದು ರೂ. ಬಾಡಿಗೆ, ಒಂದು ರೂ ಮೇಂಟೆನೆನ್ಸ್
ಸಚಿವ ಈಶ್ವರಪ್ಪ ಅವರು ತಮ್ಮ ಪ್ರಭಾವ ಬಳಸಿ, ತಮ್ಮ ಮಗ ಮತ್ತು ಮೊಮ್ಮಗನ ಕಂಪನಿಗೆ, ಕಿಯೋನಿಕ್ಸ್ನಲ್ಲಿ 3960 ಚದರ ಅಡಿಯನ್ನು ಬಾಡಿಗೆಗೆ ಪಡೆದಿದ್ದಾರೆ. ಪ್ರತಿ ಚದರ ಅಡಿಗೆ ಐದು ರೂ. ಬಾಡಿಗೆ, ಒಂದು ರೂ. ನಿರ್ವಹಣೆ ಖರ್ಚಿನಲ್ಲಿ ಪಡೆಯಲಾಗಿದೆ ಎಂದು ಆರೋಪಿಸಿದರು.
ಕಾರ್ಪೊರೇಟರ್ಗಳಾದ ರಮೇಶ್ ಹೆಗ್ಡೆ, ಆರ್.ಸಿ.ನಾಯ್ಕ್, ರೇಖಾ ರಂಗನಾಥ್, ರಂಗನಾಥ್ ಸೇರಿದಂತೆ ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]