ಶಿವಮೊಗ್ಗ ಲೋಕಸಭೆ ಚುನಾವಣೆ‌, ಅಭ್ಯರ್ಥಿಗಳಿಗೆ ಸ್ವಂತ ವರದಿಗಾರರ ತಂಡ, ಕ್ಯಾಮರಾ ಟೀಮ್, ಏನಿವರ ಕೆಲಸ?

Published On : ಏಪ್ರಿಲ್ 26, 2024

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 26 APRIL 2024

ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣೆ ಪ್ರಚಾರ ಕಣ ರಂಗೇರುತ್ತಿದೆ. ಮತದಾರರನ್ನು ತಲುಪಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಈ ಮಧ್ಯೆ ತಮ್ಮ ಪ್ರಚಾರ ಸಭೆಗಳ ಮಾಹಿತಿಯನ್ನು ಮಾಧ್ಯಮಗಳು, ಜನರಿಗೆ ತಲುಪಿಸಲು ಸ್ವಂತ ವರದಿಗಾರರ ಪಡೆ, ಕ್ಯಾಮರಾ ಟೀಮ್‌ ನಿಯೋಜನೆ ಮಾಡಿಕೊಂಡಿದ್ದಾರೆ.

ವರದಿಗಾರರ ನೇಮಕ

Reporter team for Politiciansಪತ್ರಿಕೆ, ಮಾಧ್ಯಮಗಳಿಗೆ ವರದಿಗಾರರು ಇರುವುದು ಸಾಮಾನ್ಯ. ಆದರೆ ಶಿವಮೊಗ್ಗದಲ್ಲಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳು ತಮ್ಮ ಕಾರ್ಯಕ್ರಮದ ವರದಿಯನ್ನು ಜನರಿಗೆ ತಲುಪಿಸಲು ವರದಿಗಾರರನ್ನು ನೇಮಿಸಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿಗಳು, ಹಿರಿಯ ಪತ್ರಕರ್ತರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಏನೆಲ್ಲ ಕೆಲಸ ಮಾಡುತ್ತಾರೆ?

ಈ ವರದಿಗಾರರು ಅಭ್ಯರ್ಥಿಗಳ ಜೊತೆಗೆ ಸಭೆ, ಸಮಾರಂಭಕ್ಕೆ ತೆರಳುತ್ತಾರೆ. ಅಭ್ಯರ್ಥಿಗಳ ಭಾಷಣ, ಕಾರ್ಯಕ್ರಮಗಳ ಪ್ರಮುಖಾಂಶಗಳನ್ನು ವರದಿ ಮಾಡುತ್ತಾರೆ. ಅವುಗಳನ್ನು ಶಿವಮೊಗ್ಗ ಜಿಲ್ಲೆಯ ಮಾಧ್ಯಮಗಳು, ಅಭ್ಯರ್ಥಿಗಳ ಸಾಮಾಜಿಕ ಜಾಲತಾಣ, ಕಾರ್ಯಕರ್ತರಿಗೆ ವಾಟ್ಸಪ್‌ ಗ್ರೂಪ್‌ಗಳಿಗೆ ರವಾನಿಸುತ್ತಾರೆ. ಇದರಿಂದ ಅಭ್ಯರ್ಥಿಗಳ ಪ್ರಚಾರದ ಪ್ರತಿ ಅಪ್‌ಡೇಟ್‌ ಎಲ್ಲರಿಗು ತಲುಪಲಿದೆ ಎಂಬುದು ಅಭ್ಯರ್ಥಿಗಳ ಲೆಕ್ಕಾಚಾರ.

ಹೈಟೆಕ್‌ ಕ್ಯಾಮರಾ ಟೀಮ್‌

Camera Team for Politicansಸಭೆ, ಸಮಾರಂಭಗಳು, ಅಭ್ಯರ್ಥಿಗಳ ಕ್ಯಾಂಡಿಡ್‌ ಫೋಟೊ, ವಿಡಿಯೋಗಳನ್ನು ಸೆರೆ ಹಿಡಿಯಲು ಫೋಟೊ, ವಿಡಿಯೋಗ್ರಾಫರ್‌ಗಳನ್ನು ನೇಮಿಸಿಕೊಂಡಿದ್ದಾರೆ. ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಿಗೆ ಫೋಟೊ, ವಿಡಿಯೋಗಳನ್ನು ರವಾನಿಸುತ್ತಾರೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಮತ್ತು ಅವರನ್ನು ತಲುಪಲು ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ಶೇಷಾದ್ರಿಪುರಂದನಲ್ಲಿ ಮಟಮಟ ಮಧ್ಯಾಹ್ನ ಮನೆಯಿಂದ ಹೊರ ಬಂದ ಚಾಲಕನಿಗೆ ಕಾದಿತ್ತು ಆಘಾತ

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 26, 2024

Leave a Comment