ಶಿವಮೊಗ್ಗ ಲೈವ್.ಕಾಂ | BENAGALURU NEWS | 4 MARCH 2021
ಬಜೆಟ್ ಕಲಾಪದ ವೇಳೆ ಅಶಿಸ್ತು ತೋರಿಸಿದ್ದಾರೆ ಎಂಬ ಕಾರಣಕ್ಕೆ ಭದ್ರಾವತಿ ಶಾಸಕ ಸಂಗಮೇಶ್ವರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಒಂದು ವಾರ ಕಲಾಪದಿಂದ ಸಸ್ಪೆಂಡ್ ಮಾಡಿ ಸ್ಪೀಕರ್ ಆದೇಶ ಹೊರಡಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಭದ್ರಾವತಿ ಶಾಸಕರ ಅಶಿಸ್ತು ಏನು?
ಒಂದು ರಾಷ್ಟ್ರ, ಒಂದು ಚುನಾವಣೆ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯುತ್ತಿತ್ತು. ಈ ನೀತಿ ವಿರೋಧಿಸಿ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಆಗ ಶಾಸಕ ಸಂಗಮೇಶ್ವರ್ ಅವರು ಶರ್ಟ್ ತೆಗೆದಿದ್ದಾರೆ. ಇದು ಸ್ಪೀಕರ್ ಅವರನ್ನು ಕೆರಳಿಸಿತು.
ಭದ್ರಾವತಿ ಜನತೆಗೆ ಅವಮಾನ ಮಾಡ್ತಿದ್ದೀರ
ಕೆಂಡಾಮಂಡಲವಾದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸದನದಲ್ಲಿ ಇಷ್ಟು ಅಶಿಸ್ತು ಒಳ್ಳೆಯದಲ್ಲ. ಸಂಗಮೇಶ್ ನೀವೇನು ರಸ್ತೆಗೆ ಬಂದಿದ್ದೀರಾ. ಮೊದಲು ಸರಿಯಾಗಿರೋದನ್ನು ಕಲಿತುಕೊಳ್ಳಿ. ಹೇಗೆ ನಡೆದುಕೊಳ್ಳಬೇಕು ಅನ್ನೋದು ಗೊತ್ತಿಲ್ಲವಾ. ಭದ್ರಾವತಿ ಜನತೆಗೆ ಅಗೌರವ ಮಾಡುತ್ತಿದ್ದೀರ. ಹೀಗೆ ಮಾಡಿದರೆ ಹೊರಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದಕ್ಕೆ ಧ್ವನಿಗೂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಮಾನ ಮಾರ್ಯಾದ ಇಲ್ವೇನು ಎಂದು ಸಿಟ್ಟಾದರು.
ಮಧ್ಯ ಪ್ರವೇಶಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಶರ್ಟ್ ಧರಿಸುವಂತೆ ಸೂಚಿಸಿದರು ಎಂದ ಮಾಧ್ಯಮಗಳಲ್ಲಿ ವರದಿಯಾಗಿದೆ
ಸದನದಿಂದ ಸಂಗಮೇಶ್ವರ್ ಸಸ್ಪೆಂಡ್
ಅಶಿಸ್ತು ಪ್ರದರ್ಶಿಸಿದ್ದಕ್ಕಾಗಿ ಶಾಸಕ ಸಂಗಮೇಶ್ವರ್ ಅವರನ್ನು ಸದನದಿಂದ ಸಸ್ಪೆಂಡ್ ಮಾಡಲಾಗಿದೆ. ಈ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸದನದಲ್ಲಿ ಪ್ರಸ್ತಾಪಿಸಿದರು. ಧ್ವನಿ ಮತದ ಮೂಲಕ ಅಂಗೀಕಾರ ಮಾಡಲಾಯಿತು. ಬಳಿಕ ಸಂಗಮೇಶ್ವರ್ ಅವರನ್ನು ಒಂದು ವಾರ ಸದನದಿಂದ ಸಸ್ಪೆಂಡ್ ಮಾಡಲಾಗಿದೆ. ಮಾರ್ಚ್ 12ರವರೆಗೆ ಅವರು ಸದನದೊಳಗೆ ಪ್ರವೇಶಿಸುವುದನ್ನು ತಡೆ ಹಿಡಿಯಬೇಕು ಎಂದು ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ಘೋಷಿಸಿದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]